ಬೆಂಗಳೂರು –
ಯಾರಿಗೂ ಯಾವ ಇಲಾಖೆಗೂ ಇಲ್ಲದ ಅವೈಜ್ಞಾನಿಕವಾದ ಈ ಒಂದು ವರ್ಗಾವಣೆಯ ನೀತಿಯಿಂದಾಗಿ ನಾಡಿನ ಶಿಕ್ಷಕರು ಬೇಸತ್ತಿದ್ದಾರೆ.ಈವರೆಗೆ ಕಾದು ಕಾದು ನೋಡಿ ಬೇಸತ್ತಿರುವ ಶಿಕ್ಷಕರ ಅಮಾಧಾನದ ಕಟ್ಟೆ ಒಡೆದಿದ್ದು ಒಂದೆರೆಡು ಬಾರಿ ಬೆಂಗಳೂರು ಹೋರಾಟ ಮಾಡಿ ಮನ ವೊಲಿಕೆ ಮಾಡಿದವರ ಭರವಸೆಯ ಮಾತುಗಳನ್ನು ಕೇಳಿ ಕೇಳಿ ಸಾಲದಂತೆ ಆಗುತ್ತದೆ ಕಾದು ನೊಡೋಣಾ ಎಂದು ಕೊಂಡು ಕಾದು ಕಾದು ಕೊನೆಗೆ ಈಗ ದೊಡ್ಡ ಪ್ರಮಾಣದಲ್ಲಿ ಹೋರಾಟಕ್ಕೆ ಸಿದ್ದತೆಯನ್ನು ಮಾಡಿಕೊಳ್ಳುತ್ತಿದ್ದಾರೆ.
ಹೌದು ಈಗಾಗಲೇ ಗ್ರಾಮೀಣ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಪವಾಡೆಪ್ಪ ಮತ್ತು ಮಹೇಶ್ ಮಡ್ಡಿ ನೇತ್ರತ್ವ ದಲ್ಲಿ ನಿರಂತರವಾಗಿ ಆನ್ ಲೈನ್ ಸಭೆ ಅವರಿವರ ಸಂಪರ್ಕ ಸಾಲದಂತೆ ರಾಜ್ಯದ ಮೂಲೆ ಮೂಲೆಗಳಿಂದ ಶಿಕ್ಷಕರು ಸಿಕ್ಕ ಸಿಕ್ಕ ಜನಪ್ರತಿನಿಧಿಗಳ ಶಿಫಾರಸ್ಸು ಪತ್ರ ಗಳನ್ನು ತಗೆದುಕೊಂಡು ಈಗ ಆ ಎಲ್ಲಾ ಜನಪ್ರತಿನಿಧಿಗಳ ಪತ್ರಗಳನ್ನು ಒಂದೆಡೆ ಸೇರಿಸಿಕೊಂಡು ಇವುಗಳೊಂದಿಗೆ ಹೇಗಾದರೂ ಮಾಡಿ ಈ ಬಾರಿಯಾದರೂ ಸ್ವಂತ ಜಿಲ್ಲೆಗೆ ವರ್ಗಾವಣೆ ಪ್ರಕ್ರಿಯೆ ಆರಂಭ ಮಾಡಬೇಕೆಂಬ ಉತ್ಸಾಹ ದಲ್ಲಿ ಶಿಕ್ಷಕರಿದ್ದು ಇದಕ್ಕಾಗಿ ದೊಡ್ಡ ಪ್ರಮಾಣದಲ್ಲಿ ಹೋರಾ ಟಕ್ಕಾಗಿ ವೇದಿಕೆ ಸಿದ್ದವಾಗುತ್ತಿದೆ.
ಇನ್ನೂ ಶಿಕ್ಷಕರು ಬೀದಿಗಿಳಿ ಯುವ ಮುನ್ನವೇ ದಯಮಾಡಿ ಶಿಕ್ಷಣ ಸಚಿವರೇ ಈ ಕೂಡಲೇ ಹೋರಾಟ ಆರಂಭವಾ ಗುವ ಮುನ್ನವೇ ಸ್ವಂತ ಜಿಲ್ಲೆಗೆ ಬಯಸಿರುವ ಶಿಕ್ಷಕರ ನೋವಿಗೆ ಸ್ಪಂದಿಸಿ ಸ್ವಂತ ಜಿಲ್ಲೆಗೆ ವರ್ಗಾವಣೆ ನೀಡಿ ನೆಮ್ಮ ದಿಯೊಂದಿಗೆ ಕುಟುಂಬದೊಂದಿಗೆ ಇದ್ದುಕೊಂಡು ಕರ್ತವ್ಯ ಮಾಡಲು ಅನುಕೂಲ ಮಾಡಿಕೊಡಿ ಸಮಾಜದಲ್ಲಿ ದೊಡ್ಡ ಸ್ಥಾನದಲ್ಲಿರುವ ಶಿಕ್ಷಕರಿಗೆ ಕಣ್ಣೀರು ಹಾಕಿಸಿದರೆ ನಿಮಗೆ ಸರ್ಕಾರಕ್ಕೆ ಒಳ್ಳೇಯದಲ್ಲ ಸಚಿವರೇ ಇನ್ನಾದರೂ ಒಮ್ಮೆ ವಿಚಾರ ಮಾಡಿ ನೋಡಿ…………..