ವಿಜಯನಗರ –
ಪುಣ್ಯಕೋಟಿ ದತ್ತು ಯೋಜನೆಗೆ ರಾಜ್ಯದ ಸರ್ಕಾರಿ ನೌಕರರು ಸ್ಪಂದಿಸಿ ನೆರವು ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದ ಬೆನ್ನಲ್ಲೇ ರಾಜ್ಯದ ಸರ್ಕಾರಿ ನೌಕರರು ಈ ಒಂದು ಸಂದೇಶಕ್ಕೆ ಸ್ಪಂದಿಸುತ್ತಿದ್ದಾರೆ.ಈಗಾಗಲೇ ಈ ಒಂದು ವಿಚಾರ ಕುರಿತಂತೆ ರಾಜ್ಯದ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರು ಕೂಡಾ ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ದತ್ತು ಯೋಜನೆಗೆ ರಾಜ್ಯ ಸರ್ಕಾರಿ ನೌಕರರು ಬೆಂಬಲವನ್ನು ನೀಡೊದಾಗಿ ಹೇಳಿದ್ದು ಈಗಾಗಲೇ ಈ ಒಂದು ವಿಚಾರ ಕುರಿತಂತೆ ರಾಜ್ಯದ ಎಲ್ಲಾ ಸರ್ಕಾರಿ ನೌಕರರು ಸ್ವಯಂ ಪ್ರೇರಿತವಾಗಿ ದೇಣಿಗೆ ಯನ್ನು ನೀಡುತ್ತಿದ್ದಾರೆ.
ಇದೇಲ್ಲದರ ನಡುವೆ ಇತ್ತ ವಿಜಯನಗರ ಜಿಲ್ಲಾ ಸರ್ಕಾರಿ ನೌಕರರು ಕೂಡಾ ಈ ಒಂದು ಸಂದೇಶಕ್ಕೆ ಉತ್ತಮವಾಗಿ ಸ್ಪಂದಿಸಿದ್ದಾರೆ.ದೇಶದ ಸಂಸ್ಕೃತಿ ಮತ್ತು ಸಂಪತ್ತಿನ ಪ್ರತೀಕವಾಗಿರುವ ಗೋವುಗಳ ರಕ್ಷಣೆಗೆ ಕರ್ನಾಟಕ ಸರ್ಕಾರ ಪುಣ್ಯ ಕೋಟಿ ದತ್ತು ಯೋಜನೆಯನ್ನು ಆರಂಭಿಸಿದ್ದು ಅದನ್ನು ಬೆಂಬಲಿಸಿ ಗೋವುಗಳನ್ನು ದತ್ತು ಪಡೆದು ಅವುಗಳ ನಿರ್ವಹಣಾ ವೆಚ್ಚಕ್ಕೆ ಸಾರ್ವ ಜನಿಕರು, ಸರ್ಕಾರಿ ನೌಕರರು, ಉದ್ಯಮಿಗಳು, ಮತ್ತು ಸಮಾಜದ ಎಲ್ಲರೂ ಸಹಕರಿಸುವಂತೆ ನಾಡಿನ ಮುಖ್ಯ ಮಂತ್ರಿಯವರ ಸಂದೇಶ ಮನವಿಗೆ ಸ್ಪಂದಿಸಿದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕ್ರಿಯಾಶೀಲ ರಾಜ್ಯಾಧ್ಯಕ್ಷರ ಸಿ ಎಸ್ ಷಡಾಕ್ಷರಿಯವರು ಬೆಂಬಲವನ್ನು ನೀಡಿ
ರಾಜ್ಯ ಸರ್ಕಾರಿ ನೌಕರರು ದೇಣಿಗೆ ನೀಡುವು ದಾಗಿ ಘೋಷಣೆ ಮಾಡಿದ್ದರು ಇದರ ಭಾಗವಾಗಿ ವಿಜಯನಗರ ಜಿಲ್ಲೆಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಜಿ ಮಲ್ಲಿಕಾರ್ಜುನ ಗೌಡ ಮತ್ತು ಪ್ರಧಾನ ಕಾರ್ಯದರ್ಶಿ ಕಡ್ಲಿ ವೀರಭದ್ರೇಶ ಇವರು ವಿಜಯನಗರ ಜಿಲ್ಲೆಯ ಎಲ್ಲಾ ಇಲಾಖೆಯ ನೌಕರರಿಗೆ ಪುಣ್ಯಕೋಟಿ ದತ್ತು ಯೋಜನೆಗೆ ವೇತನದಲ್ಲಿ ಕೊಡುಗೆ ನೀಡುವಂತೆ ಮಾಡಿದ ಮನವಿಗೆ ಸ್ಪಂದಿಸಿ ಒಟ್ಟು 54,82,400 ಮೊತ್ತವನ್ನು ದೇಣಿಗೆ ನೀಡಿ ಹೊಸದೊಂದು ದಾಖಲೆಯನ್ನು ಬರೆದಿದ್ದಾರೆ.
ನೌಕರರ ಈ ಒಂದು ಉತ್ತಮ ಸ್ಪಂದನೆಗೆ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ ಮತ್ತು ಕಾರ್ಯದರ್ಶಿ ಕಡ್ಲಿ, ವೀರಭದ್ರೇಶ ಸೇರಿದಂತೆ ಜಿಲ್ಲೆಯ ಸರ್ಕಾರಿ ನೌಕರರ ಸಂಘದ ಸರ್ವ ಸದಸ್ಯರು ಧನ್ಯವಾದಗ ಳನ್ನು ತಿಳಿಸಿದ್ದಾರೆ.ಇದರೊಂದಿಗೆ ವಿಜಯನಗರ ಜಿಲ್ಲಾ ಸರ್ಕಾರಿ ನೌಕರರ ಸಂಘದವರು ಹೊಸ ದೊಂದು ದಾಖಲೆಯನ್ನು ಬರೆದಿದ್ದಾರೆ.
ಸುದ್ದಿ ಸಂತೆ ನ್ಯೂಸ್ ವಿಜಯನಗರ…..
ಇದರೊಂದಿಗೆ ಹೊಸದೊಂದು ದಾಖಲೆಯನ್ನು ಬರೆದಿದ್ದಾರೆ ವಿಜಯನಗರ ಜಿಲ್ಲಾ ಸರ್ಕಾರಿ ನೌಕರರು.