This is the title of the web page
This is the title of the web page

Live Stream

[ytplayer id=’1198′]

October 2024
T F S S M T W
 12
3456789
10111213141516
17181920212223
24252627282930
31  

| Latest Version 8.0.1 |

State News

ಹಿರಿಯ ಪತ್ರಕರ್ತ ರವಿ ಬೆಳಗೆರೆ ನಿಧನ

WhatsApp Group Join Now
Telegram Group Join Now

ಹಿರಿಯ ಪತ್ರಕರ್ತ ಅಕ್ಷರಬ್ರಹ್ಮ ನಿಧನ

ಬೆಂಗಳೂರು –

ನಾಡಿನ ಹಿರಿಯ ಪತ್ರಕರ್ತರಲ್ಲಿ ಒರ್ವರಾಗಿರುವ
62 ವರ್ಷದ ರವಿ ಬೆಳಗೆರೆ ಮರಳಿ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ.

ಬೆಂಗಳೂರಿನ ಪದ್ಮನಾಭನಗರದಲ್ಲಿರುವ ತಮ್ಮ ಹಾಯ್ ಬೆಂಗಳೂರು ಕಚೇರಿಯಲ್ಲಿ ರಾತ್ರಿ ಊಟ ಮುಗಿಸಿ, ನಿದ್ರೆ ಮಾಡುತ್ತಿದ್ದಾಗ ಅಲ್ಲೇ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.ಖ್ಯಾತ ಪತ್ರಕರ್ತ, ಅಕ್ಷರ ಲೋಕದ ಮಾಂತ್ರಿಕ ಎಂದೇ ಹೆಸರಾಗಿದ್ದ ರವಿ ಬೆಳಗೆರೆಗೆ ಅವರಿಗೆ 62 ವರ್ಷ ವಯಸ್ಸಾಗಿತ್ತು.ಮಧ್ಯರಾತ್ರಿ 12 ಗಂಟೆಗೆ ಕಚೇರಿಯಲ್ಲೇ ಹೃದಯಾಘಾತಕ್ಕೊಳಗಾಗಿದ್ದ ಅವರನ್ನು ಕೂಡಲೇ ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ನೀಡುವ ಮುನ್ನವೇ ಬದುಕುಳಿಯಲಿಲ್ಲ.ಹಾಯ್ ಬೆಂಗಳೂರು ವಾರಪತ್ರಿಕೆ ಮೂಲಕ ಭಾರಿ ಖ್ಯಾತಿ ಗಳಿಸಿದ್ದ ರವಿ ಬೆಳಗೆರೆ, ಕನ್ನಡದ ಪ್ರಮುಖ ಬರಹಗಾರರ ಪೈಕಿ ಮೊದಲ ಸಾಲಿನಲ್ಲಿ ನಿಲ್ಲುವಂತವರಾಗಿದ್ದರು. ಪ್ರಾರ್ಥನಾ ಶಾಲೆ ಅವರ ಅದ್ಭುತ ಕೊಡುಗೆ.ಭೂಗತ ಲೋಕದಲ್ಲಿ ಅವರ ಬರಹ ಭಾರಿ ಪ್ರಸಿದ್ಧವಾಗಿತ್ತು. ಪ್ರತಿ ವಿಷಯದ ಕುರಿತು ಸಹ ತಮ್ಮದೇ ನಿಲುವನ್ನು ರವಿ ಬೆಳಗೆರೆ ಪ್ರತಿಪಾದಿಸುತ್ತಿದ್ದರು 15 ಮಾರ್ಚ್ 1958 ಬಳ್ಳಾರಿಯಲ್ಲಿ ಜನಿಸಿದ್ದ ಅವರು, ಬಳ್ಳಾರಿಯಲ್ಲಿ ಶಿಕ್ಷಣ ಮುಗಿಸಿದರು.

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದರು. ಅಲ್ಪಕಾಲ ಉಪನ್ಯಾಸಕರಾಗಿ ವೃತ್ತಿ ಮಾಡಿದರು.ಜೊತೆಗೆ ಅವರು ಕನ್ನಡ ಸಾಹಿತಿ, ಚಿತ್ರಕಥೆ ಬರಹಗಾರ, ಈ ಟಿವಿ ವಾಹಿನಿಯ ಜನಪ್ರಿಯ ಕ್ರೈಂ ಡೈರಿ ಕಾರ್ಯಕ್ರಮದ ನಿರೂಪಕರಾಗಿ ಹಾಗೂ ಜನಶ್ರೀ ವಾಹಿನಿಯ ಮುಖ್ಯಸ್ಥರಾಗಿ, ಕಾರ್ಯಕ್ರಮಗಳ ನಿರೂಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.ಕನ್ನಡದಲ್ಲಿ ಹಲವಾರು ಪುಸ್ತಕಗಳನ್ನು ಬರೆದಿರುವ ಮತ್ತು ಭಾಷಾಂತರಿಸಿರುವ ರವಿ ಬೆಳಗೆರೆ, ಭಾವನಾ ಪ್ರಕಾಶನ, ಭಾವನಾ ಆಡಿಯೋ ರೀಚ್ ಮತ್ತು ಪ್ರಾರ್ಥನಾ ಶಾಲೆಯ ಸಂಸ್ಥಾಪಕರಾಗಿದ್ದರು. ಸಂಯುಕ್ತ ಕರ್ನಾಟಕ, ಕರ್ಮವೀರ ಪತ್ರಿಕೆಗಳಲ್ಲಿ ಸಹ ಕೆಲಸ ಮಾಡಿದ್ದರು.ಧಾರವಾಡದಲ್ಲಿ ಓದಿದ ರವಿ ಬೆಳಗೆರೆ ಹುಬ್ಬಳ್ಳಿ ಧಾರವಾಡ ದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು.

ರವಿ ಬೆಳಗೆರೆ ಕೃತಿಗಳು

ಕಥಾ ಸಂಕಲನ
ದಾರಿ, 1980
ಪಾ.ವೆಂ. ಹೇಳಿದ ಕಥೆ, 1995
ಒಟ್ಟಾರೆ ಕಥೆಗಳು, 2001
ಕಾದಂಬರಿ
ಗೋಲಿಬಾರ್, 1983
ಅರ್ತಿ, 1990
ಮಾಂಡೋವಿ, ಸೆಪ್ಟಂಬರ್ 1996
ಮಾಟಗಾತಿ, 1998
ಒಮರ್ಟಾ, ಜನವರಿ 1999
ಸರ್ಪ ಸಂಬಂಧ, ಜೂನ್ 2000
ಹೇಳಿ ಹೋಗು ಕಾರಣ, ಸೆಪ್ಟಂಬರ್ 2003
ನೀ ಹಿಂಗ ನೋಡಬ್ಯಾಡ ನನ್ನ, ಸೆಪ್ಟಂಬರ್ 2003
ಗಾಡ್‌ಫಾದರ್ , ಮಾರ್ಚ್ 2005
ಕಾಮರಾಜ ಮಾರ್ಗ, ನವೆಂಬರ್ 2010
ಹಿಮಾಗ್ನಿ, ೨೦೧೨
ಅನುವಾದ
ವಿವಾಹ, 1983
ನಕ್ಷತ್ರ ಜಾರಿದಾಗ, 1984
ಹಿಮಾಲಯನ್ ಬ್ಲಂಡರ್, ಸೆಪ್ಟಂಬರ್1999
ಕಂಪನಿ ಆಫ್ ವಿಮೆನ್, ಜನವರಿ 2000
ಟೈಂಪಾಸ್, ಜನವರಿ 2001
ರಾಜ ರಹಸ್ಯ, ನವೆಂಬರ್ 2002
ಹಂತಕಿ ಐ ಲವ್ ಯೂ, ಜನವರಿ 2007
ದಂಗೆಯ ದಿನಗಳು, ಮಾರ್ಚ್ 2008
ದೇಶ-ಇತಿಹಾಸ-ಯುದ್ಧ
ಕಾರ್ಗಿಲ್‌ನಲ್ಲಿ ಹದಿನೇಳು ದಿನ, ಸೆಪ್ಟಂಬರ್ 1999
ಬ್ಲ್ಯಾಕ್ ಫ್ರೈಡೆ (ಅನುವಾದ) ಆಗಸ್ಟ್ 2005
ರೇಷ್ಮೆ ರುಮಾಲು (ಅನುವಾದ) ಆಗಸ್ಟ್ 2007
ಇಂದಿರೆಯ ಮಗ ಸಂಜಯ, ಸೆಪ್ಟಂಬರ್ 2002
ಗಾಂಧೀ ಹತ್ಯೆ ಮತ್ತು ಗೋಡ್ಸೆ, ಸೆಪ್ಟಂಬರ್ 2003
ಡಯಾನಾ, ಜನವರಿ 2007
ಟೆಗ್‌ಫಾನ್‌ ಪಾಕಿಸ್ತಾನ
ಅವನೊಬ್ಬನಿದ್ದ ಗೋಡ್ಸೆ
ಮೇಜರ್ ಸಂದೀಪ್ ಹತ್ಯೆ
ಅನಿಲ್ ಲಾಡ್ ಮತ್ತು ನಲವತ್ತು ಕಳ್ಳರು
ಮುಸ್ಲಿಂ
ಜೀವನ ಕಥನ
ಪ್ಯಾಸಾ, 1991
ಪಾಪದ ಹೂವು ಫೂಲನ್, ಆಗಸ್ಟ್2001
ಸಂಜಯ, 2000
ಚಲಂ (ಅನುವಾದ) ಮಾರ್ಚ್ 2008
ಕ್ರೈಂ
ಹತ್ಯಾಕಥನ
ರಾಜೀವ್ ಹತ್ಯೆ ಏಕಾಯಿತು? ಹೇಗಾಯಿತು? 1991
ಮೈಸೂರಿನ ಸೀರಿಯಲ್ ಕಿಲ್ಲರ್ ರವೀಂದ್ರ ಪ್ರಸಾದ್, 1998
ರಂಗವಿಲಾಸ್ ಬಂಗಲೆಯ ಕೊಲೆಗಳು
ಬಾಬಾ ಬೆಡ್‌ರೂಂ ಹತ್ಯಾಕಾಂಡ (ತನಿಖಾ ವರದಿ) ಜನವರಿ 2007
ಪ್ರಮೋದ್ ಮಹಾಜನ್ ಹತ್ಯೆ (ಅನುವಾದ) ಅಕ್ಟೋಬರ್ 2012
ಭೂಗತ ಇತಿಹಾಸ
ಪಾಪಿಗಳ ಲೋಕದಲ್ಲಿ ಭಾಗ -1, 1995
ಪಾಪಿಗಳ ಲೋಕದಲ್ಲಿ ಭಾಗ 2, ಸೆಪ್ಟಂಬರ್ 1997
ಭೀಮಾ ತೀರದ ಹಂತಕರು, ಮೇ 2001
ಪಾಪಿಗಳ ಲೋಕದಲ್ಲಿ, 2005
ಡಿ ಕಂಪನಿ, 2008
ಬದುಕು
ಖಾಸ್‌ಬಾತ್ 96, 1997
ಖಾಸ್‌ಬಾತ್ 97, ಸೆಪ್ಟಂಬರ್ 1997
ಖಾಸ್‌ಬಾತ್ 98, ಸೆಪ್ಟಂಬರ್ 1998
ಖಾಸ್‌ಬಾತ್ 99, ಅಕ್ಟೋಬರ್ 2003
ಖಾಸ್‌ಬಾತ್ 2000, ಅಕ್ಟೋಬರ್ 2003
ಖಾಸ್‌ಬಾತ್ 2001, ಜನವರಿ 2007
ಖಾಸ್‌ಬಾತ್ 2002, ಜನವರಿ 2008
ಖಾಸ್‌ಬಾತ್ 2003
ಅಂಕಣ ಬರೆಹಗಳ ಸಂಗ್ರಹ
ಜೀವನ ಪಾಠ
ಬಾಟಮ್ ಐಟಮ್ ಭಾಗ 1, ಫೆಬ್ರವರಿ2002
ಬಾಟಮ್ ಐಟಮ್ 2, ಅಕ್ಟೋಬರ್2003
ಬಾಟಮ್ ಐಟಮ್ ಭಾಗ 3, ಡಿಸೆಂಬರ್ 2006
ಬಾಟಂ ಐಟಮ್ 4
ಬಾಟಂ ಐಟಮ್ 5
ಪ್ರೀತಿ ಪತ್ರಗಳು
ಲವಲವಿಕೆ -1, ಡಿಸೆಂಬರ್ 1998
ಲವಲವಿಕೆ -2, ಸೆಪ್ಟಂಬರ್ 2004
ಲವಲವಿಕೆ -3
ಲವಲವಿಕೆ -4
ಕವನ ಸಂಕಲನ
ಅಗ್ನಿಕಾವ್ಯ, 1983
ಇತರೆ
ಕೇಳಿ, ಜೂನ್ 2001
ಮನಸೇ ಆಡಿಯೋ ಸಿಡಿ ಜನವರಿ 2007
ಫಸ್ಟ್ ಹಾಫ್
ಅಮ್ಮ ಸಿಕ್ಕಿದ್ಲು, ೨೦೧೨
ಇದು ಜೀವ: ಇದುವೇ ಜೀವನ, ೨೦೧೨
ಏನಾಯ್ತು ಮಗಳೇ, ಡಿಸೆಂಬರ್ 2013

ಹೀಗೆ ಹಲವಾರು ಪುಸ್ತಕಗಳನ್ನು ಬರೆದಿದ್ದು ಇವರ ಸಾಧನೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮಾಧ್ಯಮ ಅಕ್ಯಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಗಳು ಅರೆಸಿ ಬಂದಿವೆ.ಇನ್ನೂ ಇಬ್ಬರು ಪುತ್ರರು ಇಬ್ಬರು ಪುತ್ರಿಯರಿದ್ದಾರೆ.ರವಿ ಬೆಳಗೆರೆ ನಿಧನದಿಂದ ಮಾಧ್ಯಮ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದ್ದು ನಾಡಿನ ಹಿರಿಯರು ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ.


Google News

 

 

WhatsApp Group Join Now
Telegram Group Join Now
Suddi Sante Desk