ಕುಷ್ಟಗಿ –
ಈಗಾಗಲೇ 2021ಕ್ಕೆ ವಿದಾಯ ಹೇಳಿ ಹೊಸ ವರ್ಷವನ್ನು ಬರಮಾಡಿಕೊಳ್ಳಲಾಗಿದೆ.ಇನ್ನೂ ಈ ಒಂದು ನೂತನ ವರ್ಷದ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಯೊಂದರಲ್ಲಿ ವಿಶೇಷವಾದ ಊಟದ ಮೂಲಕ ಮಕ್ಕಳು ವರ್ಷವನ್ನು ಸಿಹಿಯೊಂದಿಗೆ ಸ್ವಾಗತಿಸಿಕೊಂಡರು.ಹೌದು ಕುಷ್ಟಗಿ ತಾಲೂಕಿನ ನೀರಲೂಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಬಿಸಿ ಊಟದ ವೇಳೆ ಕರಿಗಡಬು,ಹಪ್ಪಳ, ಸಂಡಿಗೆ ಸಹಿತ ವಿಶೇಷ ಹಬ್ಬದ ಊಟ ಬಡಿಸಲಾಗಿಯಿತು. ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಖಾಜಾಸಾಬ್ ಪಿಂಜಾರ ಶಾಲಾ ಮಕ್ಕಳಿಗೆ ಸ್ವಂತ ಖರ್ಚಿನಿಂದ ಹಬ್ಬದ ಔತಣ ನೀಡಿ ಅರ್ಥಪೂರ್ಣ ಕಾರ್ಯ ಮಾಡಿದ್ದಾರೆ.1 ರಿಂದ 7ನೇ ತರಗ ತಿಯ 176 ಮಕ್ಕಳು ಮದ್ಯಾಹ್ನದ ಊಟವಾಗಿ ಬೆಲ್ಲ,ಕಡಲೆ ಬೇಳೆಯ ಹೂರಣದ ಕರಿಗಡಬು,ಹಪ್ಪಳ,ಸಂಡಿಗೆ ,ಕಟ್ಟಿನ ಸಾರು ಉಂಡು ಬಾಯಿ ಚಪ್ಪರಿಸಿರುವುದರೊಂದಿಗೆ ಹಳೆ ವರ್ಷಕ್ಕೆ ವಿದಾಯ ಹೇಳಿ ಹೊಸ ವರ್ಷವನ್ನು ಬರಮಾಡಿ ಕೊಂಡರು
ಕರಿಗಡುಬಿನ ಜೊತೆಗೆ ತುಪ್ಪವನ್ನು ಮಕ್ಕಳಿಗೆ ಊಣ ಬಡಿಸಲಾಯಿತು.ಈ ಕುರಿತು, ಮಕ್ಕಳಿಗೆ ಸಿಹಿ ಊಟ ನೀಡಿದರೆ ಮಕ್ಕಳು ಲವಲವಿಕೆಯಿಂದ ಶಾಲೆಗೆ ಬರುತ್ತಾರೆ. ಅಲ್ಲದೇ ಮಕ್ಕಳಿಗೆ ಬರಲಿರುವ ಹೊಸ ವರ್ಷ ಅವರ ಬಾಳಲ್ಲಿ ಸಿಹಿಯಾಗಿರಲಿ ಎನ್ನುವ ಸದುದ್ದೇಶದ ಹಿನ್ನೆಲೆ ಯಲ್ಲಿ ಈ ವಿಶೇಷ ಹಬ್ಬದ ಅಡುಗೆ ಎಂದರು ಖಾಜಾಸಾಬ್ ಪಿಂಜಾರ.