ಬೆಂಗಳೂರು –
OPS ಗಾಗಿ ಡಿಸೆಂಬರ್ 19 ರಂದು ಬೆಂಗಳೂರಿ ನಲ್ಲಿ ರಾಜ್ಯದ ಎನ್ ಪಿಎಸ್ ನೌಕರರ ಶಕ್ತಿ ಪ್ರದರ್ಶನ ನಡೆಯಲಿದೆ.ಈಗಾಗಲೇ ಈ ಕುರಿತಂತೆ ರಾಜ್ಯದ ಮೂಲೆ ಮೂಲೆಗಳಿಂದ ಅಪಾರ ಸಂಖ್ಯೆಯಲ್ಲಿ ಎನ್ ಪಿಎಸ್ ನೌಕರರು ಬೆಂಗಳೂರಿಗೆ ಹೋಗಲು ಸಿದ್ದರಾಗಿದ್ದಾರೆ.
ಮಾಡು ಇಲ್ಲವೇ ಈ ಒಂದು ಹೋರಾಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ವಿಜಯಪುರದ ಹನುಮಂತ ಬೂದಿಹಾಳ ಶಿಕ್ಷಕ ಕುಟುಂಬದವರು ಕರೆ ನೀಡಿದ್ದಾರೆ.ಈ ಕುರಿತಂತೆ ಕುಟುಂಬ ಸಮೇತ ರಾಗಿ ಈಗಾಗಲೇ ವಿಡಿಯೋ ವೊಂದನ್ನು ಮಾಡಿ ಎನ್ ಪಿ ಎಸ್ ನೌಕರರಿಗೆ ಈ ಒಂದು ಹೋರಾಟ ದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದ್ದಾರೆ.
ಶಿಕ್ಷಕ ಹನುಮಂತ ಬೂದಿಹಾಳ ಶಿಕ್ಷಕರಾಗಿದ್ದು ಇವರ ಪತ್ನಿ ಯವರು ಕೂಡಾ ಶಿಕ್ಷಕಿಯರಾಗಿದ್ದು ಇಬ್ಬರು ಮಕ್ಕಳೊಂದಿಗೆ ಇವರು ಡಿಸೆಂಬರ್ 19 ರ ಹೋರಾಟಕ್ಕೆ ಸಿದ್ದರಾಗಿದ್ದು ಕುಟುಂಬ ಸಮೇತ ರಾಗಿ ನಾವು ಹೋಗತಾ ಇದ್ದೇವಿ ನೀವು ಬನ್ನಿ ನಿಮ್ಮ ಜೊತೆಗಾರರನ್ನು ಕರೆದುಕೊಂಡು ಬನ್ನಿ ಎಂಬ ಸಂದೇಶವನ್ನು ನೀಡಿ ತಪ್ಪದೇ ಬೆಂಗಳೂ ರಿಗೆ ಬನ್ನಿ ಎಂದು ಕರೆ ನೀಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ವಿಜಯಪುರ…..