ಹೊಸಪೇಟೆ –
ಆ ಸರ್ಕಾರಿ ಶಾಲೆಯ ಕಟ್ಟಡ ಈಗಷ್ಟೇ ನಿರ್ಮಾಣ ಗೊಂಡಿದ್ದು ಇನ್ನೂ ಉದ್ಘಾಟನೆಯಾಗಿಲ್ಲ ಮುನ್ನವೇ ಎಲ್ಲೆಂದರಲ್ಲಿ ಬಿರುಕು ಬಿಟ್ಟಿದೆ.ಮುನ್ನವೇ ವಿಜಯನಗರ ತಾಲ್ಲೂಕಿನ ಧರ್ಮಸಾಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗೋಡೆಯಲ್ಲಿ ಬಿರುಕು ಬಿಟ್ಟಿದ್ದು ಕಳಪೆ ಇದರ ಹಿಂದೆ ಕಾಮಗಾರಿಯ ಆರೋಪ ಕೇಳಿ ಬಂದಿದೆ.ಶಾಲೆಯ ಹಳೇ ಕಟ್ಟಡ ಕುಸಿದು ಬೀಳುವ ಹಂತಕ್ಕೆ ಬಂದದ್ದ ರಿಂದ ಹೊಸದಾಗಿ 2.37 ಎಕರೆ ಜಾಗ ಶಾಲೆಗೆ ನೀಡಲಾಗಿತ್ತು.ಮೊದಲ ಹಂತದಲ್ಲಿ ಐದು ಕೊಠಡಿಗಳನ್ನು ನಿರ್ಮಿಸಲಾಗಿತ್ತು. ಅದಾದ ಬಳಿಕ ಪುನಃ ಎರಡು ಹೆಚ್ಚುವರಿ ಕೊಠಡಿಗಳನ್ನು ನಿರ್ಮಿಸಲಾಗಿದೆ. ಜಿಲ್ಲಾ ಖನಿಜ ನಿಧಿಯ ₹20 ಲಕ್ಷ ಅನುದಾನದಿಂದ ಹೊಸ ಕಟ್ಟಡ ನಿರ್ಮಿಸಲಾಗಿದೆ.
ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯು ಕಾಮಗಾರಿ ಪೂರ್ಣಗೊಳಿಸಿ ಮೂರು ತಿಂಗಳ ಹಿಂದೆ ಶಿಕ್ಷಣ ಇಲಾಖೆಗೆ ಕಟ್ಟಡ ಹಸ್ತಾಂತರಿಸಿದೆ.ಎರಡು ಹೆಚ್ಚುವರಿ ಕೊಠಡಿಗಳ ಉದ್ಘಾಟನೆ ಇನ್ನಷ್ಟೇ ಆಗಬೇಕು.ಅಷ್ಟರಲ್ಲೇ ಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿದೆ.ಕಿಟಕಿ ಗಾಜುಗಳು ಒಡೆದು ಹೋಗಿವೆ.ಬಾಗಿಲು ಬಾಯ್ತೆರೆದುಕೊಂಡಿವೆ.ಶಾಲೆಯಲ್ಲಿ ಒಂದರಿಂದ ಎಂಟನೇ ತರಗತಿ ವರೆಗೆ ಇದೆ.ಕೋವಿಡ್ ಲಾಕ್‌ಡೌನ್ ನಂತರ ಯಾರೊಬ್ಬರೂ ಶಾಲೆಯ ಕಡೆಗೆ ತಿರುಗಿ ನೋಡಿಲ್ಲ. ಈಗ ಶಾಲೆ ಜೂಜಾಟ, ಮದ್ಯಪಾನ ಮಾಡುವ ಅಡ್ಡೆಯಾಗಿ ಮಾರ್ಪಟ್ಟಿದೆ. ಸಂಜೆಯಾದರೆ ಜನರು ಅಲ್ಲಿ ಸೇರುತ್ತಾರೆ. ಶಾಲೆಯ ಸುತ್ತಲೂ ಕಾಂಪೌಂಡ್ ಇಲ್ಲದ್ದರಿಂದ ಮೂಲ ಮೂತ್ರ ವಿಸರ್ಜನೆ ಮಾಡುತ್ತಾರೆ.ಎಲ್ಲೆಡೆ ದುರ್ವಾಸನೆ ಹರಡಿದೆ.ಇಂತಹ ಪರಿಸರದಲ್ಲಿ ಮಕ್ಕಳು ಓದಲು ಸಾಧ್ಯವೇ’ ಎಂಬ ಪ್ರಶ್ನೆ ಕೇಳಿ ಬರುತ್ತಿದೆ.ಶಾಲೆಯ ಪರಿಸರದಲ್ಲಿ ನಡೆಯುತ್ತಿರುವ ಅಕ್ರಮಗಳಿಗೆ ಕಡಿವಾಣ ಹಾಕಬೇಕು.ಕಳಪೆ ಕಾಮಗಾರಿ ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು.ಅವರಿಗೆ ದಂಡ ವಿಧಿಸಬೇಕು. ಸುತ್ತಲೂ ಕಾಂಪೌಂಡ್ ನಿರ್ಮಿಸಬೇಕು’ ಎಂದು ಗ್ರಾಮಸ್ಥರು ಆಗ್ರಹಿಸಿ ಹಿರಿಯ ಅಧಿಕಾರಿಗಳಿಗೆ ದೂರನ್ನು ನೀಡಿದ್ದಾರೆ.