ಚಿತ್ರದುರ್ಗ –
ಮತದಾನ ಮಾಡಿ ಮನೆಗೆ ಹೋದ ನಂತರ ಅಜ್ಜಿಯೊಬ್ಬರು ಸಾವಿಗೀಡಾದ ಘಟನೆ ಚಿತ್ರದುರ್ಗ ದಲ್ಲಿ ನಡೆದಿದೆ.ಚಿತ್ರದುರ್ಗ ಜಿಲ್ಲೆಯ ಮೂರು ತಾಲ್ಲೂಕುಗಳಲ್ಲಿ ಇಂದು ಎರಡನೇ ಹಂತದ ಮತದಾನ ನಡೆಯಿತು.
ಇನ್ನೂ ಇಂದು ಚುನಾವಣೆಯಲ್ಲಿ ಮತದಾನ ಮಾಡಿದ 90 ವರ್ಷದ ಅಜ್ಜಿಯೊಬ್ಬರು ಮತದಾನ ಮಾಡಿ ವಾಪಸ್ ಮನೆಗೆ ತೆರಳುವ ವೇಳೆ ಅಜ್ಜಿ ಸಾವಿಗೀಡಾಗಿದ್ದಾರೆ.ಸರೋಜಮ್ಮ (90) ಮತದಾನ ಮಾಡಿ ಬಳಿಕ ಸಾವನ್ನಪ್ಪಿದ ಅಜ್ಜಿಯಾಗಿದ್ದಾರೆ.
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಶಿವಪುರ ಗ್ರಾಮದ ನಿವಾಸಿಯಾಗಿದ್ದಾರೆ.ಮಗ, ಮೊಮ್ಮಗನ ಜೊತೆ ಮತದಾನಕ್ಕೆ ತೆರಳಿದ್ದ ಅಜ್ಜಿ ಮತ ಚಲಾವಣೆ ಹಕ್ಕು ಚಲಾಯಿಸಿ ವಾಪಾಸ್ ಬರುವಾಗ ಸಾವಿಗೀಡಾಗಿದ್ದಾರೆ.