ಉಡುಪಿ –
ವಿದ್ಯಾವಾಚಸ್ಪತಿ ಎಂದೇ ಹೆಸರಾದ ಬನ್ನಂಜೆ ಗೋವಿಂದಾಚಾರ್ಯ (85) ನಿಧನರಾಗಿದ್ದಾರೆ.
ಪದ್ಮಶ್ರೀ ಪುರಸ್ಕೃತ ಪ್ರವಚನಕಾರರಾಗಿದ್ದ ಬನ್ನಂಜೆ ಗೋವಿಂದಾಚಾರ್ಯ ಉಡುಪಿಯ ಅಂಬಲಪಾಡಿ ನಿವಾಸದಲ್ಲಿ ನಿಧನರಾಗಿದ್ದಾರೆ. ಪ್ರವಚನಕಾರ, ಮಧ್ವ ಸಿದ್ಧಾಂತದ ಪ್ರತಿಪಾದಕ ಪತ್ರಕರ್ತರಾಗಿ ಅನೇಕ ಅಂಕಗಳನ್ನು ಬರೆದಿದ್ದ ಬನ್ನಂಜೆ ಗೋವಿಂದಚಾರ್ಯರು ಕೊನೆಯುಸಿರೆಳಿದಿದ್ದಾರೆ.
ನಟ ಡಾ.ವಿಷ್ಣುವರ್ಧನ್ ಆಧ್ಯಾತ್ಮಿಕ ಗುರು ಆಗಿದ್ದ ಇವರು ಹಲವಾರು ಕೃತಿಗಳನ್ನು ಸಂಸ್ಕೃತದಿಂದ ಕನ್ನಡಕ್ಕೆ ತರ್ಜುಮೆಗೈದ ಪಂಡಿತರಾಗಿದ್ದರು. ಮೂರು ಚಲನಚಿತ್ರಗಳಿಗೆ ಸಂಭಾಷಣೆ ಬರೆದಿದ್ದ ಬನ್ನಂಜೆ ಗೋವಿಂದಾಚಾರ್ಯ ಮಧ್ವಾಚಾರ್ಯ, ಶಂಕರಾಚಾರ್ಯ, ರಾಮಾನುಜಾಚಾರ್ಯ ಚಿತ್ರಗಳ ಸಂಭಾಷಣೆಯನ್ನು ಕೂಡಾ ಮಾಡಿದ್ದರು.ಅಲ್ಲದೇ ಹಲವು ಚಾರಿತ್ರಿಕ ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದರು.ಉಪನಿಷತ್ತಿನ ಅಧ್ಯಾಯಗಳಿಗೆ ಟಿಪ್ಪಣಿ ಬರೆದಿದ್ದ ಗೋವಿಂದಾಚಾರ್ಯ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು.