ಬೆಂಗಳೂರು –
ಮಾಜಿ ಸಚಿವ ವಿನಯ ಕುಲಕರ್ಣಿ ಅವರಿಗೆ ಧಾರವಾಡ ಜಿಲ್ಲೆಯ ಪ್ರವೇಶಕ್ಕೆ ನ್ಯಾಯಾಲಯ ಷರತ್ತುಗಳನ್ನು ವಿಧಿಸಿ ಅನುಮತಿ ಯನ್ನು ನೀಡಿದೆ ಹೌದು ಧಾರವಾಡದ ಹೆಬ್ಬಳ್ಳಿ ಜಿಲ್ಲಾ ಪಂಚಾಯತ ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸ್ಥಾನ ದಲ್ಲಿರುವ ವಿನಯ್ ಕುಲಕರ್ಣಿ ಅವರಿಗೆ ಧಾರವಾಡ ಜಿಲ್ಲೆಯ ಪ್ರವೇಶಕ್ಕೆ ಅದು ಕೇವಲ 3 ಗಂಟೆ ಮಾತ್ರ ಹುಬ್ಬಳ್ಳಿ ಪ್ರವೇಶಕ್ಕೆ ಅನುಮತಿ ನೀಡಿ ಆದೇಶ ವನ್ನು ಮಾಡಿದೆ.
ಹೌದು ಹುಬ್ಬಳ್ಳಿ ಭೇಟಿಗೆ ಷರತ್ತುಬದ್ದ ಅನುಮತಿ ನೀಡಿ ಕೋರ್ಟ್ ಆದೇಶವನ್ನು ಮಾಡಿದೆ ಸಹೋದರ ಸಂಬಂಧಿ ವಿಜಯ್ ಲಕ್ಷ್ಮೀ ಪಾಟೀಲ್ ಅನಾರೋಗ್ಯ ಹಿನ್ನೆಲೆಯಲ್ಲಿ ಅವರ ಭೇಟಿಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು ಈ ಒಂದು ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ ಅನುಮತಿ ನೀಡಿತು
ಹುಬ್ಬಳ್ಳಿಯ ಸುಚಿರಾಯು ಆಸ್ಪತ್ರೆಗೆ ಭೇಟಿ ನೀಡುವ ಸಲುವಾಗಿ ವಿನಯ್ ಕುಲಕರ್ಣಿ ಕೋರ್ಟ್ ಗೆ ಮನವಿ ಸಲ್ಲಿಸಿದರು.ಈ ಬಗ್ಗೆ ವಿಚಾರಣೆ ನಡೆಸಿದ ಬೆಂಗಳೂರಿನ ಜನಪ್ರತಿನಿ ಧಿಗಳ ವಿಶೇಷ ಕೋರ್ಟ್ 3 ಗಂಟೆ ಹುಬ್ಬಳ್ಳಿ ಭೇಟಿಗೆ ಷರತ್ತುಬದ್ದ ಅನುಮತಿ ನೀಡಿ ಆದೇಶ ಹೊರಡಿಸಿದೆ.
ಆಸ್ಪತ್ರೆ ಭೇಟಿ ಬಿಟ್ಟು ಬೇರೆ ಯಾವುದೇ ಚಟುವಟಿಕೆಯಲ್ಲಿ ಭಾಗವಹಿಸದಂತೆ ಕೋರ್ಟ್ ಸೂಚನೆ ನೀಡಿದೆ. ಇನ್ನೂ ಮೂರು ದಿನಗಳ ಕಾಲ ಅನುಮತಿ ಕೋರಿದ್ದರು ಅಂತಿಮವಾಗಿ ವಿನಯ್ ಕುಲಕರ್ಣಿ ಅವರಿ ಗೆ ಕೋರ್ಟ್ ಮೂರು ಗಂಟೆ ಗಳ ಕಾಲ ಮಾತ್ರ ಅವಕಾಶ ನೀಡಿದೆ.
ಇದೇಲ್ಲದರ ನಡುವೆ ಧಾರವಾಡ ಜಿಲ್ಲೆಯ ಪ್ರವೇಶಕ್ಕೆ ಹಾವೇರಿ ಯಿಂದ ಹುಬ್ಬಳ್ಳಿಗೆ ಬರಲು ಒಂದೂವರೆ ಗಂಟೆಗಳ ಅವಧಿ ಬೇಕು ಹೀಗಿರು ವಾಗ ಮೂರು ಗಂಟೆ ಸಾಲೊದಿಲ್ಲ ಹಾಗೇ ಸಾಕಷ್ಟು ಪ್ರಮಾಣದಲ್ಲಿ ಷರತ್ತು ಗಳನ್ನು ನ್ಯಾಯಾಲಯ ವಿಧಿಸಿದೆ ಹೀಗಾಗಿ ಇದು ಬೇಡ ಎಂದುಕೊಂಡಿರುವ ವಿನಯ ಕುಲಕರ್ಣಿ ಅವರು ವಿಚಾರದಲ್ಲಿ ತೊಡಗಿದ್ದಾರೆ ಏನು ಮಾಡತಾರೆ ಎಂಬುದನ್ನು ಕಾದು ನೋಡಬೇಕು
ಸುದ್ದಿ ಸಂತೆ ನ್ಯೂಸ್…..