ಬೆಂಗಳೂರು –
ರಾಜ್ಯದಲ್ಲಿ ಆಗಸ್ಟ್ 23 ರಿಂದ ಶಾಲಾ ಕಾಲೇಜು ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಆಗಸ್ಟ್ 23 ರ ಒಳಗೆ ರಾಜ್ಯದ ಎಲ್ಲಾ ಶಿಕ್ಷಕರಿಗೆ ಬಿಇಓ ಕಚೇರಿ ಗಳಲ್ಲಿ ವ್ಯಾಕ್ಸಿನ್ ಕೊಡಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ. ಬೆಂಗಳೂರು ಹೊರವಲಯದ ಪ್ರವಾಸಿ ಮಂದಿರ ದಲ್ಲಿ ಮಾತನಾಡಿದ ಅವರು ಎಲ್ಲರ ಅಭಿಪ್ರಾಯ ಪಡೆದುಕೊಂಡು ಶಾಲಾ ಆರಂಭ ಮಾಡಲಾಗುತ್ತಿದೆ. ಎಂದರು.

ಕೊರೊನಾ ಮುಂದಿನ ದಿನಗಳಲ್ಲಿ ಜೀವನದ ಒಂದು ಭಾಗ ಆಗುತ್ತದೆ ಮತ್ತು ಅದರ ಜೊತೆಗೆ ಬದುಕು ಕಲಿಯಬೇಕು.ಕಳೆದ ಒಂದೂವರೆ ವರ್ಷದಿಂದ ಮಕ್ಕಳ ಶಿಕ್ಷಣ ಹೋಗಿರುವುದು ಎಲ್ಲರಿಗೂ ಗೊತ್ತಿದೆ.ಅಲ್ಲದೇ ಮಕ್ಕಳು ಶಿಕ್ಷಣದಿಂದ ದೂರ ಉಳಿಯುವ ಪರಿಸ್ಥಿತಿ ಬಂದಿತ್ತು. ಹಾಗಾಗಿ ತಜ್ಞರ ಅಭಿಪ್ರಾಯ ಪಡೆದು 9,10,11,12 ನೇ ತರಗತಿಗಳು ಪ್ರಾರಂಭ ಮಾಡುತ್ತಿದ್ದೇವೆ.ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ ಈ ಒಂದು ತರಗತಿಗಳನ್ನು ನೋಡಿ ಕೊಂಡು ಬರುವ ದಿನಗಳಲ್ಲಿ ನಾವು ಪ್ರಾಥಮಿಕ ಹಂತದ ಶಾಲೆಗಳ ಆರಂಭವನ್ನು ನಿರ್ಧಾರವನ್ನು ಮಾಡುತ್ತೇವೆ ಎಂದು ಹೇಳಿದರು.ಇನ್ನೂ ವ್ಯಾಕ್ಸಿನ್ ವ್ಯವಸ್ಥೆಯನ್ನು ಈಗಾಗಲೇ ಮಾಡಲಾಗಿದ್ದು ಯಾವ ಶಿಕ್ಷಕರು ಇನ್ನೂ ವ್ಯಾಕ್ಸಿನ್ ತಗೆದುಕೊಂಡಿಲ್ಲ ಅವರು ಬಿಇಓ ಕಚೇರಿಗಳಲ್ಲಿ ತಗೆದುಕೊಳ್ಳಬೇಕು ಎಂದರು.