ಹುಬ್ಬಳ್ಳಿ –
ಧಾರವಾಡ ಜಿಲ್ಲೆಗೆ ನಿಮ್ಮ ಕೊಡುಗೆ ಏನು ಪ್ರಹ್ಲಾದ್ ಜೋಶಿಯವರೇ ಉತ್ತರಿಸಿ ರಾಜು ನಾಯಕವಾಡಿ ಪ್ರಶ್ನೆ – 20 ವರ್ಷಗಳಲ್ಲಿ ಜಿಲ್ಲೆಗೆ ನೀವು ಮಾಡಿದ್ದೇನು ಉತ್ತರಿಸಿ ಈ ಬಾರಿ ಬದಲಾವಣೆ ಮಾಡಲಿದ್ದಾರೆ ಮತದಾರರು
ಕಳೆದ 20 ವರ್ಷಗಳಿಂದ ಧಾರವಾಡ ಜಿಲ್ಲೆಯಲ್ಲಿ ಸಂಸದರಾಗಿ ಸಧ್ಯ ಕೇಂದ್ರ ಸಚಿವರಾಗಿರುವ ಪ್ರಹ್ಲಾದ್ ಜೋಶಿಯವರೇ ನಿಮ್ಮಿಂದ ಧಾರವಾಡ ಜಿಲ್ಲೆಗೆ ಕೊಡುಗೆ ಏನು ನೀವು ಮಾಡಿರುವ ಸಾಧನೆ ಏನು ಎಂದು ಯುವ ಮುಖಂಡರಾಗಿರುವ ಧಾರವಾಡ ಜಿಲ್ಲಾ NCP ಜಿಲ್ಲಾಧ್ಯಕ್ಷ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಾಜು ಅನಂತಸಾ ನಾಯಕವಾಡಿ ಪ್ರಶ್ನೆ ಮಾಡಿದ್ದಾರೆ.
ಪತ್ರಿಕಾ ಪ್ರಕಟಣೆಯ ಪ್ರಹ್ಲಾದ್ ಜೋಶಿಯವರಿಗೆ ಪ್ರಶ್ನೆಯನ್ನು ಮಾಡಿದ್ದಾರೆ.ಕಳಸಾ ಬಂಡೂರಿ ವಿಚಾರದಲ್ಲೂ ಈವರೆಗೆ ಜಿಲ್ಲೆಗೆ ನ್ಯಾಯ ಸಿಕ್ಕಿಲ್ಲ ಪರಿಹಾರವೂ ಕೂಡಾ ಸಿಕ್ಕಿಲ್ಲ.ಹೀಗಾಗಿ ರೈತರಿಗೆ ನಿಮ್ಮಿಂದ ದ್ರೋಹವಾಗಿದ್ದು ಜಿಲ್ಲೆಯ ರೈತರಲ್ಲಿ ನೀವು ಯಾವುದೇ ರೀತಿಯ ಮತವನ್ನು ಕೇಳುವ ಹಕ್ಕು ನಿಮ್ಮಲ್ಲಿ ಇಲ್ಲ.ಬೆಳೆ ಹಾನಿಯಿಂದ ಜಿಲ್ಲೆ ಯಲ್ಲಿ ಸಾಕಷ್ಟು ರೈತರು ಹಾನಿಗೊಳಗಾಗಿದ್ದಾರೆ
ಯಾವ ರೈತರಿಗೂ ನಿಮ್ಮಿಂದ ಪರಿಹಾರ ಸಿಕ್ಕಿಲ್ಲ ಹೀಗಾಗಿ ಸೋಲಿನ ಭಯದಿಂದಾಗಿ ಈ ಬಾರಿ ನೀವು ಹತಾಶರಾಗಿದ್ದು ಜಿಲ್ಲೆಗೆ ಸಾಕಷ್ಟು ಅನು ದಾನವನ್ನು ತಗೆದುಕೊಂಡು ಬಂದಿದ್ದೇನೆ ಅಭಿವೃದ್ದಿ ಮಾಡಿದ್ದೇನೆ ಎಂದು ಹೇಳುವ ನೀವು ಚೆನ್ನಮ್ಮ ಸರ್ಕಲ್ ಸೇರಿದಂತೆ ನಗರವನ್ನು ಒಮ್ಮೆ ಸುತ್ತಾಡಿ ಗೊತ್ತಾಗುತ್ತದೆ ನಗರದಲ್ಲಿನ ಪರಸ್ಥಿತಿ ಧೂಳಿಯ ಮಜ್ಜನ ನಿಮಗೆ ತಿಳಿಯುತ್ತದೆ ಎಂದು ರಾಜು ನಾಯಕವಾಡಿ ಕೇಂದ್ರ ಸಚಿವರಿಗೆ ಹೇಳಿದ್ದಾರೆ.
ನೀವು ಏನೇಲ್ಲಾ ಹೇಳುವ ನೀವು ಈ ಬಾರಿ ಪಕ್ಷದಿಂದ ಸ್ಪರ್ಧೆ ಮಾಡದೇ ಪಕ್ಷೇತರವಾಗಿ ಸ್ಪರ್ಧೆ ಮಾಡಿ ನೀವು ಗೆದ್ದರೆ ನಾನು ರಾಜಕೀಯ ವಾಗಿ ನಿವೃತ್ತಿಯನ್ನು ತಗೆದುಕೊಳ್ಳುತ್ತೇನೆ ಎಂದು ರಾಜು ನಾಯಕವಾಡಿ ಯವರು ಪ್ರಹ್ಲಾದ್ ಜೋಶಿಯವರಿಗೆ ಸವಾಲ್ ಹಾಕಿದ್ದಾರೆ.
ಇನ್ನೂ ಈ ಬಾರಿ ಧಾರವಾಡ ಜಿಲ್ಲೆಯಲ್ಲಿ ಬದಲಾವಣೆಯಾಗಲಿದ್ದು ಹೊಸ ಯುವ ಮುಖಗಳಿಗೆ ಮತದಾರರು ಮಣೆ ಹಾಕಲಿದ್ದು ಅದು ನಮ್ಮಿಂದಲೇ ಉದಯವಾಗಲಿದೆ ಎಂದು ರಾಜು ನಾಯಕವಾಡಿ ಯವರು ಹೇಳಿದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..