ಧಾರವಾಡ –
ಕಲಿಯಲು ಬಂದ ವಿದ್ಯಾರ್ಥಿ ಗಳಿಗೆ ತಿದ್ದಿ ಬುದ್ದಿ ಹೇಳ ಬೇಕಾದ ಗುರುವಿನ ಸ್ಥಾನ ದಲ್ಲಿರುವರಿಂದಲೇ ವಿದ್ಯಾರ್ಥಿ ನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪವೊಂದು ವಿದ್ಯಾಕಾಶಿ ಧಾರವಾಡ ದಲ್ಲಿ ಕೇಳಿ ಬಂದಿದೆ ಅದು ಕಾಲೇಜು ಅಧ್ಯಕ್ಷ ಮತ್ತು ಪ್ರಾಚಾರ್ಯರರ ಮೇಲೆ
ಹೌದು ನಗರದ ಖಾಸಗಿ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಲೈಂಗಿಕ ಕಿರುಕುಳ ಕೊಡುತ್ತಿದ್ದಾರೆ.ಇದಕ್ಕೆ ಅದೇ ಕಾಲೇಜಿನ ಪ್ರಾಂಶುಪಾಲರ ಸಹಕಾರವೂ ಇದೆ ಎಂದು ಕಾಲೇಜು ವಿದ್ಯಾರ್ಥಿಗಳು ದೂರು ನೀಡಿದ್ದಾರೆ.ನಗರದ ಉಪನಗರ ಪೊಲೀಸ್ ಠಾಣೆ ಗೆ ಈ ಕುರಿತು ವಿದ್ಯಾರ್ಥಿ ನಿಯರು ದೂರನ್ನು ನೀಡಿದ್ದು ಧಾರವಾಡದ ಜಯನಗರದ ಪಿಯು ವಿಜ್ಞಾನ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಬಸವರಾಜ್ ಯಡವಣ್ಣವರ ಮತ್ತು ಪ್ರಾಚಾರ್ಯ ಮಹದೇವ ಕುರವತ್ತಿಗೌಡರ ವಿರುದ್ಧ ಕೇಸ್ ದಾಖಲಾಗಿದೆ
ವಿದ್ಯಾರ್ಥಿನಿಯರ ಹಾಸ್ಟೆಲ್ ಗೆ ಮಧ್ಯರಾತ್ರಿ ಬಂದು ಕಿರುಕುಳ ನೀಡುತ್ತಾನೆ.ದೇವಸ್ಥಾನ ಮತ್ತು ಆಸ್ಪತ್ರೆಗೆ ಕರೆದು ಕೊಂಡು ಹೋಗುವ ನೆಪದಲ್ಲಿ ಮೈ ಮುಟ್ಟುತ್ತಾನೆ ಎಂದು ಬಸವರಾಜ್ ಯಡವಣ್ಣವರ ವಿರುದ್ಧ 10 ವಿದ್ಯಾರ್ಥಿನಿ ಯರು ದೂರಿದ್ದಾರೆ.ಕಾಲೇಜು ಅಧ್ಯಕ್ಷನ ಕಿರುಕುಳಕ್ಕೆ ಪ್ರಾಚಾರ್ಯ ಕೂಡ ಸಾಥ್ ಕೊಟ್ಟಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಕಾಲೇಜಿನ ಅಪ್ರಾಪ್ತ ಬಾಲಕಿಯೊಬ್ಬಳು ತನ್ನ ಮೇಲಾದ ಲೈಂಗಿಕ ಕಿರುಕುಳದ ಬಗ್ಗೆ ದೂರಿನ ಪ್ರತಿಯಲ್ಲಿ ಬಿಚ್ಚಿಟ್ಟಿ ದ್ದಾರೆ.ನಾನು ಕಾಲೇಜಿಗೆ ಪ್ರವೇಶ ಪಡೆದ ಬಳಿಕ ನನ್ನನ್ನು ಮತ್ತು ಸಹಪಾಠಿಯನ್ನು ತರಗತಿ ಶುರುವಾಗಿದೆ ಎಂದು ಒಂದು ವಾರದ ಮೊದಲೇ ಕಾಲೇಜಿಗೆ ಕರೆಸಿಕೊಂಡರು. ಸಪ್ತಾಪೂರ ವಿಶ್ವೇಶ್ವರಯ್ಯ ಕಾಲೇಜಿನಿಂದ ಧಾರವಾಡದ ವಿಜಯಾನಂದ ನಗರದಲ್ಲಿರುವ ಹಾಸ್ಟೆಲ್ ಗೆ ಹೋಗಿ ನಾವು ಇದ್ದೆವು.
ಆಗ ಅಲ್ಲಿಗೆ ಬಂದ ಅಧ್ಯಕ್ಷರು ನಮ್ಮನ್ನು ಕಾರಿನಲ್ಲಿ ಕರೆದೊ ಯ್ದರು ಮೈ-ಕೈ ಮುಟ್ಟುತ್ತಾ ಅಸಭ್ಯವಾಗಿ ನಡೆದುಕೊಳ್ಳುತ್ತಿ ದ್ದರು.ಸಣ್ಣ-ಪುಟ್ಟ ವಿಷಯಕ್ಕೂ ಕಾಲೇಜಿನ ಪ್ರಿನ್ಸಿಪಾಲರು ಅಧ್ಯಕ್ಷರನ್ನು ಭೇಟಿಯಾಗಿ ಬಾ ಎನ್ನುತ್ತಾ ಈ ಕೃತ್ಯಕ್ಕೆ ಪ್ರಚೋದನೆ ನೀಡುತ್ತಿದ್ದರು.ದೇಗುಲಕ್ಕೆ ಹೋದರೆ ಮೈಂಡ್ ಫ್ರೆಶ್ ಆಗುತ್ತೆ ಎಂದೇಳಿ ನಮ್ಮನ್ನು ಪುಸಲಾಯಿಸಿ ಕರೆದೊ ಯ್ಯುತ್ತಿದ್ದರು ಎಂದು ದೂರಿದ್ದಾರೆ.
ಇನ್ನೂ ದಾಂಡೇಲಿಯ ಬಸ್ ನಿಲ್ದಾಣದ ಎದುರಿನ ಲಾಡ್ಜ್ ಗೆ ಕರೆದೊಯ್ದು ಫ್ರೀ ಯಾಗಿ ಇರಬೇಕು ಅಂತ ಅಸಭ್ಯವಾಗಿ ವರ್ತಿಸುತ್ತಿದ್ದ.ಒಂದು ದಿನ ಮುಂಜಾನೆ ನನ್ನನ್ನು ಪುಸಲಾ ಯಿಸಿ ಕಾರಿನಲ್ಲಿ ದಾಂಡೇಲಿಯ ಬಸ್ ನಿಲ್ದಾಣ ಬಳಿಯ ಲಾಡ್ಜ್ ಗೆ ಕರೆದೊಯ್ದು ಬಿಯರ್ ಕುಡಿಸಿ ಬಲವಂತವಾಗಿ ಲೈಂಕಿಕ ಕ್ರಿಯೆ ನಡೆಸಿದ್ದಾನೆ.ಇಷ್ಟಕ್ಕೆ ಈತ ಸುಮ್ಮನಾಗದೆ ಪದೇಪದೆ ಲೈಂಗಿಕ ಕಿರುಕುಳ ಕೊಡುತ್ತಿದ್ದ ಎಂದು ಸಂತ್ರಸ್ತೆ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ದ್ದಾಳೆ
ಇನ್ನು ಅಧ್ಯಕ್ಷನ ವಿರುದ್ಧ ಹಲವು ಸಂತ್ರಸ್ತ ವಿದ್ಯಾರ್ಥಿಗಳು ಪ್ರತ್ಯೇಕವಾಗಿ ದೂರು ನೀಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ವಿಷಯ ತಿಳಿಯುತ್ತಿದ್ದ ಕಾಲೇಜು ಬಳಿ ಆಗಮಿಸಿದ ಎಬಿವಿಪಿ ಕಾರ್ಯಕರ್ತರು, ಕಾಲೇಜು ಅಧ್ಯಕ್ಷ ಮತ್ತು ಪ್ರಾಂಶುಪಾಲರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಸಂತ್ರಸ್ಥ ವಿದ್ಯಾರ್ಥಿನಿಯರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ.