ಬೆಂಗಳೂರು –
ದಿನಾಂಕ 14-06-2022ಕ್ಕೆ ಕೊನೆಗೊಳ್ಳುತ್ತಿರುವಂತ ರಾಜ್ಯದ 7 ವಿಧಾನ ಪರಿಷತ್ ಸ್ಥಾನಗಳಿಗೆ ಚುನಾವಣಾ ಆಯೋಗ ಚುನಾವಣೆಯ ದಿನಾಂಕವನ್ನು ಘೋಷಣೆ ಮಾಡಿದೆ ಹೌದು ಚುನಾವಣೆ ನಡೆಸಲು ದಿನಾಂಕ ಘೋಷಣೆ ಮಾಡಲಾಗಿದೆ.ಈ ಸಂಬಂಧ ಪತ್ರಿಕಾ ಪ್ರಕಟಣೆ ಯಲ್ಲಿ ಮಾಹಿತಿ ಬಿಡುಗಡೆ ಮಾಡಿದ್ದು ಕರ್ನಾಟಕ ವಿಧಾನ ಪರಿಷತ್ತಿನ 7 ಸ್ಥಾನಗಳ ಅವಧಿಯು ದಿನಾಂಕ 14-06- 2022 ರಂದು ಕೊನೆಗೊಳ್ಳಲಿದೆ.ಈ ಸ್ಥಾನಗಳಿಗೆ ದಿನಾಂಕ 03-06-2022 ರಂದು ಮತದಾನ ನಡೆಯಲಿದೆ ಎಂಬುದಾಗಿ ತಿಳಿಸಿದೆ.
ಯಾವ ಯಾವ ಪರಿಷತ್ ಸದಸ್ಯರ ಕಾಲಾವಧಿ ಮುಕ್ತಾಯವಾಗಿದೆ ಗೊತ್ತಾ
- ಲಕ್ಷ್ಮಣ್ ಸವದಿ
- ರಾಮಪ್ಪ ತಿಮ್ಮಾಪುರ್
- ಅಲ್ಲಂ ವೀರಭದ್ರಪ್ಪ
- ಹೆಚ್ ಎಂ ರಮೇಶ್ ಗೌಡ
- ವೀಣಾ ಅಚ್ಚಯ್ಯ ಎಸ್
- ನಾರಾಯಣ ಸ್ವಾಮಿ ಕೆ.ವಿ
- ಲೇಹರ್ ಸಿಂಗ್
ಹೀಗಿದೆ 7 ಸ್ಥಾನಗಳಿ ನಡೆಯುತ್ತಿರುವ ಚುನಾವಣಾ ದಿನಾಂಕಗಳ ಮಾಹಿತಿ
• ದಿನಾಂಕ 17-05-2022ರಂದು ಚುನಾವಣಾ ಅಧಿಸೂಚನೆ ಪ್ರಕ
• ದಿನಾಂಕ 24-05-2022ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನ
• ದಿನಾಂಕ 25-05-2022ರಂದು ನಾಮಪತ್ರಗಳ ಪರಿಶೀಲನೆ
• ದಿನಾಂಕ 27-05-2022ರಂದು ನಾಮಪತ್ರ ವಾಪಾಸ್ ಪಡೆಯಲು ಕೊನೆ ದಿನ
• ದಿನಾಂಕ 03-06-2022ರಂದು ಮತದಾನ ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆಯಲಿದೆ.
• ದಿನಾಂಕ 03-06-2022ರಂದು ಸಂಜೆ 5 ಗಂಟೆಗೆ ಮತಏಣಿಕೆ ಕಾರ್ಯ ನಡೆದು, ಫಲಿತಾಂಶ ಘೋಷಣೆ
• ದಿನಾಂಕ 07-06-2022ರಂದು ಚುನಾವಣಾ ಕಾರ್ಯ ಮುಕ್ತಾಯ