ಬೆಂಗಳೂರು –
ತಜ್ಞರ ವರದಿ ಮೇರೆಗೆ ಜನವರಿ ಒಂದರಿಂದ SSLC , PUC ಯನ್ನು ಆರಂಭ ಮಾಡಲಾಗುತ್ತದೆ. ಇನ್ನೂ 1 ರಿಂದ 6ನೇ ತರಗತಿಯವರಿಗೆ ವಿದ್ಯಾಗಮ ಆರಂಭವಾಗಲಿದೆ.ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.

ಬೆಂಗಳೂರಿನಲ್ಲಿ ಮಾತನಾಡಿದ ಅವರು ಮೊದಲು ಎಸ್ ಎಸ್ ಎಲ್ ಸಿ ಯ ಮತ್ತು ದ್ವಿತೀಯ ಪಿಯು ತರಗತಿಗಳು ಆರಂಭಗೊಳ್ಳಲಿವೆ. ತದನಂತರ 6 ರಿಂದ 9ನೇ ಕ್ಲಾಸ್ ಗಳ ವಿದ್ಯಾಗಮ ಆರಂಭಿಸಲಾಗುವುದು ಎಂದರು.

ಶಾಲಾ ಆರಂಭ ವಿಚಾರ ಕುರಿತಂತೆ ವಿಧಾನಸೌಧ ದಲ್ಲಿ ಸಭೆ ಮಾಡಲಾಯಿತು. ಸಭೆಯ ಬಳಿಕ ನಂತರ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾತನಾಡಿ SSLC ಪರೀಕ್ಷೆಗೆ ಸಮಿತಿ ವರದಿ ಕೊಟ್ಟಿತ್ತು. ನವೆಂಬರ್ ನಲ್ಲಿ ಡಿಸೆಂಬರ್ ವರೆಗೂ ಬೇಡ ಅಂತ ಸಮಿತಿ ಹೇಳಿತ್ತು. ಈಗ ಪ್ರಾರಂಭ ಮಾಡಿ ಅಂತ ಸಲಹೆ ಕೊಟ್ಟಿತ್ತು. ಸಿಎಂ ಸಹ ತಜ್ಞರ ವರದಿಗೆ ಸಮ್ಮತಿ ನೀಡಿದ್ದು, ಜನವರಿ 1 ರಿಂದ ಮೊದಲು 10-12 ನೇ ತರಗತಿ ಪ್ರಾರಂಭಕ್ಕೆ ಸಲಹೆ ಕೊಟ್ಟಿತ್ತು.

ತರಗತಿ ಪ್ರಾರಂಭಕ್ಕೆ ರೆಡಿ ಮಾಡಲಾಗಿದ್ದು ಎಷ್ಟು ಸಮಯ ಪಾಠ ಮಾಡಬೇಕು ಅಂತ ಸಿದ್ದತೆ ಮಾಡಿದ್ದೇವೆ. ವಿದ್ಯಾಗಮ ಕೂಡಾ ಪ್ರಾರಂಭ ಮಾಡಲಾಗ್ತಿದೆ. 6 ರಿಂದ 9ನೇ ತರಗತಿಗೆ ವಿದ್ಯಾಗಮ ಪ್ರಾರಂಭ ಆಗಲಿದೆ ಎಂದು ತಿಳಿಸಿದರು.ಇನ್ನೂ ಶಾಲಾ ಆವರಣದಲ್ಲಿ ವಿದ್ಯಾಗಮ ನಡೆಯಲಿದ್ದು, ವಾರಕ್ಕೆ 3 ದಿನ ಒಂದು ವಿದ್ಯಾರ್ಥಿ ಶಾಲೆಗೆ ಬರೋ ರೀತಿ ಸಿದ್ಧತೆ ಮಾಡಲಾಗಿದೆ. ವಿದ್ಯಾಗಮಕ್ಕೆ ಬರೋ ಮಕ್ಕಳು ಪೋಷಕರ ಒಪ್ಪಿಗೆ ಪತ್ರ ತರಬೇಕು. ಗ್ರಾಮೀಣಾಭಿವೃದ್ಧಿ ಮತ್ತು ನಗರಾಭಿವೃದ್ಧಿ ಇಲಾಖೆಯಿಂದ ಸರ್ಕಾರ ಶಾಲೆಗಳಿಗೆ ಸ್ಯಾನಿಟೈಸ್ ಜವಾಬ್ದಾರಿ ನೀಡಲಾಗಿದೆ.

ಖಾಸಗಿ ಶಾಲೆಗಳು ಆರರಿಂದ ಒಂಬತ್ತನೇ ತರಗತಿಯವರೆಗಿನ ಮಕ್ಕಳಿಗೆ ವಿದ್ಯಾಗಮ ಮಾಡಬಹುದು. ಹಾಸ್ಟೆಲ್ ಗಳು, ವಸತಿ ಶಾಲೆಗಳು ಕೂಡಾ ಪ್ರಾರಂಭ ಆಗಲಿದ್ದು, ಇಲ್ಲಿಗೆ ಬರುವ ಮಕ್ಕಳು ಮತ್ತು ಶಿಕ್ಷಕರು ಕಡ್ಡಾಯವಾಗಿ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಶಾಲೆಗೆ ಬರೋದು ಕಡ್ಡಾಯ ಅಲ್ಲ. ಆನ್ ಲೈನ್ ಮೂಲಕ ಪಾಠ ಕಲಿಯಬಹುದು.

ಭಾನುವಾರ ಯಾವುದೇ ವಿಶೇಷ ಕ್ಲಾಸ್ ಗಳು ನಡೆಯಲ್ಲ. ಮುಂದಿನ ದಿನಗಳಲ್ಲಿ ಪಠ್ಯಕ್ರಮದ ಬಗ್ಗೆ ತೀರ್ಮಾನ ಮಾಡಲಾಗುವುದು. 15 ದಿನ ಪರಿಸ್ಥಿತಿ ನೋಡಿ ಪ್ರಥಮ ಪಿಯು ಪ್ರಾರಂಭದ ಬಗ್ಗೆ ನಿರ್ಧಾರ ಮಾಡಲಾಗುವುದು. ಶಾಲೆ ಆರಂಭವಾದ್ರೂ ಚಂದನ ವಾಹಿನಿಯಲ್ಲಿ ಆನ್ಲೈ ನ್ ಕ್ಲಾಸ್ ಮುಂದುವರಿಯಲಿದೆ ಎಂದು ಸುರೇಶ್ ಕುಮಾರ್ ಹೇಳಿದರು.
