ಹಾಸನ –
ಸಾವು ಎನ್ನೊದು ಯಾವಾಗ ಯಾರಿಗೆ ಹೇಗೆ ಬರುತ್ತದೆ ಎಂಬೊದೇ ಗೊತ್ತಾಗೊದಿಲ್ಲ. ಹೀಗೆ ಇಂದು ಸಾವಿನ ಜೀವನ ಇದೆ. ಹೌದು ಇದಕ್ಕೆ ಸಾಕ್ಷಿ ಹಾಸನ ಜಿಲ್ಲೆಯಲ್ಲಿ ಸಾವಿಗೀಡಾದ ವೃದ್ದೆ. ಸಕಲೇಶಪುರ ತಾಲ್ಲೂಕಿನ ಮತ್ತೂರಿನಲ್ಲಿ 81 ವರ್ಷದ ರತ್ನಮ್ಮ ಎಂಬುವರು ಮತದಾನವನ್ನು ಮಾಡಿ ಮನೆಗೆ ಬಂದಿದ್ದಾರೆ.
ಚಂಗಡಹಳ್ಳಿ ಮತಗಟ್ಟೆಯಲ್ಲಿ ಮಧ್ಯಾಹ್ನ 12 ಘಂಟೆಗೆ ಮತದಾನವನ್ನು ಮಾಡಿ ಮನೆಗೆ ಬಂದಿದ್ದಾರೆ. ವೃದ್ದ ಅಜ್ಜಿ ರತ್ನಮ್ಮ ಎಂಬುವರು ಮತ್ತೂರಿನ ತಮ್ಮ ಮನೆಗೆ 1 ಗಂಟೆಗೆ ಮರಳಿ ಬಂದಿದ್ದಾರೆ. ನಂತರ ಅರ್ಧ ಘಂಟೆಯಲ್ಲಿ ಅಂದರೆ 1:30 ಕ್ಕೆ
ಸಾವನ್ನಪ್ಪಿದ್ದಾರೆ. ಈ ಹಿರಿಯ ಜೀವಿ ವೃದ್ದ ಮಹಿಳೆಗೆ ಹೃದಯಾಘಾತವಾಗಿದೆ.
ಹೃದಯಾಘಾತವಾಗುತ್ತಿದ್ದಂತೆ ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು ಎನ್ನುವಷ್ಟರಲ್ಲಿಯೇ ಅಜ್ಜಿ ಮನೆಯಲ್ಲಿಯೇ ನಿಧನರಾಗಿದ್ದಾರೆ. ಮತದಾನ ಮಾಡಿದ ನಂತರ ಮನೆಗೆ ವಾಪಸ್ಸಾದ ನಂತರ ಅಜ್ಜಿ ಸಾವಿಗೀಡಾಗಿದ್ದಾರೆ. ಅಜ್ಜಿ ರತ್ನಮ್ಮ ಜೀವನದ 81 ನೇ ವಯಸ್ಸಿನಲ್ಲೂ ಹಕ್ಕನ್ನು ಚಲಾವಣೆ ಮಾಡಿ ಸಾವಿಗೀಡಾಗಿದ್ದಾರೆ.