ಬಳ್ಳಾರಿ –
ಕರ್ನಾಟಕ ಸರ್ಕಾರ ಪರ – ವಿರೋಧದ ಮಧ್ಯೆ ರಾಜ್ಯದಲ್ಲಿ 31 ನೇ ಜಿಲ್ಲೆ ಅಸ್ತಿತ್ವಕ್ಕೆ ಬಂದಿದೆ. ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ಕರ್ನಾಟಕದ 31 ನೇ ಜಿಲ್ಲೆಯಾಗಿ ರಾಜ್ಯ ಸರ್ಕಾರ`ವಿಜಯನಗರ’ವನ್ನು ಜಿಲ್ಲೆಯಾಗಿ ಘೋಷಣೆ ಮಾಡಿದೆ.
ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ವಿ.ಟಿ. ರಾಜ್ಯಶ್ರೀ ಅವರು ಸೋಮವಾರ ಅಧಿಕೃತ ಅಧಿಸೂಚನೆಗೆ ಸಹಿ ಮಾಡುವ ಮೂಲಕ ಜಿಲ್ಲೆಯನ್ನು ವಿಭಜಿಸುವ ಗೆಜೆಟ್ ಅನ್ನು ಪ್ರಕಟ ಮಾಡಿದರು.
ರಾಜ್ಯದ 31 ನೇ ಜಿಲ್ಲೆಯಾಗಿ ವಿಜಯನಗರ ವನ್ಮು ಹೊಸ ಜಿಲ್ಲೆ ರಚನೆಯನ್ನು ಅಧಿಕೃತ ಗೊಳಿಸಿದ್ದಾರೆ.
ವಿಜಯನಗರ’ಕ್ಕೆ ಹೊಸಪೇಟೆ, ಕೂಡ್ಲಿಗಿ, ಹಗರಿ ಬೊಮ್ಮನಹಳ್ಳಿ, ಹೂವಿನಹಡಗಲಿ ಮತ್ತು ಹರಪನಹಳ್ಳಿ ತಾಲೂಕುಗಳನ್ನು ಸೇರಿಸಲಾಗಿದೆ.
ಹೊಸಪೇಟೆ’ಯನ್ನು ಕೇಂದ್ರ ಸ್ಥಳವಾಗಿ ಘೋಷಣೆ ಮಾಡಲಾಗಿದೆ.ಬಳ್ಳಾರಿ ಜಿಲ್ಲೆಗೆ ಬಳ್ಳಾರಿ, ಕುರುಗೋಡು, ಸಿರಗುಪ್ಪ, ಕಂಪ್ಲಿ ಮತ್ತು ಸಂಡೂರು ತಾಲೂಕುಗಳನ್ನು ಸೇರಿಸಿದ್ದು, ಬಳ್ಳಾರಿ ತಾಲೂಕನ್ನು ಕೇಂದ್ರ ಸ್ಥಳವನ್ನಾಗಿ ಘೋಷಣೆ ಮಾಡಲಾಗಿದೆ.