ಮಂತ್ರಾಲಯ –
ಮಂತ್ರಾಲಯದ ಗುರು ರಾಘವೇಂದ್ರರ ದರ್ಶನ ವನ್ನು ಮಾಜಿ ಸಚಿವ ಸಂತೋಷ್ ಲಾಡ್ ಪಡೆದು ಕೊಂಡರು.ಆಪ್ತರು ಸ್ನೇಹಿತರೊಂದಿಗೆ ಕ್ಷೇತ್ರಕ್ಕೆ ತೆರಳಿದ ಸಂತೋಷ್ ಲಾಡ್ ವಿಶೇಷವಾದ ಪೂಜೆ ಯನ್ನು ಸಲ್ಲಿಸಿದರು.

ಇಡೀ ದಿನ ಕ್ಷೇತ್ರದಲ್ಲಿ ಉಳಿದುಕೊಂಡ ಇವರು ಕ್ಷೇತ್ರದ ಜನತೆಗೆ ಕ್ಷೇತ್ರಕ್ಕೆ ಸದಾ ಕಾಲವೂ ಒಳ್ಳೇಯ ದಾಗಲಿ ಹಾಗೇ ತಮಗೂ ಒಳ್ಳೇಯದಾಗಲೆಂದು ವಿಶೇಷವಾದ ಪೂಜೆಯನ್ನು ಸಲ್ಲಿಸಿದರು.

ಮಂತ್ರಾಲಯದ ಗುರು ಶ್ರೀ ರಾಘವೇಂದ್ರರ ಸನ್ನಿಧಿ ಯಲ್ಲಿ ಸಂತೋಷ್ ಲಾಡ್ ರೊಂದಿಗೆ ಅವರ ಆಪ್ತ ಗೆಳೆಯರು ಮಿತ್ರರು ಸೇರಿದಂತೆ ಹಲವರು ಸಾಥ್ ನೀಡಿದರು.

ಇದೇ ವೇಳೆ ರಾಯರ ಅಭಯವೊಂದಿದ್ದರೆ ಎಲ್ಲ ಸಂಕಷ್ಟಗಳು ದೂರ ಎಂಬ ಪ್ರಾರ್ಥನೆಯನ್ನು ಸಂತೋಷ್ ಲಾಡ್ ಮಾಡಿದರು.