ಬೆಂಗಳೂರು –
ಮಹಾ ಸಮ್ಮೇಳನವಾಗಿವೆ ರಾಜ್ಯದ ಸರ್ಕಾರಿ ನೌಕರರ Whats Up ಡಿಪಿಗಳು – ಸಂಘಟನೆಯ ಒಂದೇ ಒಂದು ಸೂಚನೆಯಂತೆ ನಡೆದು ಕೊಂಡಿದ್ದಾರೆ ರಾಜ್ಯದ ಸರ್ಕಾರಿ ನೌಕರರು ಹೌದು
ರಾಜ್ಯದ ಸರ್ಕಾರಿ ನೌಕರರ ರಾಜ್ಯ ಮಟ್ಟದ ಮಹಾ ಸಮ್ಮೇಳನ ಫೆಬ್ರುವರಿ 27 ರಂದು ಕಾರ್ಯಕ್ರಮ ನಡೆಯಲಿದೆ. ಈಗಾಗಲೇ ಈ ಒಂದು ಐತಿಹಾಸಿಕ ಕಾರ್ಯಕ್ರಮಕ್ಕೆ ಅಬ್ಬರದ ಸಿದ್ದತೆಗಳು ತಯಾರಿಗಳು ನಡೆದಿದ್ದು ಇನ್ನೂ ಪ್ರಮುಖವಾಗಿ ಈ ಒಂದು ಕಾರ್ಯಕ್ರಮ ಕುರಿತಂತೆ ರಾಜ್ಯ ಸರ್ಕಾರಿ ನೌಕರರ ಸಂಘಟನೆ ಒಂದು ಈಮೇಜ್ ಸಿದ್ದತೆ ಮಾಡಿದ್ದು ಅದನ್ನು ಡೌನ್ ಲೋಡ್ ಮಾಡಿಕೊಂಡು ವಾಟ್ಸ್ ಆಪ್ ಡಿಪಿ ಮತ್ತು ಸಾಮಾಜಿಕ ಜಾಲ ತಾಣಗಳಲ್ಲಿ ಅಪ್ ಲೋಡ್ ಮಾಡುವಂತೆ ಕರೆ ನೀಡಿದ್ದಾರೆ.
ಈ ಒಂದು ಸಂದೇಶ ಬರುತ್ತಿದ್ದಂತೆ ರಾಜ್ಯದ ಪ್ರತಿಯೊಬ್ಬ ಸರ್ಕಾರಿ ನೌಕರರು ಅದನ್ನು ಡೌನ್ ಲೋಡ್ ಮಾಡಿಕೊಂಡು ತಮ್ಮ ವಾಟ್ಸ್ ಆಫ್ ಡಿಪಿ ಮತ್ತು ಫೇಸ್ ಬುಕ್ ಸೇರಿದಂತೆ ಸಾಮಾಜಿಕ ಜಾಲ ತಾಣಗಳಲ್ಲಿ ತಮ್ಮ ತಮ್ಮ ಪೊಟೊ ಹಾಕಿ ಕೊಂಡು ಇಟ್ಟುಕೊಂಡಿದ್ದಾರೆ.ಹೀಗಿರುವಾಗ ಸಧ್ಯ ಎಲ್ಲಿ ನೋಡಿದಲ್ಲಿ ಕೇಳಿದ್ದಲ್ಲಿ ಮಹಾ ಸಮ್ಮೇಳನ ಕಾರ್ಯಕ್ರಮದ ಹವಾ ಸದ್ದು ಕೇಳಿ ಬರುತ್ತಿದೆ.
ಪ್ರತಿಯೊಬ್ಬರು ತಮ್ಮ ತಮ್ಮ ಪೊಟೊ ಗಳನ್ನು ಹಾಕಿಕೊಂಡು ಮಹಾ ಸಮ್ಮೇಳನದ ಈಮೇಜ್ ಗೆ ಇಟ್ಟುಕೊಂಡಿದ್ದಾರೆ.ಸಂಘಟನೆಯ ಒಂದೇ ಒಂದು ಸಂದೇಶಕ್ಕೆ ರಾಜ್ಯದ ಸಮಸ್ತ ಸರ್ಕಾರಿ ನೌಕರರು ನಡೆದುಕೊಂಡಿದ್ದಾರೆ ಇನ್ನೂ ಸರ್ಕಾರಿ ನೌಕರರ ನೋವಿಗೆ ಸಮಸ್ಯೆಗೆ ಬೇಡಿಕೆಗಳಿಗೆ ರಾಜ್ಯ ಸರ್ಕಾರಿ ನೌಕರರ ಸಂಘಟನೆ ಸ್ಪಂದಿಸ ಬೇಕಿದೆ
ಅದರಲ್ಲೂ ಪ್ರಮುಖವಾಗಿ ಯಾವುದೇ ಬೇಡಿಕೆಗಳು ಬಂದ ಸಮಯದಲ್ಲಿ ಹೆಚ್ಚು ಹೆಚ್ಚು ಸಮಾಯಕಾಶವನ್ನು ನೀಡದೆ ತುರ್ತಾಗಿ ಪರಿಹಾರ ಮಾಡಿ ನೌಕರರಿಗೆ ನೆರವಾಗೊದು ಅವಶ್ಯಕವಿದೆ ಈ ಒಂದು ನಿರೀಕ್ಷೆಯಲ್ಲಿ ರಾಜ್ಯದ ಸರ್ಕಾರಿ ನೌಕರರಿದ್ದಾರೆ ಹಾಗೇ ಸಂಘಟನೆ ಮತ್ತು ನಾಯಕರು ನಡೆದುಕೊಳ್ಲುತ್ತಾರೆ ಎಂಬ ಭರವಸೆ ಅವರಲ್ಲಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..