ಬೆಂಗಳೂರು –
ಮಹಾ ಸಮ್ಮೇಳನಕ್ಕೆ ಕರ್ನಾಟಕ ರಾಜ್ಯ ಷಡಾಕ್ಷರಿ ಅಭಿಮಾನಿಗಳ ಬಳಗದಿಂದ ಸ್ವಾಗತ – ರಾಜ್ಯ ಸಂಚಾಲಕ ಬೂದನೂರು ಮಹೇಶ್ ಮಂಡ್ಯ ಮತ್ತು ಸರ್ವಸದಸ್ಯರಿಂದ ಹಾರ್ದಿಕ ಸ್ವಾಗತ ಬನ್ನಿ ಸಮ್ಮೇಳನ ಯಶಸ್ವಿಗೊಳಿಸಿ ಬಂಧುಗಳೇ
ಫೆಬ್ರುವರಿ 27 ರಂದು ಬೆಂಗಳೂರಿನಲ್ಲಿ ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನ ಕಾರ್ಯ ಕ್ರಮ ನಡೆಯಲಿದೆ.ಈಗಾಗಲೇ ಈ ಒಂದು ಐತಿಹಾಸಿಕ ಸಮಾರಂಭಕ್ಕೆ ಎಲ್ಲಾ ಸಿದ್ದತೆಗಳು ಅಂತಿಮ ಹಂತದಲ್ಲಿ ನಡೆದಿದ್ದು ಇನ್ನೂ ರಾಜ್ಯದ ಮೂಲೆ ಮೂಲೆಗಳಿಂದ ಅಪಾರ ಸಂಖ್ಯೆಯಲ್ಲಿ ನೌಕರರು ಕೂಡಾ ಹೋಗುತ್ತಿದ್ದು ಈ ನಡುವೆ ಈ ಒಂದು ಸಮ್ಮೇಳನಕ್ಕೆ ಬರುವ ಸರ್ವ ಸರ್ಕಾರಿ ನೌಕರರನ್ನು ಕರ್ನಾಟಕ ರಾಜ್ಯ ಷಡಾಕ್ಷರಿ ಅಭಿಮಾನಿಗಳ ಬಳಗದಿಂದ ಸ್ವಾಗತವನ್ನು ಕೋರಲಾಗಿದೆ.
ಹೌದು ಸಂಘಟನೆಯ ರಾಜ್ಯ ಸಂಚಾಲಕ ಬೂದನೂರು ಮಹೇಶ್ ಮಂಡ್ಯ ಅವರು ಅಭಿಮಾನಿಗಳ ಬಳಗದ ಪರವಾಗಿ ಸಮ್ಮೇಳನಕ್ಕೆ ಬರುವ ಪ್ರತಿಯೊಬ್ಬ ಸರ್ಕಾರಿ ನೌಕರರನ್ನು ಸ್ವಾಗತ ಕೋರಿದ್ದಾರೆ.ಬನ್ನಿ ಸರ್ಕಾರಿ ನೌಕರರ ಈ ಒಂದು ಐತಿಹಾಸಿಕ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿ ಎಂದು ಕರೆ ನೀಡಿದ್ದಾರೆ.ಫೆಬ್ರುವರಿ 27.02.2024 ರಂದು ಅರಮನೆ ಮೈದಾನದಲ್ಲಿ ಈ ಒಂದು ಕಾರ್ಯಕ್ರಮ ನಡೆಯಲಿದ್ದು
ಪ್ರಮುಖವಾಗಿ ರಾಜ್ಯದ ನೌಕರರ ಬೇಡಿಕೆಗಳಾದ 7 ನೇ ವೇತನ ಆಯೋಗದ ಶೀಘ್ರ ವರದಿ ಜಾರಿ, ಹಳೆ ಪಿಂಚಣಿ ಯೋಜನೆಯನ್ನು ಮರು ಸ್ಥಾಪಿಸು ವುದು,ಆರೋಗ್ಯ ಸಂಜೀವಿನಿ ಯೋಜನೆಯನ್ನು ಲೋಕಾರ್ಪಣೆಗೊಳಿಸುವುದು ಈ ಮೂರು ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮತ್ತು ಮುಂತಾದ ಪ್ರಮುಖ ಬೇಡಿಕೆಗಳ ಜಾರಿ ಗಾಗಿ ಹಾಗೂ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು
ಕರ್ನಾಟಕ ರಾಜ್ಯದ ಎಲ್ಲಾ ಸರ್ಕಾರಿ ನೌಕರ ಬಂಧುಗಳು ಷಡಕ್ಷರಿ ಅಭಿಮಾನಿ ಬಳಗದವರು ಎಲ್ಲರೂ ಭಾಗವಹಿಸಿ ಮಹಾ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕಾಗಿ ಕೋರಲಾಗಿದೆ. ಸಂಘಟನೆಯ ಸರ್ವ ಸದಸ್ಯರ ಪರವಾಗಿ ರಾಜ್ಯ ಸಂಚಾಲಕರಾಗಿರುವ ಬೂದನೂರು ಮಹೇಶ್ ಮಂಡ್ಯ ಅವರು ಕೋರಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..