ಹಾವೇರಿ –
ಯುಕ್ರೇನ್ ನ ಯುದ್ದಭೂಮಿಯಲ್ಲಿ ನಿನ್ನೆಯಷ್ಟೇ ರಾಜ್ಯದ ಹಾವೇರಿ ಜಿಲ್ಲೆಯ ನವೀನ್ ಸಾವಿನ ಬೆನ್ನಲ್ಲೇ ಅದೇ ಜಿಲ್ಲೆಯ ವಿದ್ಯಾರ್ಥಿನಿಯೊಬ್ಬಳನ್ನು ಸುರಕ್ಷಿತವಾಗಿ ಕೇಂದ್ರ ಸರ್ಕಾರ ಅದರಲ್ಲೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸುರಕ್ಷಿತವಾಗಿ ಕರೆ ತಂದಿದ್ದಾರೆ.ಹೌದು ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಮೈನಾ ನಾಯ್ಕ ಎಂಬ ವಿದ್ಯಾರ್ಥಿನಿ ಯುಕ್ರೇನ್ ನ ಪಶ್ಛಿಮ ಭಾಗದಲ್ಲಿ ವೈಧ್ಯಕೀಯ ಕೊರ್ಸ್ ಕಲಿಯುತ್ತಿದ್ದಳು.

ಮೊದಲನೇಯ ವರ್ಷದಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದ ಮೈನಾ ನಾಯ್ಕ ಅವರನ್ನು ಕೇಂದ್ರ ಸರ್ಕಾರ ಆಪರೇಶನ್ ಗಂಗಾ ಮೂಲಕ ಸುರಕ್ಷಿತವಾಗಿ ಕರೆದುಕೊಂಡು ಬಂದಿದ್ದು ಅದರಲ್ಲೂ ಈ ಒಂದು ಕಾರ್ಯದಲ್ಲಿ ಕೇಂದ್ರ ಸರ್ಕಾರದ ಪ್ರಧಾನಿ ನರೇಂದ್ರ ಮೋದಿ ಹಾಗೆ ಸಚಿವ ಪ್ರಹ್ಲಾದ್ ಜೋಶಿ ಅವರ ಪ್ರಯತ್ನ ಹೆಚ್ಚಾಗಿದ್ದು ಹೀಗಾಗಿ ಮೈನಾ ನಾಯ್ಕ ಅವರು ಸುರಕ್ಷಿತವಾಗಿ ತವರು ಜಿಲ್ಲೆಗೆ ಆಗಮಿಸಿದ್ದು ಮನೆಗೆ ಬರುತ್ತಿದ್ದಂತೆ ತಾಯಿಯೊಂದಿಗೆ ನಾನು ಸುರಕ್ಷಿತ ವಾಗಿ ಬರಲು ಕೇಂದ್ರ ಸರ್ಕಾರ ಅದರಲ್ಲೂ ಪ್ರಮುಖವಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಪ್ರಯತ್ನ ಸಾಕಷ್ಟಿ ದ್ದು ಹೀಗಾಗಿ ನಾನು ಏನಾದರೂ ಬದುಕಿ ಇಲ್ಲಿಗೆ ಬಂದಿದ್ದೆನೆ ಎಂದರೆ ಅದಕ್ಕೆ ಅವರೇ ಕಾರಣ ಎಂದು ಮನದಾನದಿಂದ ಧನ್ಯವಾದಗಳನ್ನು ಹೇಳಿದ್ದಾರೆ.
ಇದರೊಂದಿಗೆ ಕೇಂದ್ರ ಸರ್ಕಾರದ ಅದರಲ್ಲೂ ಪ್ರಹ್ಲಾದ್ ಜೋಶಿ ಅವರ ಕಾರ್ಯವನ್ನು ನಾಯ್ಕ ಕುಟುಂಬದವರು ಮೆಚ್ಚಿಕೊಂಡು ಹೃದಯಪೂರ್ವಕವಾಗಿ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.
ವರದಿ ಮಂಜುನಾಥ ಸರ್ವಿ ,ಕ್ಯಾಮೆರಾ ಪರಶುರಾಮ ಗೌಡರ