ಹಾವೇರಿ –
ಗ್ರಾಮ ಪಂಚಾಯತ ಚುನಾವಣೆ ಕರ್ತವ್ಯಕ್ಕೇ ಬಂದ ಸಿಬ್ಬಂದಿಗಳು ಊಟಕ್ಕಾಗಿ ಪರದಾಡಿದ ಘಟನೆ ಹಾವೇರಿಯಲ್ಲಿ ನಡೆದಿದೆ.ಎರಡನೇ ಹಂತದ ಗ್ರಾಂ.ಪಂ ಚುನಾವಣೆ ಹಿನ್ನೆಲೆ.ಚುನಾವಣೆಗೆ ನಿಯೋಜನೆ ಮಾಡಿದ್ದ ಸಿಬ್ಬಂದಿಗೆ ಜಿಲ್ಲಾಡಳಿತ ಸರಿಯಾಗಿ ಊಟವ ವ್ಯವಸ್ಥೆಯನ್ನು ಮಾಡಿಲ್ಲವಂತೆ. ಹಾವೇರಿ ಜಿಲ್ಲೆ ಶಿಗ್ಗಾವಿ ಪಟ್ಟಣದಲ್ಲಿ ಈ ಒಂದು ಘಟನೆ ನಡೆದಿದೆ.

ನಮಗೆ ಊಟ ನೀಡಿ ಎಂದು ಜಿ.ಎಮ್.ಜಿ ಶಾಲೆ ಮುಂದೆ ಕುಳಿತ ನೂರಾರು ಸಿಬ್ಬಂದಿ.ಏನ್ ಸಾರ್ ಬೆಳಿಗ್ಗೆಯಿಂದ ತಿಂಡಿ ಕೊಟ್ಟಿಲ್ಲಾ ಈಗ ಊಟವೂ ಖಾಲಿ ಯಾಗಿದೆ ನಾವೇನೂ ಮಾಡೋಣ ನೋಡಿ ಸರ್ ಎಂದು ಹೋರಾಟ ಮಾಡಿದರು.ಶಿಗ್ಗಾವಿ ತಾಲೂಕು ಕೇಂದ್ರಕ್ಕೆ ತೆರಳಲು ಬಂದಿದ್ದ ನಿಯೋಜಿತ ಸರ್ಕಾರಿ ನೌಕರರು ಸರಿಯಾದ ಊಟವಿಲ್ಲವೆಂದು ತಟ್ಟೆ ಹಿಡಿದು ರಸ್ತೆಗಳಿದು ಪ್ರತಿಭಟನೆ ಮಾಡಿದರು.

ಸುಮಾರು ನೂರಕ್ಕೂ ಹೆಚ್ಚು ಸಿಬ್ಬಂದಿಗೆ ಬೆಳಿಗ್ಗಿನ ತಿಂಡಿ ಮತ್ತು ಮಧ್ಯಾಹ್ನದ ಊಟವಿಲ್ಲದೆ ಪರದಾಟ ಮಾಡಿದ ಚಿತ್ರಣ ಕಂಡು ಬಂದಿತು. ಶಿಗ್ಗಾವಿ ತಹಶೀಲ್ದಾರರು ಚುಣಾವಣೆ ಸಿಬ್ಬಂದಿಗೆ ಸರಿಯಾದ ವ್ಯವಸ್ಥೆ ಮಾಡಿಲ್ಲ ಎಂದು ಆರೋಪ ಮಾಡಿದರು.

ಇದು ಶಿಗ್ಗಾವಿ ತಾಲೂಕಾಡಳಿತ ವೈಪ್ಯಲ್ಯ ಎಂದು ಸಿಬ್ಬಂದಿ ಆಕ್ರೋಶವನ್ನು ವ್ಯಕ್ತಪಡಿಸಿದರು. ಇನ್ನೂ ಈ ಒಂದು ವಿಷಯ ತಿಳಿದ ಹಿರಿಯ ಅಧಿಕಾರಿಗಳು ಸ್ಥಳಕ್ಕೇ ಆಗಮಿಸಿ ಸಮಸ್ಯೆಯನ್ನು ಪರಿಹಾರ ಮಾಡಿ ಪ್ರತಿಭಟನೆ ಮಾಡುತ್ತಿದ್ದ ಅಧಿಕಾರಿಗಳನ್ನು ಕರ್ತವ್ಯಕ್ಕೆ ಕಳುಹಿಸಿಕೊಟ್ಟರು.