ಬೆಂಗಳೂರು –
ರಾಜ್ಯದ ಸರ್ಕಾರಿ ನೌಕರರಿಗೆ ವೇತನ ಪರಷ್ಕರಣೆ ವಿಚಾರ ಕುರಿತಂತೆ ಈಗಾಗಲೇ ರಾಜ್ಯ ಸರ್ಕಾರ 7ನೇ ವೇತನ ಸಮಿತಿಯನ್ನು ರಚನೆ ಮಾಡಿದೆ. ಸಮಿತಿ ರಚನೆಯ ಬೆನ್ನಲ್ಲೇ ರಾಜ್ಯ ಸರ್ಕಾರ ಈ ಕುರಿತಂತೆ ಕೆಲವೊಂದಿಷ್ಟು ಆದೇಶ ಗಳನ್ನು ಮಾಡಿದ್ದು ಇತ್ತ ಸಮಿತಿಯೂ ಕೂಡಾ ವರದಿ ರಚನೆ ಕುರಿತಂತೆ ಕಾರ್ಯ ಚಟುವಟಿಕೆಗಳನ್ನು ಆರಂಭ ಮಾಡಿದ್ದು ಹೀಗಾಗಿ ರಾಜ್ಯದ ಸರ್ಕಾರಿ ನೌಕರರಿಗೆ ಹೊಸದೊಂದು ನಿರೀಕ್ಷೆ ಮೂಡಿದೆ.
ಹೌದು ಇದು ಒಂದು ವಿಚಾರವಾದರೆ ಇನ್ನೂ ಇತ್ತ ಸಮಿತಿ ವರದಿಯನ್ನು ಯಾವಾಗ ನೀಡಲಿದೆ ಯಾವಾಗ ಜಾರಿಗೆ ಬರಲಿದೆ ಹೊಸ ಪರಿಷ್ಕ್ರರ ಣೆಯ ವೇತನ ರಾಜ್ಯದ ಸರ್ಕಾರಿ ನೌಕರರಿಗೆ ಯಾವಾಗ ಕೈಗೆ ಸೇರಲಿದೆ ಎಂಬ ವಿಚಾರ ಕುರಿತಂತೆ ನೋಡೊದಾದರೆ.ಸರ್ಕಾರ 7ನೇ ವೇತನ ರಚನೆ ಕುರಿತಂತೆ ತನ್ನ ಆದೇಶದಲ್ಲಿ ಸಮಿತಿಗೆ ನಿಗದಿತ ಕಾಲ ಮೀತಿಯನ್ನು ನೀಡಿದೆ
ಸಧ್ಯ ಸಾಲು ಸಾಲಾಗಿ ಬರುವ ಬೆಂಗಳೂರು ಮಹಾನಗರ ಪಾಲಿಕೆ,ಜಿಲ್ಲಾ ತಾಲ್ಲೂಕು ರಾಜ್ಯದ ಸಾಮೂಹಿಕ ವಿಧಾನ ಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಸಮಿತಿಯೂ ಕೂಡಾ ತೀವ್ರ ಗತಿಯಲ್ಲಿ ಈ ಬಾರಿ ವರದಿಯನ್ನು ಸಿದ್ದತೆ ಮಾಡಿ ರಾಜ್ಯ ಸರ್ಕಾರಕ್ಕೆ ನೀಡಲು ಈಗಾಗಲೇ ಯೋಜನೆಯನ್ನು ಹಾಕಿಕೊಂಡಿದೆ.
ಹೀಗಾಗಿ ರಾಜ್ಯ ಸರ್ಕಾರಿ ನೌಕರರ ಅನುದಾನಿತ ಶಿಕ್ಷಣ ಸಂಸ್ಥೆಗಳು,ಸ್ಥಳೀಯ ಸಂಸ್ಥೆಗಳು, ವಿಶ್ವ ವಿದ್ಯಾನಿಲಯಗಳು ಮತ್ತು ಕಾಲೇಜುಗಳ ಬೋಧಕೇತರ ಸಿಬ್ಬಂದಿಗಳಿಗೆ ಮರಣ ಹಾಗೂ ನಿವೃತ್ತಿ ಉಪದಾನ ಸೌಲಭ್ಯಗಳನ್ನೊಳಗೊಂ ಡಂತೆ ಲಭ್ಯವಿರುವ ಎಲ್ಲಾ ಕ್ರೋಢೀಕೃತ ಸೌಲಭ್ಯ ಗಳನ್ನು ಗಣನೆಗೆ ತೆಗೆದುಕೊಂಡು ಈ ಸಿಬ್ಬಂದಿಗಳ ಪ್ರಸ್ತುತ ವೇತನ ರಚನೆಯನ್ನು ಪರಿಶೀಲಿಸುವುದು ಹಾಗೂ ಅಪೇಕ್ಷಣೀಯವಾದ ಹಾಗೂ ಕಾರ್ಯ ಸಾಧ್ಯವಿರುವ ನೂತನ ವೇತನ ರಚನೆಯನ್ನು ರೂಪಿಸಲು ಸಮಿತಿ ಸಿದ್ದತೆನಯನ್ನು ಮಾಡಿ ಕೊಂಡಿದೆ.
ಇನ್ನೂ ಏನೇ ಮಾಡಿದರು ಆಯೋಗ ಆರು ತಿಂಗಳ ಒಳಗಾಗಿ ಈ ಒಂದು ವರದಿಯನ್ನು ಸಮಿತಿಯೂ ನೀಡಲಿದ್ದು 2023ನೇ ಮಾರ್ಚ್ ಅಂತ್ಯದೊಳಗೆ 7ನೇ ವೇತನ ಆಯೋಗದ ಪರಿಷ್ಕೃತ ವೇತನ ಶ್ರೇಣಿ ಹಾಗೂ ಆರ್ಥಿಕ ಸೌಲಭ್ಯಗಳನ್ನು ಪಡೆಯುವ ನಿರೀಕ್ಷೆ ಇದೆ.ಇದನ್ನು ಸಮಸ್ತ ಸರ್ಕಾರಿ ನೌಕರರು ಹೊಂದಿದ್ದು ಏನೇ ಆಗಲಿ ಶೀಘ್ರವೇ ಸಮಿತಿಯಿಂದ 7ನೇ ವೇತನ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿ ಇದು ಸಮಸ್ತ ಸರ್ಕಾರಿ ನೌಕರರಿಗೆ ಅನುಕೂಲವಾಗಲಿ ಎಂಬೊದು ಸುದ್ದಿ ಸಂತೆಯ ಆಶಯವಾಗಿದೆ.
ಇತ್ತ ರಾಜ್ಯ ಸರ್ಕಾರವು ಕೂಡಾ ಆಯೋಗಕ್ಕೆ ಈಗಾಗಲೇ ಕೆಲವೊಂದಿಷ್ಟು ಸೌಲಭ್ಯಗಳನ್ನು ನೀಡಿದ್ದು ಹೀಗಾಗಿ ಕಾರ್ಯ ಚಟುವಟಿಕೆಗಳು ಚುರುಕುಗೊಂಡಿವೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..