ಬೆಂಗಳೂರು –
ಶಿಕ್ಷಕರ ವರ್ಗಾವಣೆ ವಿಚಾರ ಕುರಿತು ನಾಳೆ ಮಹತ್ವದ ವಿಡಿಯೋ ಕಾನ್ಪರನ್ಸ್ ನಡೆಯಲಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಅನ್ವಕುಮಾರ್ ಈ ಒಂದು ವಿಡಿಯೋ ಕಾನ್ಪರನ್ಸ್ ನಡೆಸಲಿದ್ದಾರೆ.ಇನ್ನೂ ಪ್ರಮುಖವಾಗಿ ಶಿಕ್ಷಕರ ವರ್ಗಾವಣೆ ವಿಚಾರ ಕುರಿತು ಮಹತ್ವದ ಕಾನ್ಪರನ್ಸ್ ನಲ್ಲಿ ರಾಜ್ಯದ ಎಲ್ಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ
ಇದರೊಂದಿಗೆ ಮುಖ್ಯವಾಗಿ ವರ್ಗಾವಣೆಯಲ್ಲಿ ಕೆಲವೊಂದಿಷ್ಟು ಬದಲಾವಣೆ ಕುರಿತು ನಾಡಿನ ಶಿಕ್ಷಕರು ಬೇಡಿಕೆ ಇಟ್ಟಿದ್ದು ಈ ಒಂದು ಕಾನ್ಪರನ್ಸ್ ನಲ್ಲಿ ಏನಾದರೂ ಬದಲಾವಣೆ ಆಗುತ್ತವೆನಾ ಎಂಬ ನಿರೀಕ್ಷೆಯಲ್ಲಿ ನಾಡಿನ ಶಿಕ್ಷಕರಿದ್ದು ಈ ಒಂದು ವಿಡಿಯೋ ಕಾನ್ಪರನ್ಸ್ ನ ಮೇಲೆ ಎಲ್ಲರ ಚಿತ್ತ ಇದ್ದಿದ್ದು ಏನೇನಾಗುತ್ತದೆ ಎಂಬುದನ್ನು ಕಾದು ನೋಡಬೇಕು