ಹಳೆಯ ಪಿಂಚಣಿ ಯೋಜನೆಯ ಅನುಕೂಲಗಳೇನು – ಯಾತಕ್ಕಾಗಿ ಇದನ್ನೇ ಜಾರಿಗೆ ಒತ್ತಾಯಿಸುತ್ತಿದ್ದಾರೆ ನೌಕರರು ಗೊತ್ತಾ ಈ ಕುರಿತಂತೆ ಒಂದಿಷ್ಟು ಮಾಹಿತಿ

Suddi Sante Desk
ಹಳೆಯ ಪಿಂಚಣಿ ಯೋಜನೆಯ ಅನುಕೂಲಗಳೇನು  –  ಯಾತಕ್ಕಾಗಿ ಇದನ್ನೇ ಜಾರಿಗೆ ಒತ್ತಾಯಿಸುತ್ತಿದ್ದಾರೆ ನೌಕರರು ಗೊತ್ತಾ ಈ ಕುರಿತಂತೆ ಒಂದಿಷ್ಟು ಮಾಹಿತಿ

ಬೆಂಗಳೂರು –

ಸಧ್ಯ ದೇಶದೆಲ್ಲೇಡೆ ಹೊಸ ಪಿಂಚಣಿ ಯೋಜನೆ ಯೂ ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರಿಗೆ ಜಾರಿಯಲ್ಲಿದೆ.ಹೊಸ ಪಿಂಚಣಿ ಯೋಜನೆ 1ನೇ ಏಪ್ರಿಲ್ 2009 ರಂದು ಇದನ್ನು ಜಾರಿಗೆ ತರಲಾ ಯಿತು.ಹಳೆ ಪಿಂಚಣಿ ಯೋಜನೆಯನ್ನು ಸರ್ಕಾರದ ಅಸ್ತಿತ್ವದಲ್ಲಿರುವ ಪಿಂಚಣಿ ನಿಧಿಯು ಖಚಿತವಾದ ಪ್ರಯೋಜನಗಳನ್ನು ನೌಕರರಿಗೆ ಸಧ್ಯ ನೀಡಲಾಗುತ್ತಿದೆ

ಹೊಸ ಪಿಂಚಣಿ ಯೋಜನೆಯು ವ್ಯಾಖ್ಯಾನಿಸ ಲಾದ ಕೊಡುಗೆ ರಚನೆಯನ್ನು ಹೊಂದಿದೆ ಇದು ವ್ಯಕ್ತಿಯು ತನ್ನ ಕೊಡುಗೆ ಹಣವನ್ನು ಎಲ್ಲಿ ಹೂಡಿಕೆ ಮಾಡಬೇಕೆಂದು ನಿರ್ಧರಿಸುವ ಆಯ್ಕೆಯನ್ನು ನೀಡುತ್ತದೆ.ಹೊಸ ಪಿಂಚಣಿ ಯೋಜನೆಯು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಉದ್ಯೋಗಿಗಳಿಗೆ ನೀಡಲಾಗುವ ಯೋಜನೆಯನ್ನು ಹೋಲುವ ಉದ್ದೇಶವನ್ನು ಹೊಂದಿದೆ

ಆದಾಗ್ಯೂ ಕೆಲವು ವ್ಯತ್ಯಾಸಗಳಿವೆ. NPS ತನ್ನ ಜಾಗತಿಕ ವಿನಾಯತಿ-ತೆರಿಗೆ ರಚನೆಯನ್ನು ಅನುಸರಿಸುತ್ತದೆ ಆದರೆ 60 ವರ್ಷಗಳ ನಂತರ ಹಿಂತೆಗೆದುಕೊಳ್ಳುವ ಮೊತ್ತವು ಹೂಡಿಕೆಯಾಗಿ ಉಳಿಯಲು ಅಥವಾ ಸಂಪೂರ್ಣವಾಗಿ ಹಿಂತೆಗೆ ದುಕೊಳ್ಳಲು ಸಾಧ್ಯವಿಲ್ಲ.ಹಳೆಯ ಪಿಂಚಣಿ ಯೋಜನೆಯಿಂದ ಮತ್ತೊಂದು ಪ್ರಮುಖ ವ್ಯತ್ಯಾಸವೆಂದರೆ ಅಕಾಲಿಕ ಹಿಂಪಡೆಯುವಿಕೆ ಯನ್ನು ಶ್ರೇಣಿ I ಖಾತೆಯಲ್ಲಿ ಅನುಮತಿಸಲಾಗು ವುದಿಲ್ಲ ಆದರೆ ಶ್ರೇಣಿ II ಖಾತೆಯಲ್ಲಿ ಅನುಮತಿಸ ಲಾಗಿದೆ.

ಇದು ಸರ್ಕಾರಿ ನೌಕರರಿಗೆ ಮರಣ ಶಾಸನವಾಗಿ ರುವ ಪಿಂಚಣಿ ಯೋಜನೆ ಕುರಿತಂತ ಕಥೆಯಾ ದರೆ ಇನ್ನೂ ಈ ಒಂದು ಯೋಜನೆಯನ್ನು ಜಾರಿ ಮಾಡಲಾಗಿದ್ದು ಆರಂಭದಿಂದಲೂ ಈವರೆಗೆ ಇದನ್ನು ವಿರೋಧ ಮಾಡುತ್ತಾ ಬರುತ್ತಿರುವ ಸರ್ಕಾರಿ ನೌಕರರು ಈಗಲೂ ಕೂಡಾ ಸಾಕಷ್ಟು ಪ್ರಮಾಣದಲ್ಲಿ ಹೋರಾಟವನ್ನು ಮಾಡುತ್ತಿದ್ದು ವಿರೋಧಿಸುತ್ತಿದ್ದಾರೆ ಇನ್ನೂ ಒಂದು ವಿಚಾರವಾ ದರೆ ಪ್ರಮುಖವಾಗಿ ದೇಶದ ಹಲವು ರಾಜ್ಯಗಳಲ್ಲಿ ಹೊಸ ಪಿಂಚಣಿ ಯೋಜನೆಯನ್ನು ರದ್ದು ಮಾಡಿ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೆ ಮಾಡಲಾಗಿದೆ

ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ಒಂದು ಪ್ಲಾನ್ ಮಾಡಿಕೊಂಡಿರುವ ಪಕ್ಷಗಳು ಒಂದು ಯೋಜನೆಯನ್ನು ಜಾರಿಗೆ ತಂದಿದ್ದು ಇದಕ್ಕೆ ನಮ್ಮ ರಾಜ್ಯದಲ್ಲೂ ಕೂಡಾ ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ಕುರಿತಂತೆ ಘೋಷಣೆ ಮಾಡುವ ನಿಟ್ಟಿನಲ್ಲಿ ಸಿದ್ದತೆ ಯನ್ನು ಮಾಡುತ್ತಿದ್ದಾರೆ.ಇನ್ನೂ ಹಳೆಯ ಪಿಂಚಣಿ ಯೋಜನೆಯ ಪ್ರಯೋಜನಗಳ ಬಗ್ಗೆ ಹೇಳುವು ದಾದರೆ ಅದರ ದೊಡ್ಡ ಪ್ರಯೋಜನವೆಂದರೆ ಅದು ಕೊನೆಯದಾಗಿ ಪಡೆದ ಸಂಬಳದ ಆಧಾರದ ಮೇಲೆ ರಚನೆ ಮಾಡಲಾಗಿದೆ

ಇದಲ್ಲದೇ ಹಣದುಬ್ಬರ ದರ ಹೆಚ್ಚಾದಂತೆ ಡಿಎ ಕೂಡ ಹೆಚ್ಚಾಗುತ್ತದೆ ಸರ್ಕಾರ ಹೊಸ ವೇತನ ಆಯೋಗವನ್ನು ಜಾರಿಗೆ ತಂದರೂ ಪಿಂಚಣಿಯ ನ್ನು ಹೆಚ್ಚಿಸುತ್ತಿದ್ದು ನಮ್ಮ ರಾಜ್ಯದಲ್ಲೂ ಕೂಡಾ ಈಗಲೂ ಕೂಡಾ ನಿರಂತರವಾಗಿ ಪ್ರತಿಭಟನೆಗಳು ನಡೆಯುತ್ತಿದ್ದು ಚುನಾವಣೆಯಲ್ಲಿ ಪಕ್ಷಗಳು ಇದನ್ನು ಘೋಷಣೆ ಮಾಡುತ್ತಾರಾ ಇಲ್ಲವೇ ಮುಂದೇನಾಗುತ್ತದೆ ಎಂಬೊದನ್ನು ಕಾದು ನೋಡಬೇಕಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.