ಧಾರವಾಡ –
ಬಂಕಾಪುರದಲ್ಲಿ ವಿನೋದ್ ಅಸೂಟಿ ಬೃಹತ್ ರೋಡ್ ಶೋ – ಕ್ಷೇತ್ರದಲ್ಲಿ ವಿನೊದ ಅಸೂಟಿ ಗೆ ಕಂಡು ಬರುತ್ತಿದೆ ಭಾರಿ ಜನಬೆಂಬಲ…..
ಬಂಕಾಪುರದಲ್ಲಿ ಹಮ್ಮಿಕೊಂಡಿದ್ದ ಬೃಹತ್ ರೋಡ್ ಶೋನಲ್ಲಿ ಧಾರವಾಡ ಲೋಕಸಭೆಯ ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ ಅವರು ಮತಯಾಚನೆ ಮಾಡಿದರು.ಧಾರವಾಡ ಲೋಕ ಸಭಾ ವ್ಯಾಪ್ತಿಯ ಶಿಗ್ಗಾಂವ-ಸವಣೂರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರ ಮತ್ತು ಕಾರ್ಯಕರ್ತರ ಚುನಾವಣಾ ಪ್ರಚಾರ ಸಭೆ ಹಾಗೂ ಬೃಹತ್ ರೋಡ್ ಶೋ ಬಂಕಾಪೂರ ನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಅಸೂಟಿ ಅವರು ಕೊಟ್ಟ ಭರವಸೆಗಳನ್ನು ಕೇವಲ ಹತ್ತು ತಿಂಗಳೊಳಗೆ ಐದು ಗ್ಯಾರಂಟಿಗಳನ್ನು ಅನು ಷ್ಠಾನಗೊಳಿಸಿದ ಕೀರ್ತಿ ಕಾಂಗ್ರೆಸ್ ಪಕ್ಷದ್ದು. ಅದೇ ರೀತಿ ಕೇಂದ್ರದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ 25 ಭರವಸೆಗಳನ್ನು ಈಡೇರಿ ಸುತ್ತೇವೆ.
ಜೋಶಿಯವರು ಕೇವಲ ಚುನಾವಣೆಗೆ ಮಾತ್ರ ಹಳ್ಳಿಗಳಿಗೆ ಬರುತ್ತಾರೆ ಆದರೆ ಅಭಿವೃದ್ಧಿ ಮಾತ್ರ ಶೂನ್ಯ ಆದ್ದರಿಂದ ನಮ್ಮ ಪಕ್ಷದ ಕಾಂಗ್ರೆಸ್ ಬೆಂಬಲಿಸಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಧಾರವಾಡ ಲೋಕಸಭಾ ಅಧಿಕೃತ ಅಭ್ಯರ್ಥಿ ಶ್ರೀ ವಿನೋದ ಅಸೂಟಿ, ಸಚಿವರಾದ ಶ್ರೀ ಎಚ್ ಎಂ ರೇವಣ್ಣ, ವಿಧಾನಪ ರಿಷತ್ ಮುಖ್ಯ ಸಚೇತಕರಾದ ಸಲೀಂ ಅಹಮದ್ ಯಾಸೀರ ಅಹ್ಮದ ಖಾನ ಪಠಾಣ, ಸೋಮಣ್ಣ ಬೇವಿನಮರದ, ಬಿ ಸಿ ಪಾಟೀಲ್, ಎಮ್ ಜೆ ಮುಲ್ಲಾ,
ಶಿವಾನಂದ ರಾಮಗೇರಿ, ಗುಡ್ಡಪ್ಪ ಜಲ್ದಿ, ಪುರಸಭೆ ಸದಸ್ಯರು ಮತ್ತು ಹಿರಿಯರು, ಕಾಂಗ್ರೆಸ್ ಪಕ್ಷದ ಸಮಸ್ತ ಕಾರ್ಯಕರ್ತರು ಮತ್ತು ಯುವಕರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಧಾರವಾಡ…..