ಬೆಂಗಳೂರು –
ಚುನಾವಣೆಯ ಮುನ್ನ ಕೊಟ್ಟ ಮಾತಿನಂತೆ ಐದು ಗ್ಯಾರಂಟಿ ಯೋಜನೆ ಗಳನ್ನು ಜಾರಿ ಮಾಡಿ ಕೊಟ್ಟ ಮಾತಿನಂತೆ ನಾವು ನಡೆದುಕೊಂಡಿದ್ದೇವೆ ಎಂದು ಪದೇ ಪದೇ ಹೇಳುತ್ತಿರುವ ರಾಜ್ಯ ಸರ್ಕಾರದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಯವರೇ ನೀವು ಕೊಟ್ಟ ಇನ್ನೊಂದು ಭರವಸೆಯನ್ನು ಜಾರಿ ಮಾಡಿಲ್ಲ ನೀವು ಮರೆತಂತೆ ಕಾಣುತ್ತದೆ
ಹೌದು ನ್ಯಾಷನಲ್ ಪೆನ್ಷನ್ ಸಿಸ್ಟಂ ಬದಲು ಹಿಂದಿನ ಓಲ್ಡ್ ಪೆನ್ಷನ್ ಸ್ಕೀಮ್ ಅನ್ನು ಜಾರಿಗೆ ತರುವುದಾಗಿ ಹೇಳಿದ್ದ ಕರ್ನಾಟಕ ಸರ್ಕಾರದ ಭರವಸೆ ಇನ್ನೂ ಈಡೇರಿಲ್ಲ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯ ಸರ್ಕಾರಿ ನೌಕರರ ಒತ್ತಾಯದ ಮೇರೆಗೆ ಓಲ್ಡ್ ಪೆನ್ಷನ್ ಸ್ಕೀಮ್ ಜಾರಿಗೆ ತರಲು ಐವರು ಸದಸ್ಯರ ಸಮಿತಿ ರಚಿಸಿತ್ತು.
ಅದಿನ್ನೂ ಮುಂದುವರಿದಿಲ್ಲ ಇನ್ನು ಈ ಬಗ್ಗೆ ಕರ್ನಾಟಕ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು ಮಾತನಾಡಿ, ಹಳೆಯ ಪಿಂಚಣಿ ಜಾರಿ ಆಗಲೇಬೇಕು ಎಂದು ಆಗ್ರಹ ಮಾಡಿದ್ದಾರೆ.ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಏಕೀಕೃತ ಪಿಂಚಣಿ ಯೋಜನೆ ಬಗ್ಗೆ ಸಿಎಸ್ ಷಡಾಕ್ಷರಿ ಅತೃಪ್ತಿ ವ್ಯಕ್ತಪಡಿಸಿದ್ದಾರೆ.
ಹಳೆಯ ಪೆನ್ಷನ್ ಸಿಸ್ಟಂ ಅನ್ನೇ ಜಾರಿ ತರಬೇ ಕೆಂದು ಆಗ್ರಹಿಸಿದ್ದಾರೆ.ಎನ್ಪಿಎಸ್ ಸ್ಕೀಮ್ನಲ್ಲಿ ಸುಧಾರಣೆ ತರಲಾಗಿದೆಯಾದರೂ ಓಲ್ಡ್ ಪೆನ್ಷನ್ ಸಿಸ್ಟಂನ ಮಟ್ಟಕ್ಕೆ ಇದು ಶೇ. 60ರಷ್ಟು ಮುಟ್ಟಿದೆ ಎಂಬುದು ಅವರ ಅನಿಸಿಕೆಯಾಗಿದೆ.ಷೇರು ಮಾರುಕಟ್ಟೆಗೆ ದುಡ್ಡು ಹಾಕ್ತಾರೆ ಲಕ್ಷಾಂತರ ಸಿಗುತ್ತೆ ಅಂತ ನಂಬಿ ಮೋಸ ಹೋದ್ವಿ ಎಂದರು
ಈಗ ಚಾಲನೆಯಲ್ಲಿರುವ ನ್ಯಾಷನಲ್ ಪೆನ್ಷನ್ ಸಿಸ್ಟಂ ಬಗ್ಗೆ ವ್ಯಗ್ರರಾದ ಷಡಾಕ್ಷರಿ, ‘ಎನ್ಪಿಎಸ್ ಜಾರಿಗೆ ಬಂದಾಗ, ಷೇರು ಮಾರುಕಟ್ಟೆಯಿಂದ ಹಣ ಭಾರೀ ಬೆಳೆಯುತ್ತದೆ. 60-70 ಲಕ್ಷ ರೂ ಸಿಗುತ್ತೆ ಎಂದೆಲ್ಲಾ ಅಂದುಕೊಂಡಿದ್ವಿ. ಅದು ಜಾರಿಗೆ ಬಂದು ಎಂಟು ಹತ್ತು ವರ್ಷದಲ್ಲಿ ಗೊತ್ತಾ ಯಿತು
ಸಧ್ಯ ರಿಟೈರ್ಡ ಆದವರಿಗೆ ಎರಡು ಸಾವಿರ, ಮೂರು ಸಾವಿರ ರೂ ಪಿಂಚಣಿ ಸಿಗುತ್ತೆ ಅಂತ. ಆಗ ನಾವು ಇದನ್ನು ವಿರೋಧ ಮಾಡೋಕೆ ಪ್ರಾರಂಭಿಸಿದ್ವಿ’ ಎಂದರು ಹೀಗಾಗಿ ಸಧ್ಯ ರಾಜ್ಯ ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಏನು ಎಂಬೊಂದನ್ನು ಕಾದು ನೋಡಿ ಮುಂದು ನೋಡುತ್ತೆವೆ ಎಂದರು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..