ಬೆಂಗಳೂರು –
ಯೊಗೇಶಗೌಡ ಕೊಲೆ ಪ್ರಕರಣದಲ್ಲಿ ಬಂಧನ ವಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಜಾಮೀನು ಅರ್ಜಿಯ ವಿಚಾರಣೆಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ನಾಳೆಗೆ ಮುಂದೂಡಿದೆ. ಈ ಕುರಿತಂತೆ ಇಂದು ಮತ್ತೆ ಬೆಳಿಗ್ಗೆ ಅರ್ಜಿಯ ವಿಚಾರಣೆಯನ್ನು ಕೈಗೆ ತಗೆದು ಕೊಂಡ ಜನಪ್ರತಿನಿಧಿಗಳ ನ್ಯಾಯಮೂರ್ತಿ ಗಳು ಮೊದಲು ಸಿಬಿಐ ಪರವಾಗಿ ವಾದವನ್ನು ಆಲಿಸಿ ದರು. ಸಿಬಿಐ ಪರವಾಗಿ ಸರ್ವೋಚ್ಚ ನ್ಯಾಯಾಲಯ ದ ಹಿರಿಯ ನ್ಯಾಯವಾದಿ ಎಸ್ ವಿ ರಾಜು ವಾದ ವನ್ನು ಮಂಡನೆ ಮಾಡಿದರು. ಇನ್ನೂ ಇತ್ತ ಮಾಜಿ ಸಚಿವ ವಿನಯ ಕುಲಕರ್ಣಿ ಪರವಾಗಿ ಶಶಿಕಿರಣ ಶೆಟ್ಟಿ ಹಾಜರಾಗಿ ದ್ದರು.ಇನ್ನೂ ಈಗಾಗಲೇ ಇವತ್ತು ಸಿಬಿಐ ನಿಂದ ವಾದವನ್ನು ಮುಗಿಸಿದ್ದು ನಾಳೆ ಬೆಳಗ್ಗೆ ಮತ್ತೆ ವಿನಯ ಕುಲಕರ್ಣಿ ಪರವಾಗಿ ವಾದ ಮಂಡನೆ ಆರಂಭವಾಗ ಲಿದ್ದು ನಂತರ ಜಾಮೀನಿನ ತೀರ್ಪನ್ನು ಪ್ರಕಟ ಮಾಡಲಿದ್ದಾರೆ. ಒಟ್ಟಾರೆ ನಾಳೆ ಜಾಮೀನಿನ ವಿಚಾರ ಕುರಿತಂತೆ ವಿನಯ ಕುಲಕರ್ಣಿ ಭವಿಷ್ಯ ಏನಾಗಲಿದೆ ಎಂಬ ಕುರಿತಂತೆ ಭವಿಷ್ಯ ನಿರ್ಧಾರವಾಗಲಿದೆ.