ಬೆಂಗಳೂರು –
ಧಾರವಾಡದ ಜಿಲ್ಲಾ ಪಂಚಾಯತ ಹೆಬ್ಬಳ್ಳಿ ಕ್ಷೇತ್ರದ ಸದಸ್ಯ ಯೊಗೀಶೌಡ ಕೊಲೆ ಪ್ರಕರಣದಲ್ಲಿ ಬಂಧನ ವಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಜಾಮೀನು ಅರ್ಜಿಯನ್ನು ಬೆಂಗಳೂರಿನ ಹೈಕೊರ್ಟ್ ತಿರಸ್ಕಾರ ಮಾಡಿದೆ.ಈ ಒಂದು ಪ್ರಕರಣದಲ್ಲಿ ಜಾಮೀನು ಕುರಿತಂತೆ ಮಾಜಿ ಸಚಿವ ವಿನಯ ಕುಲಕರ್ಣಿ ಪರ ವಕೀಲರು ಅರ್ಜಿ ಸಲ್ಲಿಸಿದ್ದರು. ಈ ಕುರಿತಂತೆ ಈ ಹಿಂದೆ ಸಿಬಿಐ ಮತ್ತು ವಿನಯ ಕುಲಕರ್ಣಿ ಪರವಾಗಿ ವಾದ ವಿವಾದವನ್ನು ಆಲಿಸಿ ಅಂತಿಮವಾಗಿ ಕಳೆದ ತಿಂಗಳು 23 ರಂದು ಅಂತಿಮ ವಿಚಾರಣೆಯನ್ನು ನ್ಯಾಯವಾದಿಗಳಿಂದ ಮಾಡಿದ್ದರು.
ಎರಡು ಕಡೆಗಳಿಂದ ವಾದ ವಿವಾದಗಳನ್ನು ಆಲಿಸಿದ್ದ ನ್ಯಾಯಾಧೀಶರು ಅಂತಿಮ ಆದೇಶವನ್ನು ಕಾಯ್ದಿರಿ ಸಿದ್ದರು.ಇಂದು ಈ ಕುರಿತಂತೆ ಆದೇಶ ಮಾಡಿದ ಹೈಕೊರ್ಟ್ ನ್ಯಾಯಮೂರ್ತಿಗಳು ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದಾರೆ.
ಈಗಾಗಲೇ ಎರಡು ಮೂರು ಬಾರಿ ಜಾಮೀನು ಅರ್ಜಿ ವಜಾಗೊಂಡಿತ್ತು ಇಲ್ಲಿಯಾದರೂ ಜಾಮೀನು ಸಿಗುತ್ತದ ಎಂದುಕೊಳ್ಳಲಾಗಿತ್ತು ಇದರ ನಿರೀಕ್ಷೆಯಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಮತ್ತು ಆಪ್ತರು ಕುಟುಂಬದವರು ಅಭಿಮಾನಿಗಳಿದ್ದರು ಆದರೆ ಎಲ್ಲರ ನಿರೀಕ್ಷೆ ಹುಸಿಯಾಗಿದ್ದು ಅಲ್ಲಿ ಕೂಡಾ ಜಾಮೀನು ಅರ್ಜಿ ವಜಾಗೊಂಡಿದ್ದು ಇದರಿಂದ ಭರವಸೆ ಹುಸಿಯಾಗಿದ್ದು ಇನ್ನೂ ಸುಪ್ರೀಂ ಕೊರ್ಟ್ ನಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಲು ವಿನಯ ಕುಲಕರ್ಣಿ ಪರ ವಕೀಲರು ನಿರ್ಧರಿಸಿದ್ದಾರೆ. ಒಟ್ಟಾರೆ ಇಲ್ಲಿಯಾದರೂ ಜಾಮೀನು ಸಿಗುತ್ತದೆ ಎಂದುಕೊಂ ಡಿದ್ದ ಮಾಜಿ ಸಚಿವರಿಗೆ ನಿರಾಶೆಯಾಗಿದೆ