This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

State News

ಶಿಕ್ಷಕರ ಸಮಸ್ಯೆಗಳ ಕುರಿತು CM ಗೆ ಪತ್ರ ಬರೆದ ವಿಧಾನ ಪರಿಷತ್ ಸಭಾಪತಿ – ಶಿಕ್ಷಕರ ಪರವಾಗಿ ಧ್ವನಿ ಎತ್ತಿದರು ಬಸವರಾಜ ಹೊರಟ್ಟಿ…..

WhatsApp Group Join Now
Telegram Group Join Now

ಹುಬ್ಬಳ್ಳಿ –

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮತ್ತೆ ರಾಜ್ಯದಲ್ಲಿ ಶಿಕ್ಷಕರ ಪರ ಧ್ವನಿ ಎತ್ತಿದ್ದಾರೆ ಹೌದು ಕೊರೋನಾ ಸಂದರ್ಭದಲ್ಲಿ ಎದುರಿಸುತ್ತಿ ರುವ ಸಮಸ್ಯೆ, ಅವರಿಗೆ ಆಗುತ್ತಿರುವ ಅನ್ಯಾಯಗಳ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರೇ…..

ರಾಜ್ಯದಲ್ಲಿ ಸುಮಾರು 60 ಸಾವಿರಕ್ಕೂ ಹೆಚ್ಚು ಶಿಕ್ಷ ಕರು ಕೋವಿಡ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವ ರಲ್ಲಿ ಸರಕಾರಿ, ಅನುದಾನಿತ ಹಾಗೂ ಖಾಸಗಿ ಅನು ದಾನ ರಹಿತ ಮತ್ತು ಅತಿಥಿ (ಗುತ್ತಿಗೆ) ಶಿಕ್ಷಕರು ಸೇರಿ ದ್ದಾರೆ.ಈ ಎಲ್ಲಾ ಶಿಕ್ಷಕರನ್ನು ಆಸ್ಪತ್ರೆ, ರೈಲು ಮತ್ತು ಬಸ್ ನಿಲ್ದಾಣ, ಚೆಕ್‍ ಪೋಸ್ಟ್ ಗಳಲ್ಲಿ ಶಿಕ್ಷಕರನ್ನು ನಿಯೋಜಿಸಲಾಗಿದೆ ಕೋವಿಡ್ ವಾರ್‌ ರೂಮ್ ಸಹಾಯವಾಣಿಯಲ್ಲಿ ಇವರು ಕೆಲಸ ಮಾಡುತ್ತಿರು ವುದಲ್ಲದೇ ಸೋಂಕಿತರ ಮನೆಗೇ ಹೋಗಿ ಅವರ ಮತ್ತು ಪ್ರಾಥಮಿಕ, ದ್ವಿತೀಯ ಸಂಪರ್ಕಿತರ ವಿವರಗ ಳನ್ನು ಸಂಗ್ರಹಿಸಿ ಅವರ ಕುಟುಂಬದವರೊಂದಿಗೆ ಫೋಟೋ ತೆಗೆಸಿ, ಅದನ್ನು ಸಂಬಂಧಪಟ್ಟವರಿಗೆ ರವಾನಿಸುವ ಕೆಲಸದಲ್ಲಿ ತಮ್ಮ ಜೀವದ ಹಂಗು ತೊರೆದು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಆದರೆ ದುರ್ದೈವದ ಸಂಗತಿ ಎಂದರೆ, ಕರ್ತವ್ಯ ನಿರತ ಶಿಕ್ಷಕರ ಸುರಕ್ಷತೆ ಕುರಿತಂತೆ ತಮಗೆ ಹತ್ತಾರು ಪತ್ರಗಳ ಮೂಲಕ ಹಲವಾರು ಸಲಹೆಗಳನ್ನು ನೀಡಿ ಆಗ್ರಹಿಸಿ ದ್ದರೂ ಇದುವರೆಗೂ ಸರಕಾರ ಈ ಬಗ್ಗೆ ಅಸಡ್ಡೆ ವಹಿಸಿರುವುದು ನನ್ನ ಮನಸ್ಸಿಗೆ ತುಂಬಾ ನೋವುಂ ಟುಮಾಡಿದೆ.

ಕರ್ತವ್ಯದ ವೇಳೆ ಮೃತಪಟ್ಟ ಶಿಕ್ಷಕರ ಕುಟುಂಬಕ್ಕೆ ರೂ.30 ಲಕ್ಷ ಪರಿಹಾರ ಕೊಡುವುದು ಒಂದೆಡೆ ಇರಲಿ ಈ ಶಿಕ್ಷಕರಿಗೆ ಕನಿಷ್ಠ ಮಾಸ್ಕ್, ಸ್ಯಾನಿಟೈಜರ್, ಗ್ಲೌಜ್‍ ನಂತಹ ಸುರಕ್ಷತಾ ಸಾಮಗ್ರಿಗಳನ್ನು ಸರಕಾರ ಒದಗಿಸುತ್ತಿಲ್ಲ.ಶಿಕ್ಷಕರು ಸೋಂಕಿತರ ನೇರ ಸಂಪರ್ಕ ಕ್ಕೆ ಬರುವಂತಹ ಕಾರ್ಯಗಳನ್ನು ಮಾಡುತ್ತಿದ್ದಾರೆ. ಆದರೆ ಅವರಿಗೆ ಕನಿಷ್ಠ ಸುರಕ್ಷತಾ ಪರಿಕರಗಳನ್ನು ಒದಗಿಸುತ್ತಿಲ್ಲ.ಶಿಕ್ಷಕರು ಮುಂಚೂಣಿ ಕಾರ್ಯಕರ್ತ ರು ಎಂದು ಸರಕಾರ ಘೋಷಿಸಿದ್ದರೂ ಅಧಿಕೃತವಾಗಿ ಕಂದಾಯ ಇಲಾಖೆಯಿಂದ ಆದೇಶ ಹೊರಬಿದ್ದಿಲ್ಲ. ಯಾವುದೇ ಸೌಲಭ್ಯ ಕೇಳಬೇಕು ಎಂದರೆ ಸಂಬಂಧ ಪಟ್ಟ ಜಿಲ್ಲಾಡಳಿತಗಳಿಗೆ ಕೇಳಬೇಕು.ಶಿಕ್ಷಣ ಇಲಾಖೆ ಯಿಂದ ಸರಿಯಾದ ಸ್ಪಂದನೆ ಇಲ್ಲ ಎನ್ನುವ ಭಾವನೆ ಶಿಕ್ಷಕರ ವಲಯದಿಂದ ಕೇಳಿಬರುತ್ತಿದೆ. ಕೋವಿಡ್ ಹಿನ್ನೆಲೆಯಲ್ಲಿ ರಜಾ ದಿನಗಳಲ್ಲಿಯೂ ಶಿಕ್ಷಕರು ಕೆಲಸ ಮಾಡುತ್ತಿದ್ದು ಅವರಿಗೆ ಗಳಿಕೆ ರಜೆ ಸೌಲಭ್ಯವನ್ನು ಇದುವರೆಗೂ ನೀಡಿರುವದಿಲ್ಲ ಎನ್ನುವುದು ತೀವ್ರ ವಿಷಾದನೀಯ ಸಂಗತಿ.

ಮತ್ತೊಂದು ಪ್ರಮುಖ ವಿಷಯವೆಂದರೆ, ಕೋವಿಡ್ ಸಂದರ್ಭದಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಶಿಕ್ಷಕ ರನ್ನೂ ಸಮಾನ ರೀತಿಯಲ್ಲಿ ಕಾಣಬೇಕು ಅವರ ಮಧ್ಯೆ ಸರಕಾರಿ, ಅನುದಾನಿತ, ಖಾಸಗಿ ಅನುದಾನ ರಹಿತ ಮತ್ತು ಗುತ್ತಿಗೆ ಹೀಗೆ ಯಾವುದೇ ರೀತಿಯ ತಾರತಮ್ಯ ಸಲ್ಲದು, ಈ ಕುರಿತು ತಾವು ಖುದ್ದಾಗಿ ಅಧಿಕಾರಿಗಳಿಗೆ ಸೂಕ್ತ ಸೂಚನೆ ನೀಡಬೇಕೆಂದು ಒತ್ತಾಯ ಪೂರ್ವಕವಾಗಿ ತಮ್ಮನ್ನು ಕೋರಿಕೊಳ್ಳು ತ್ತೇನೆ.ಒಂದು ವೇಳೆ ದುರದೃಷ್ಟವಶಾತ್ ಅನುದಾನಿತ ಅಥವಾ ಸರಕಾರಿ ಶಿಕ್ಷಕರು ಕೋವಿಡ್ ಕಾರ್ಯದ ಸಂದರ್ಭದಲ್ಲಿ ಸೋಂಕಿತರಾಗಿ ಮೃತಪಟ್ಟರೆ ಅವರ ಕುಟುಂಬಕ್ಕೆ ನೀಡುವ ರೂ.30 ಲಕ್ಷ ಪರಿಹಾರ ಹಾಗೂ ಇನ್ನಿತರೆ ಪರಿಹಾರ ಸೌಲಭ್ಯವನ್ನು ಇತರೆ ಅಂದರೆ ಖಾಸಗಿ ಅನುದಾನ ರಹಿತ ಹಾಗೂ ಗುತ್ತಿಗೆ ಅಥವಾ ಅತಿಥಿ ಶಿಕ್ಷಕರನ್ನು ಸಹ ಕೋವಿಡ್ ವಾರಿ ಯರ್ಸ್‌ ಗಳೆಂದು ಪರಿಗಣಿಸಬೇಕು ಹಾಗೂ ಕೋವಿ ಡ್ ಕಾರ್ಯದ ಸಂದರ್ಭದಲ್ಲಿ ದುರ್ಘಟನೆಗೆ ತುತ್ತಾ ಗಿ ಮರಣ ಹೊಂದಿದರೆ, ಅವರ ಕುಟುಂಬಕ್ಕೂ ರೂ. 30 ಲಕ್ಷ ಪರಿಹಾರ ಸೇರಿದಂತೆ ಇತರ ಎಲ್ಲಾ ಸೌಲಭ್ಯ ಗಳನ್ನು ನೀಡುವಂತೆ ತಮ್ಮಲ್ಲಿ ಆಗ್ರಹಪೂರ್ವಕವಾಗಿ ಒತ್ತಾಯಿಸುತ್ತಾ ಕೂಡಲೇ ಸಂಬಂಧಪಟ್ಟ ಅಧಿಕಾರಿ ಗಳಿಗೆ ಆದೇಶ ಹೊರಡಿಸುವಂತೆ ಸೂಚಿಸಬೇಕೆಂದು ಕೋರುತ್ತೇನೆ.ಕಳೆದ ವಾರ ತಮಗೆ ಬರೆದ ಪತ್ರವೊಂ ದರಲ್ಲಿ ಆಗ್ರಹಪಡಿಸಿದಂತೆ, ಎಲ್ಲಾ ಶಿಕ್ಷಕರನ್ನೂ ಮುಂಚೂಣಿ ಕಾರ್ಯಕರ್ತರು ಎಂದು ಪರಿಗಣಿಸಿ ಲಸಿಕೆ ನೀಡುವುದಲ್ಲದೇ ಅವರ ಕುಟುಂಬಕ್ಕೂ ಆದ್ಯತೆ ಮೇರೆಗೆ ಲಸಿಕೆ ನೀಡಬೇಕು ಹಾಗೂ ಸರಕಾ ರಿ, ಅನುದಾನಿತ, ಖಾಸಗಿ ಅನುದಾನರಹಿತ, ಗುತ್ತಿಗೆ ಅಥವಾ ಅತಿಥಿ ಶಿಕ್ಷಕರು ಕೋವಿಡ್ ನಿಯಂತ್ರಣ ಕ್ಕಾಗಿ ನಿಸ್ವಾರ್ಥತೆಯಿಂದ ಹಗಲಿರುಳು ಶ್ರಮಿಸು ತ್ತಿದ್ದು, ಕರ್ತವ್ಯದ ವೇಳೆ ಒಂದು ವೇಳೆ ಸೋಂಕಿಗೆ ತುತ್ತಾದ ಶಿಕ್ಷಕರಿಗೆ ಯಾವುದೇ ತಾರತಮ್ಯ ಮಾಡ ದೇ ಉತ್ತಮ ಚಿಕಿತ್ಸೆಗೆ ವ್ಯವಸ್ಥೆ ಮಾಡುವುದರ ಜೊತೆಗೆ ಶಿಕ್ಷಕರಿಗಾಗಿಯೇ ಪ್ರತ್ಯೇಕ ಹಾಸಿಗೆಗಳನ್ನು ಕಾಯ್ದಿರಿಸಿ ಅವರ ಆರೋಗ್ಯ ರಕ್ಷಣೆಗೆ ಸರಕಾರ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಮತ್ತೊಮ್ಮೆ ಈ ಮೂಲಕ ಆಗ್ರಹಪೂರ್ವಕವಾಗಿ ಕೋರುತ್ತೇನೆ.

ಇಂತಿ ತಮ್ಮ. (ಬಸವರಾಜ ಹೊರಟ್ಟಿ)


Google News

 

 

WhatsApp Group Join Now
Telegram Group Join Now
Suddi Sante Desk