ಬಳ್ಳಾರಿ –

ನೋಡು ನೋಡುತ್ತಿದ್ದಂತೆ ಸರ್ಕಾರಿ ಶಾಲೆಗೆ ನುಗ್ಗಿದ ಗ್ರಾಮಸ್ಥರು ಏಕಾಏಕಿಯಾಗಿ ಶಾಲೆಯಲ್ಲಿನ ಅಕ್ಕಿ ಯನ್ನು ನೆಲಕ್ಕೆ ಸುರಿದು ಆಕ್ರೋಶವನ್ನು ಹೊರ ಹಾಕಿದ ಗ್ರಾಮಸ್ಥರು.ಎಲ್ಲವೂ ಸರಿಯಾಗಿದ್ದ ಶಾಲೆ ಯಲ್ಲಿ ಒಮ್ಮಿಂದೊಮ್ಮೆಲೆ ಗೊಂದಲವೊ ಗೊಂದಲ ನಾನು ನೀನು ಎನ್ನುತ್ತಾ ಶಾಲೆಯಲ್ಲಿನ ಎಲ್ಲಾ ಶಿಕ್ಷಕ ರನ್ನು ತರಾಟೆಗೆ ತಗೆದುಕೊಂಡ ಚಿತ್ರಣ.

ಹೌದು ಇಷ್ಟೇಲ್ಲಾ ಚಿತ್ರಣ ಕಂಡು ಬಂದಿದ್ದು ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲ್ಲೂಕಿನ ಇಟಗಿಹಾಳ್ ಸರ್ಕಾರಿ ಶಾಲೆಯಲ್ಲಿ.ಮಕ್ಕಳಿಗೆ ಅಕ್ಕಿ, ಗೋಧಿ ನೀಡದೆ ಮನೆಗೆ ಹೊಯ್ಯಲು ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಶಾಲೆಗೆ ನುಗ್ಗಿದ್ದಾರೆ.

ಶಾಲೆಯಲ್ಲಿ ಬಚ್ಚಿಟ್ಟಿದ್ದ ಅಕ್ಕಿಯನ್ನು ನೆಲಕ್ಕೆ ಸುರಿದು ಶಿಕ್ಷಕರ ವಿರುದ್ಧ ಆಕ್ರೋಶವನ್ನು ಹೊರ ಹಾಕಿದ್ದಾರೆ. ಬಿಸಿಯೂಟ ಯೋಜನೆಯಡಿ ಸರ್ಕಾರ ನೀಡಿದ ದವಸ-ಧಾನ್ಯವನ್ನು ಬೆರಳೆಣಿಕೆ ಮಕ್ಕಳಿಗೆ ನೀಡಿ ಉಳಿದ ಅಕ್ಕಿ- ಗೋಧಿಯನ್ನು ಶಿಕ್ಷಕರೇ ಮನೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಗ್ರಾಮಸ್ಥ ರು ಗಂಭೀರ ಆರೋಪ ಮಾಡಿ ಶಾಲೆಗೆ ನುಗ್ದಿದ್ದಾರೆ.

ಕಳೆದ ಮೂರು ತಿಂಗಳಿಂದ ಮಕ್ಕಳಿಗೆ ಆಹಾರ ಧಾನ್ಯ ನೀಡದೆ ಅಕ್ರಮ ಎಸಗುತ್ತಿದ್ದಾರೆ ಎಂದು ಕೂಗಾಗಡುತ್ತಲೆ ಶಾಲೆಯಲ್ಲಿದ್ದ ಅಕ್ಕಿಯನ್ನು ನೆಲಕ್ಕೆ ಸುರಿದು ತರಾಟೆಗೆ ತೆಗೆದುಕೊಂಡರು.ಶಾಲಾ ಮಕ್ಕ ಳಿಗೆ ಆಹಾರ ಧಾನ್ಯ ವಿತರಣೆ ಮಾಡದೆ ಅಕ್ಕಿ ಗೋದಿ ಯನ್ನು ಸಂಗ್ರಹಿಸಿಟ್ಟದ್ದರಂತೆ ಶಿಕ್ಷಕರು ಮಕ್ಕಳಿಗೆ ಅಕ್ಕಿ, ಗೋದಿ ನೀಡದಕ್ಕೆ ಶಿಕ್ಷಕರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ.

ಮಕ್ಕಳಿಗೆ ಆಹಾರ ಧಾನ್ಯ ನೀಡದೆ ಅಕ್ರಮವನ್ನು ಶಿಕ್ಷಕರು ಎಸಗುತ್ತಿದ್ದಾರೆ ಎಂದು ಶಿಕ್ಷಕರ ವಿರುದ್ಧ ಗ್ರಾಮಸ್ಥರು ಆರೋಪವನ್ನು ಮಾಡಿದ್ದು ಕಂಡು ಬಂದಿತು.ಮೂರು ತಿಂಗಳಿನಿಂದ ಮಕ್ಕಳಿಗೆ ಆಹಾರ ವಿತರಿಸದೆ ಸಂಗ್ರಹಿಸಿಟ್ಟ ಶಿಕ್ಷಕರು.ಬಚ್ಚಿಟ್ಟ ಅಕ್ಕಿ ಯನ್ನು ನೆಲಕ್ಕೆ ಸುರುವಿ ಶಿಕ್ಷಕರಿಗೆ ತರಾಟೆಗೆ ತಗೆದು ಕೊಂಡಿದ್ದಾರೆ.
ಅಕ್ಕಿ ಗೋಧಿ ಮನೆಗೆ ತೆಗೆದುಕೊಂಡು ಹೋಗುತ್ತಿ ದ್ದಾರೆ ಎಂದು ಆರೋಪ ಗ್ರಾಮಸ್ಥರದ್ದು ಇನ್ನೂ ಶಾಲೆಯಲ್ಲಿ ಶಿಕ್ಷಕರಿಗೆ ಫುಲ್ ಕ್ಲಾಸ್ ತಗೊಂಡಿದ್ದಾರೆ ಗ್ರಾಮಸ್ಥರು.