ಬೆಂಗಳೂರು –

ಕೋವಿಡ್ ಮಹಾಮಾರಿಗೆ ರಾಜ್ಯದಲ್ಲಿ ಮತ್ತೊರ್ವ ಯುವ ಉತ್ಸಾಹಿ ಶಿಕ್ಷಕಿ ಬಲಿಯಾಗಿದ್ದಾರೆ. ಹೌದು ಬೆಂಗಳೂರು ದಕ್ಷಿಣ ವಲಯ 4 ರ ಹೂಡಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಶ್ರೀಮತಿ ಜಲಜಾಕ್ಷಿ ಅವರೇ ಮೃತರಾದವರಾಗಿದ್ದಾರೆ.ಶಿಕ್ಷಕಿಯ ಹುದ್ದೆ ಯೊಂದಿಗೆ ತಾಲ್ಲೂಕು ಶಿಕ್ಷಕರ ಘಟಕದ ಉಪಾಧ್ಯಕ್ಷ ರಾಗಿ ಶಿಕ್ಷಕರ ಸಮಸ್ಯೆ ಹೋರಾಟದ ಕುರಿತಂತೆ ಧ್ವನಿಯಾಗಿದ್ದ ಜಲಜಾಕ್ಷಿಯವರು ಕೋವಿಡ್ ಕರ್ತ ವ್ಯವನ್ನು ಮಾಡ್ತಾ ಇದ್ದರು.ಮೊದಲು ಇವರ ಪತಿಯ ವರಿಗೆ ಸೋಂಕು ಕಾಣಿಸಿಕೊಂಡು ಆಸ್ಪತ್ರೆಗೆ ದಾಖ ಲಾಗಿ ಅವರು ಈಗಾಗಲೇ ಗುಣಮುಖರಾಗಿ ನಂತರ ಇವರಿಗೆ ಸೋಂಕು ಕಾಣಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದರು.

ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದ ಇವರು ಇನ್ನೇನು ಗುಣಮುಖರಾಗುತ್ತಾರೆ ಎಂದುಕೊಳ್ಳಲಾಗಿತ್ತು ಎರಡು ಬಾರಿ ಪ್ಲಾಸ್ಮಾ ಎರಡು ಬಾರಿ ಡಯಾಲಿಸಸ್ ಮಾಡಿದರು ಕೂಡಾ ಕೆಚ್ಚೆದೆಯ ಹೋರಾಟಗಾರ್ತಿ ಶಿಕ್ಷಕಿ ನಾಯಕಿ ಬದುಕಲಿಲ್ಲ.ಎಲ್ಲವನ್ನೂ ನೆನಪಾಗಿಸಿ ಅಗಲಿದ್ದಾರೆ.

ಇನ್ನೂ ಮೃತರಾದ ಇವರ ನಿಧನಕ್ಕೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಂಗಳೂರು ದಕ್ಷಿಣ ವಲಯ 4 ರ ಸರ್ವ ಸದಸ್ಯರು ಸಂತಾಪವನ್ನು ಸೂಚಿಸಿ ದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತರಾಯ್, ಅಧ್ಯಕ್ಷರಾದ ಪ್ರಸನ್ನ ಮೂರ್ತಿ,ಗೋವಿಂದಪ್ಪ ಉಪಾಧ್ಯಕ್ಷರು,ಶ್ರೀಮತಿ ಉಮಾದೇವಿ ಪ್ರಧಾನ ಕಾರ್ಯದರ್ಶಿ, ಮಂಜುನಾಥ ಕೋಶಾಧ್ಯಕ್ಷರು, ನಾಗರಾಜ್ ಸಹಕಾರ್ಯದರ್ಶಿ,ಶ್ರೀಮತಿ ಸಂಪೂರ್ಣ ಸಹಕಾರ್ಯದರ್ಶಿ,ಶ್ರೀಮತಿ ಹೇಮಲತಾ ಸಂಘಟನಾ ಕಾರ್ಯದರ್ಶಿ, ವೇದಮೂರ್ತಿ ಸಂಘಟನಾ ಕಾರ್ಯದರ್ಶಿ.ಮಂಜುನಾಥ ನಾಯ್ಕ್ ನಿರ್ದೇಶಕರು.ನಂಜುಂಡಪ್ಪ ಜಿಲ್ಲಾ ಉಪಾಧ್ಯಕ್ಷರು. ಮಧುಕುಮಾರ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ. ವೆಂಕಟರಾಮಯ್ಯ ಜಿಲ್ಲಾ ಕೋಶಾಧ್ಯಕ್ಷ. ಬೆಂಗಳೂರು ದಕ್ಷಿಣ ಜಿಲ್ಲೆ. ಜೊತೆಗೆ ಬೆಂಗಳೂರು ದಕ್ಷಿಣ ವಲಯ 4 ರ ಸಮಸ್ತ ಪ್ರಾಥಮಿಕ ಶಾಲಾ ಶಿಕ್ಷಕರು ಸಂತಾಪವನ್ನು ಸೂಚಿಸಿದ್ದಾರೆ.ಮಹಾನ್ ನಾಯಕಿ ಶಿಕ್ಷಕಿಯನ್ನು ಕಳೆದುಕೊಂಡು ಭಾವಪೂರ್ಣ ನಮನವನ್ನು ಸಲ್ಲಿಸಿ ಸಂತಾಪವನ್ನು ಸೂಚಿಸಿದ್ದಾರೆ.