ಹುಬ್ಬಳ್ಳಿ –
ಗಂಡು ಮೆಟ್ಟಿನ ಹುಬ್ಬಳ್ಳಿಯ ಐತಿಹಾಸಿಕ ಸಿದ್ದಾರೂಢ ಜಾತ್ರೆ ಬೆನ್ನಲ್ಲೇ ನಗರದಲ್ಲಿ ಮತ್ತೊಂದು ಜಾತ್ರೆ ವಿಜೃಂಭಣೆಯಿಂದ ನಡೆಯಿತು ಹೌದು ವೀರಾಪೂರ ಓಣಿಯ ರಾಯಚೋಟಿ ವೀರಭದ್ರೇಶ್ವರ ರಥೋತ್ಸವ ವಿಜ್ರಂಭಣೆ ಯಿಂದ ಜರುಗಿತು ವರ್ಷಕ್ಕೊಮ್ಮೆ ನಡೆಯುವ ಈ ಒಂದು ಜಾತ್ರೆಯಲ್ಲಿ ಕುಂಭ ಮೇಳ ಅನ್ನ ಪ್ರಸಾದ್ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮ ಗಳು ಅದ್ದೂರಿಯಾಗಿ ನಡೆದವು.
ಇನ್ನೂ ಈ ಒಂದು ಜಾತ್ರೆಯಲ್ಲಿ ವೀರಾಪೂರ ಬಡಾವಣೆಯ ನಿವಾಸಿಗಳೊಂದಿಗೆ ಹುಬ್ಬಳ್ಳಿಯ ಮೂಲೆ ಮೂಲೆಗಳಿಂದ ಆಗಮಿಸಿದ ಅಪಾರ ಸಂಖ್ಯೆಯ ಭಕ್ತರು ಜನಸ್ತೋಮ ಭಾಗವಹಿಸಿ ಉತತ್ತಿ ಹಣ್ಣುಗಳಿಂದ ತೇರಿಗೆ ತೂರಿ ಪೂಜೆ ಸಲ್ಲಿಸಿ ಆಶಿರ್ವಾದ ಪಡೆದುಕೊಂಡರು
ವೀರಭದ್ರೇಶ್ವರನ ಆಶಿರ್ವಾದ ಸದಾ ನಿಮ್ಮೆಲ್ಲರ ಮೇಲೆ ಇರಲಿ ಎಂದು ಬೇಡಿಕೊಂಡರು.
ಕಮೀಟಿಯ ಅಧ್ಯಕ್ಷರಾದ ಈರಣ್ಣ ಶಿಂತ್ರಿ,ಶೇಖರಗೌಡ ಪಾಟೀಲ್, ಸಿದ್ದಪ್ಪ ಮುತ್ತಣ್ಣನವರ,ಮಲ್ಲು ವೀರಕ್ತಮಠ, ರವಿ ಮುತ್ತಣ್ಣನವರ,ಪ್ರಭು ನವಲಗುಂದ ಮಠ,ಅಣ್ಣಪ್ಪ ಗೋಕಾಕ, ಶಶಿಕಾಂತ್ ಬೆಜವಾಡ,ಮಾರುತಿ ಚಾಕಲಬ್ಬಿ, ಪ್ರವೀಣ ಕುಬಸದ,ಶಿವಾನಂದ ಮುತ್ತಣ್ಣನವರ, ಸೇರಿದಂತೆ ಹಲವರು ಪಾಲ್ಗೊಂಡಿದ್ದು ಕಂಡು ಬಂದಿತು
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..