ಕೋಲಾರ –
ಶಿಶುಪಾಲನಾ ರಜೆಯ ವಿಚಾರದಲ್ಲಿ ಯಾವುದೇ ಕಾರಣಕ್ಕೂ ವಿಳಂಬವನ್ನು ಮಾಡದೇ ಕೂಡಲೇ ನೀಡಿ ಸಮಸ್ಯೆಗೆ ಸ್ಪಂದಿಸಿ ಎಂದು ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ ಹೇಳಿದರು. ಕೋಲಾರ ದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಇಲಾಖೆಯ ಪ್ರಗತಿ ಪರಶೀಲನಾ ಸಭೆ ಮಾಡಿದ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿ ಸಿಬ್ಬಂದಿಗೆ ಈ ಕುರಿತಂತೆ ಸೂಚನೆ ನೀಡಿ ತಾಕೀತು ಮಾಡಿದರು.

ಶಿಶುಪಾಲನಾ ರಜೆ ಮಂಜೂರು ಮಾಡಲು ವಿನಾ ಕಾರಣ ವಿಳಂಬ ಮಾಡಲಾಗುತ್ತಿದೆ ಎಂಬ ದೂರು ಗಳು ಬಂದಿವೆ.ಹೀಗಾಗಿ ಈ ಕುರಿತಂತೆ ಸ್ಪಂದಿಸಿ ಎಂದರು.ಇನ್ನೂ ಬಂಗಾರಪೇಟೆ ಶಾಲೆಯ ಶಿಕ್ಷಕಿ ಬಿ.ಎಸ್.ಲಲಿತಾ ಎಂಬುವರು ಮಧುಮೇಹದಿಂದ ನರಳುತ್ತಿರುವ ತಮ್ಮ ಮಗನ ಆರೈಕೆಗೆ ರಜೆ ಕೋರಿದ್ದು ಅರ್ಜಿ ನೀಡಿದರು ಕೂಡಾ ಈವರೆಗೆ ಏಕೆ ಮಂಜೂರು ಮಾಡಿಲ್ಲ ಎಂದು ಪ್ರಶ್ನಿಸಿದರು. ಡ್ರಾಯಿಂಗ್ ಅಧಿಕಾರಿಗಳಿಗೆ ಶಿಶುಪಾಲನಾ ರಜೆ ಮಂಜೂರು ಮಾಡುವ ಅಧಿಕಾರವನ್ನು ಸರ್ಕಾರ ನೀಡಿದೆ.

ಈ ಕುರಿತು ಇಲಾಖೆಯ ಎಲ್ಲಾ ಡ್ರಾಯಿಂಗ್ ಅಧಿಕಾರಿಗಳಿಗೆ ಗುರುವಾರವೇ ಸ್ಪಷ್ಟ ಸುತ್ತೋಲೆ ಕಳುಹಿಸಿ ಎಂದು ಡಿಡಿಪಿಐ ನಾಗೇಶ್ ಅವರಿಗೆ ಸೂಚಿಸಿ ಇನ್ನೂ ಮುಂದೆ ಯಾವುದೇ ಕಾರಣಕ್ಕೂ ವಿಳಂಬವನ್ನು ಮಾಡದಂತೆ ಸೂಚನೆ ನೀಡಿ ತಾಕೀತು ಮಾಡಿದರು ಇದರೊಂದಿಗೆ ಕಳೆದ ಹಲವು ದಿನಗಳಿಂದ ಗೊಂದಲದಲ್ಲಿದ್ದ ಶಿಶುಪಾಲನಾ ರಜೆಯ ವಿಚಾರದಲ್ಲಿ ವಿಧಾನ ಪರಿಷತ್ ಸದಸ್ಯರು ಸಂತೋಷದ ಸುದ್ದಿ ನೀಡಿದರು.