ಬೆಂಗಳೂರು –
ರಾಜ್ಯಾಧ್ಯಂತ ಇಂದು ಸಂಜೆಯಿಂದ ವಾರಾಂತ್ಯ ಲಾಕ್ ಡೌನ್ ಜಾರಿಗೊಳಿಸಲಾಗುತ್ತಿದೆ.ಈ ಸಂದರ್ಭ ದಲ್ಲಿ ಕರ್ತವ್ಯಕ್ಕೆ ಹಾಜರಾಗುವಂತ ಎಲ್ಲಾ ಶಿಕ್ಷಕರಿಗೆ ಹಾಗೂ ಕಾರ್ಯಾಲಯದ ಸಿಬ್ಬಂದಿಗಳಿಗೆ ಹಾಜ ರಾತಿ ವಿನಾಯ್ತಿ ನೀಡಲಾಗಿದೆ.ಈ ಕುರಿತು ಸ್ಪಷ್ಟವಾಗಿ ಆದೇಶವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಮಾಡಿ ಆದೇಶಿಸಿದೆ.
ಈ ಕುರಿತಂತೆ ರಾಜ್ಯದ ಹಲವು ಜಿಲ್ಲೆಗಳ ಕ್ಷೇತ್ರ ಶಿಕ್ಷ ಣಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ ಸರ್ಕಾರದ ಮಾರ್ಗಸೂಚಿಯಂತೆ ದಿನಾಂಕ 19-06-2021 ರಿಂದ 20-06-2021ರವರೆಗೆ ವಾರಾಂತ್ಯ ಲಾಕ್ ಡೌನ್ ಘೋಷಣೆ ಮಾಡಲಾಗಿದೆ ಈ ಸಂದರ್ಭದಲ್ಲಿ ಕಾರ್ಯಾಲಯದ ಅಧಿಕಾರಿಗಳು,ಸಿಬ್ಬಂದಿ ವರ್ಗದ ವರಿಗೆ ಹಾಗೂ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ, ಪ್ರೌಢ ಶಾಲೆಗಳ ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಯವರಿಗೆ ಕಾರ್ಯಾಲಯ ದ, ಶಾಲೆಗಳ ಹಾಜರಾತಿಗೆ ವಿನಾಯಿತಿಯನ್ನು ನೀಡಿ ಆದೇಶಿಸಿದ್ದಾರೆ