ಬಳ್ಳಾರಿ –
ಪರ ವಿರೋಧ ಗದ್ದಲ ಗಲಾಟೆ ಇವೆಲ್ಲವುಗಳ ನಡುವೆ ರಾಜ್ಯದ 31 ಜಿಲ್ಲೆಯಾಗಿ ವಿಜಯನಗರ ಜಿಲ್ಲೆಗೆ ರಾಜ್ಯ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ. ಕಳೆದ ಒಂದು ವಾರದ ಹಿಂದೆ ರಾಜ್ಯ ಸಚಿವ ಸಂಪುಟದಲ್ಲಿ ತಾತ್ವಿಕ ಒಪ್ಪಿಗೆ ನೀಡಿ ಇಂದಿನ ಸಚಿವ ಸಂಪುಟದಲ್ಲಿ ಮತ್ತೊಂದು ಮಹತ್ವದ ತಿರ್ಮಾನ ಕೈಗೊಂಡಿದೆ. ತಾಲೂಕುಗಳನ್ನು ಬೇರ್ಪಡಿಸಿ ಇನ್ನೂ ಹೊಸ ಜಿಲ್ಲೆ ಘೋಷಣೆಯಾಗುತ್ತಿದ್ದಂತೆ ಒಂದ ಕಡೆ ಸಂಭ್ರಮವಾದ್ರೆ ಮತ್ತೊಂದು ಕಡೆ ಸರ್ಕಾರದ ವಿರುದ್ದ ಅಸಮಾಧಾನ ಬುಗಿಲೆದ್ದಿದೆ.
ಹೌದು ಹೊಸ ವಿಜಯನಗರ ಜಿಲ್ಲೆಯನ್ನು ಘೋಷಣೆ ಮಾಡಿದ ರಾಜ್ಯದ ಬಿಜೆಪಿ ಸರ್ಕಾರ ಈಗ ಮತ್ತೊಂದು ಹೆಜ್ಜೆ ಮುಂದಿಟ್ಟು ಇಂದಿನ ಸಚಿವ ಸಂಪುಟದಲ್ಲಿ ಹೊಸ ಜಿಲ್ಲೆಗೆ 6 ತಾಲೂಕುಗಳನ್ನು ಬೇರ್ಪಡಿಸಿ, ಬಳ್ಳಾರಿ ಗೆ 5 ತಾಲೂಕುಗಳೆಂದು ವಿಂಗಡನೆ ಮಾಡಲಾಗಿದೆ. ಬಳ್ಳಾರಿಯನ್ನು ಜಿಲ್ಲಾ ಕೇಂದ್ರವಾಗಿರಿಸಿಕೊಂಡು, ಸಿರುಗುಪ್ಪ, ಸಂಡೂರು, ಕುರುಗೋಡು, ಕಂಪ್ಲಿ ತಾಲೂಕುಗಳನ್ನು ಬಳ್ಳಾರಿಗೆ ಬಿಟ್ಟು, ವಿಜಯನಗರ ಜಿಲ್ಲೆಯ ವ್ಯಾಪ್ತಿಗೆ ಹೊಸಪೇಟೆಯನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಿ ,ಹಗರಿಬೊಮ್ಮನ ಹಳ್ಳಿ, ಕೂಡ್ಲಿಗಿ, ಕೊಟ್ಟೂರು, ಹರಪನಹಳ್ಳಿ ಮತ್ತು ಹೂವಿನ ಹಡಗಲಿಯನ್ನು ಬೇರ್ಪಡಿಸಲಾಗಿದೆ. ಇಂದು ಬೆಂಗಳೂರಿನಲ್ಲಿ ನಡೆದ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಬಳ್ಳಾರಿ ಜಿಲ್ಲೆ ವಿಭಜಿಸಿ ತಾಲೂಕು ಹಂಚಿಕೆ ಮಾಡಿ ಘೋಷಣೆ ಮಾಡುತ್ತಿದ್ತಂತೆ ಒಂದು ಕಡೆ ಸಡಗರ ಸಂಭ್ರಮವಾದರೆ ಮತ್ತೊಂದು ಕಡೆ ಆಕ್ರೋಶ ಭುಗಿಲೆದ್ದಿದೆ.ಇದು ತರಾತುರಿ ನಿರ್ಧಾರ ಎಂದು ಅಸಮಾಧಾನವಾಗಿದ್ದು, ನಿನ್ನೆಯಷ್ಟೇ ಬಂದ್ ಮಾಡಿ ಎಚ್ಚರಿಕೆ ಕೊಟ್ಟಿದ್ದೆವು. ಈಗಲಾದ್ರು ಸಿಎಂ ಎಲ್ಲರ ಜೊತೆ ಚರ್ಚೆ ಮಾಡ್ತಾರೆ ಅನ್ಕೊಂಡಿದ್ವಿ ಎಂದು ಬಳ್ಳಾರಿ ಜನತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನೂ ನಾಳೆ ರಾಷ್ಟ್ರೀಯ ಹೆದ್ದಾರಿ 64 ನ್ನು ತಡೆದು ಬಂದ್ ಮಾಡಲು ತಯಾರಿ ಮಾಡಲಾಗುತ್ತಿದ್ದು, ದಿನ ನಿತ್ಯ ವಿಭಿನ್ನ ಹೊರಾಟ ಮಾಡ್ತೀವಿ ಎಂದು ಹೋರಾಟಗಾರರು ಆಕ್ರೋಶ ಹೊರಹಾಕಿದ್ದಾರೆ.
ಇನ್ನೂ ಇದೇ ತಿಂಗಳು 18 ರಂದು ವಿಜಯನಗರ ಜಿಲ್ಲೆಗೆ ಸಚಿವ ಸಂಪುಟದಲ್ಲಿ ತಾತ್ವಿಕ ಒಪ್ಪಿಗೆ ನೀಡಿದಾಗಿನಿಂದ ಬಳ್ಳಾರಿ ಭಾಗದಲ್ಲಿ ನಾನಾ ಬಗೆಯ ಹೋರಾಟಗಳು ಮಾಡಿಕೊಂಡು ಬರಲಾಗುತ್ತಿದ್ದು, ನಿನ್ನೆಯೂ ಕೂಡ, ಬಳ್ಳಾರಿ ಬಂದ್ ಮಾಡಿ, ಆಕ್ರೋಶ ವ್ಯಕ್ತಪಡಿಸಲಾಗಿತ್ತು. ಆದ್ರೂ ಕೂಡ ರಾಜ್ಯ ಸರ್ಕಾರ ಮತ್ತು ಸಿಎಂ ಯಡಿಯೂರಪ್ಪ ಈ ರೀತಿಯ ತರಾತುರಿಯ ನಿರ್ಧಾರ ಮಾಡಿರೋದು ಸರಿಯಲ್ಲಾ. ಬಳ್ಳಾರಿ ಜಿಲ್ಲೆಯ ಇಬ್ಭಾಗ ಸಂಪೂರ್ಣ ಅವೈಜ್ಞಾನಿಕ ಕೆಲಸ ಎಂದು ಹೋರಾಟಗಾರರು ತಮ್ಮ ಅಸಮಾಧಾನವನ್ನು ಸರ್ಕಾರದ ವಿರುದ್ದ ವ್ಯಕ್ತಪಡಿಸುತ್ತಿದ್ದಾರೆ.
ಬಳ್ಳಾರಿ ಜಿಲ್ಲೆಯಲ್ಲಿ ಇರೋರೆಲ್ಲರೂ ಸಹ ಒಂದೇ ತಾಯಿಯ ಮಕ್ಕಳಿದ್ದಂತೆ ಇದ್ದೇವು, ಈಗ ಒಂದೇ ತಾಯಿಯ ಮಕ್ಕಳನ್ನು ಈಗ ಬೇರ್ಪಡಿಸಲಾಗುತ್ತಿದೆ. ಈ ವಿಭಜನೆ ಒಳ್ಳೆಯದಲ್ಲಾ ಎನ್ನುತ್ತಿದ್ದಾರೆ ಹೋರಾಟಗಾರರು.
ಇನ್ನೂ ಈ ನಿರ್ಧಾರದಿಂದ ಹಿಂದೆ ಸರಿಯಬೇಕೆಂದು ರಾಜ್ಯ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದ್ರೂ ಪ್ರಯೋಜನವಿಲ್ಲದಂತಾಗಿದ್ದು ಒಂದು ಕಡೆ ಸಂಭ್ರಮ ಕಳೆಕಟ್ಟಿದ್ದರೆ ಮತ್ತೊಂದು ಕಡೆ ಆಕ್ರೋಶ ಭುಗಿಲೆದ್ದಿದ್ದು ಇವೆಲ್ಲದರ ನಡುವೆ ಮುಂದೆ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.