ರಸ್ತೆ ಸುಲಿಗೆಕೋರರ ಬಂಧನ ಮಾಡಿದ ವಿದ್ಯಾಗಿರಿ ಪೊಲೀಸರು – ವಿದ್ಯಾಗಿರಿ ಪೊಲೀಸರು ಭರ್ಜರಿ ಕಾರ್ಯಾಚರಣೆ ಪೊಲೀಸ್ ಆಯುಕ್ತರ ಮೆಚ್ಚುಗೆ…..

Suddi Sante Desk
ರಸ್ತೆ ಸುಲಿಗೆಕೋರರ ಬಂಧನ ಮಾಡಿದ ವಿದ್ಯಾಗಿರಿ ಪೊಲೀಸರು – ವಿದ್ಯಾಗಿರಿ ಪೊಲೀಸರು ಭರ್ಜರಿ ಕಾರ್ಯಾಚರಣೆ ಪೊಲೀಸ್ ಆಯುಕ್ತರ ಮೆಚ್ಚುಗೆ…..

ಧಾರವಾಡ

ರಸ್ತೆ ಸುಲಿಗೆಕೋರರ ಬಂಧನ ಮಾಡಿದ ವಿದ್ಯಾಗಿರಿ ಪೊಲೀಸರು – ವಿದ್ಯಾಗಿರಿ ಪೊಲೀಸರು ಭರ್ಜರಿ ಕಾರ್ಯಾಚರಣೆ ಪೊಲೀಸ್ ಆಯುಕ್ತರ ಮೆಚ್ಚುಗೆ ಹೌದು

ರಸ್ತೆಯಲ್ಲಿ ವಾಹನಗಳನ್ನು ಅಡ್ಡಗಟ್ಟಿ ಸುಲಿಗೆ ಯನ್ನು ಮಾಡುತ್ತಿದ್ದ ಟೀಮ್ ನ್ನು ಧಾರವಾಡದ ವಿದ್ಯಾಗಿರಿ ಪೊಲೀಸರು ಬಂಧನ ಮಾಡಿದ್ದಾರೆ ಹೌದು ಕುಖ್ಯಾತ ರಸ್ತೆ ಸುಲಿಗೆಕೋರರ ಬಂಧನ ಮಾಡಲಾಗಿದ್ದು ಬಂಧಿತರಿಂದ 7,58,000/- ರೂ ಮೌಲ್ಯದ 110 ಗ್ರಾಂ ತೂಕದ ಬಂಗಾರದ ಆಭರಣ

02 ಮೋಟರ್ ಸೈಕಲ್ ಹಾಗೂ ಒಂದು ಮೊಬೈಲ್ ಪೋನ್ ನ್ನು ವಶಪಡಿಸಿಕೊಳ್ಳಲಾಗಿದೆ. ರಸ್ತೆಯಲ್ಲಿ ಕಾರಿನಲ್ಲಿ ಪ್ರಯಾಣಿಸಿಕೊಂಡು ಹೊರ ಟಿದ್ದ ಹುಬ್ಬಳ್ಳಿಯ ನಿವಾಸಿ ಮಲ್ಲಿಕಾರ್ಜುನ ಬಡ್ಡಿ ಇವರಿದ್ದ ಕಾರನ್ನು ಮೋಟರ್ ಸೈಕಲ್ ಚಲಾಯಿಸಿ ಕೊಂಡು ಬಂದ ಅಪರಿಚಿತ ವ್ಯಕ್ತಿಗಳಿಬ್ಬರು ಅಡ್ಡ ಗಟ್ಟಿ ನಿಲ್ಲಿಸಿ ಕಾರಿನ ಡೋರ್ ಗ್ಲಾಸನ್ನು ಒಡೆದು ಅವರ ಕೊರಳಲ್ಲಿದ್ದ ಚಿನ್ನದ ಸರವನ್ನು ಸುಲಿಗೆ ಮಾಡಿಕೊಂಡು ಹೋಗಿದ್ದರು.

ಈ ಕೃತ್ಯದಲ್ಲಿ ಭಾಗಿಯಾಗಿದ್ದ ಕುಖ್ಯಾತ 03 ಜನ ಸುಲಿಗೆಕೋರರನ್ನು ವೈಜ್ಞಾನಿಕ ರೀತಿಯಲ್ಲಿ ಪತ್ತೆ ಮಾಡಿ ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿ ದಾಗ ಆರೋಪಿತರು ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಎಸಗಿದ ಇನ್ನೊಂದು ಪ್ರಕರಣ ಮಾಡಿರುವ ಕುರಿತು

ಒಪ್ಪಿ ಕೊಂಡಿದ್ದು ಧಾರವಾಡ ಗ್ರಾಮೀಣ ಠಾಣೆ ವ್ಯಾಪ್ತಿಯ 02, ಹಳೇಹುಬ್ಬಳ್ಳಿ ಹಾಗೂ ಗೋಕು ಲರೋಡ ಪೊಲೀಸ್ ಠಾಣೆಯ ವ್ಯಾಪ್ತಿಯ ತಲಾ 91 ಪ್ರಕರಣ ಸೇರಿ ಒಟ್ಟು 06 ಪ್ರಕರಣಗಳನ್ನು ಭೇಧಿಸಿದ್ದು ಆರೋಪಿತರಿಂದ ಲಕ್ಷಾಂತರ ರೂ ಮೌಲ್ಯದ ಚಿನ್ನದ ಆಭರಣ,

ಮೊಬೈಲ್ ಪೋನ್ ಹಾಗೂ ಕೃತ್ಯಕ್ಕೆ ಉಪಯೋಗಿ ಸಿದ 02 ಮೋಟರ್ ಸೈಕರ್‌ಗಳನ್ನು ವಶಪಡಿಸಿ ಕೊಳ್ಳುವಲ್ಲಿ ಧಾರವಾಡ ವಿದ್ಯಾಗಿರಿ ಪೊಲೀಸರು ಯಶಸ್ವೀಯಾಗಿರುತ್ತಾರೆ. ಈ ಪ್ರಕರಣವನ್ನು ಪತ್ತೆ ಮಾಡಲು ಉಪ-ಪೋಲೀಸ್ ಆಯುಕ್ತರು ರಾಜೀವ, ಎಂ (ಐ.ಪಿ.ಎಸ್) ರವರು ಹಾಗೂ

ಅಪರಾಧ ವಿಭಾಗದ ಉಪ-ಪೋಲೀಸ್ ಆಯುಕ್ತರು ರವೀಶ ಸಿ. ಆರ್ ರವರ ಆದೇಶದ ಮೇರೆಗೆ ಧಾರವಾಡ ಶಹರ ಉಪ-ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಪ್ರಶಾಂತ ಸಿದ್ದನಗೌಡರ ಇವರ ಮಾರ್ಗದರ್ಶನದಲ್ಲಿ ವಿದ್ಯಾಗಿರಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಸಂಗಮೇಶ ದಿಡಿಗಿನಾಳ ಇವರ ನೇತೃತ್ವದಲ್ಲಿ ತಂಡ ರಚನೆ ಮಾಡಿದ್ದು

ತಂಡದಲ್ಲಿ ಪಿ.ಎಸ್.ಐ ರವರಾದ ಬಾಬಾ, ಎಂ. ಪ್ರಮೋದ. ಎಚ್.ಜಿ, ಮನೋಹರ ಮಲ್ಲಿಗವಾಡ ಹಾಗೂ ಎ.ಎಸ್.ಐ. ಐ. ಐ. ಮದರಖಂಡಿ, ಬಸವರಾಜ ಸವಣೂರ ಮತ್ತು ಸಿಬ್ಬಂದಿ ಗಳಾದ  ಎಂ. ಸಿ. ಮಂಕಣಿ, ವಿ. ಐ. ಚವರಡ್ಡಿ, ಬಾಬು ಮಮ್ಮಾಳ, ಗಿರೀಶ ಐದನಳ್ಳಿ ಆನಂದ ಬಡಿಗೇರ, ಲಕ್ಷ್ಮಣ ಲಮಾಣಿ, ಬಿ. ಎಂ.ಪಟಾತ, ಮಹಾಂತೇಶ, ವಾಯ್ ಎಂ ಇವರು ಕಾರ್ಯನಿರ್ವಹಿಸಿದ್ದು ಇರುತ್ತದೆ.

ಆರೋಪಿತರ ಪತ್ತೆ ಕಾರ್ಯವನ್ನು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ ರವರಾದ ಶ್ರೀಮತಿ ರೇಣಾಕಾ ಸುಕುಮಾರ, ಐ.ಪಿ.ಎಸ್ ರವರು ಶ್ಲಾಘಿಸಿರುತ್ತಾರೆ.

ಸುದ್ದಿ ಸಂತೆ ನ್ಯೂಸ್ ಧಾರವಾಡ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.