ಕೊಡಗು –
ಗ್ರಾಮ ಪಂಚಾಯತ ಸಹಾಯಕರೊಬ್ಬರು ಎಸಿಬಿ ಬಲೆಗೆ ಬಿದ್ದಿದ್ದಾರೆ. ಜಾಗದ ಖಡತವನ್ನು ವಿಲೇವಾರಿ ಮಾಡುವ ವಿಚಾರದಲ್ಲಿ 2500 ಹಣವನ್ನು ಬೇಡಿಕೆ ಇಟ್ಟಿದ್ದರು. ಹೀಗಾಗಿ ಎಸಿಬಿಗೆ ದೂರನ್ನು ನೀಡಿದ್ದರು. ಮಡಿಕೇರಿ ತಾಲೂಕು ಕಚೇರಿಯಲ್ಲಿ ಈ ಒಂದು ಎಸಿಬಿ ದಾಳಿ ನಡೆದಿದೆ.
ರೆಡ್ ಹ್ಯಾಂಡ್ ಆಗಿ ಗ್ರಾಮ ಸಹಾಯಕ ಅಧಿಕಾರಿಗಳಿಗೆ ಹಣದ ಸಮೇತವಾಗಿ ಸಿಕ್ಕಿಬಿದ್ದಿದ್ದಾರೆ. ಗ್ರಾಮ ಸಹಾಯಕ ಮಣಿ ಮರಗೋಡು ಹೋಬಳಿ ಗ್ರಾಮ ಸಹಾಯಕ ರಾಗಿದ್ದಾರೆ.ಜಾಗದ ಖಡತ ವಿಲೇವಾರಿಗೆ ವಿನು ಎಂಬುವರಿಂದ ಹಣವನ್ನು ಪಡೆಯುತ್ತಿದ್ದರು ಹೆಚ್ ಎಸ್ ಮಣಿ. 2,500 ರೂಪಾಯಿಗಳನ್ನು ಪಡೆಯುತ್ತಿದ್ದ ಸಂದರ್ಭದಲ್ಲಿ ಈ ಒಂದು ದಾಳಿಯಾಗಿದೆ. ಸಧ್ಯ ಗ್ರಾಮ ಸಹಾಯಕನನ್ನು ವಶಕ್ಕೆ ತಗೆದುಕೊಂಡಿರುವ ಎಸಿಬಿ ಅಧಿಕಾರಿಗಳು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.