ವರ್ಗಾವಣೆ ಯಲ್ಲಿ ಸಿಗದ ಅವಕಾಶದ ಹಿನ್ನೆಲೆಯಲ್ಲಿ ಶಿಕ್ಷಕಿ ಯೊಬ್ಬರು ತಮ್ಮ ವೃತ್ತಿಗೆ ರಾಜೀನಾಮೆ ನೀಡಲು ಶಿಕ್ಷಕಿ ಯೊಬ್ಬರು ಮುಂದಾಗಿದ್ದಾರೆ. ಹೌದು ಇದು ಬೇರೆ ಎಲ್ಲೂ ಅಲ್ಲ ನಮ್ಮ ರಾಜ್ಯದಲ್ಲಿನ ಕರಾಳತೆಯ ಕಥೆ
ಹೌದು ಶ್ರೀಮತಿ ಅಕ್ಷತಾ ಅವರು ಸಧ್ಯ ರಾಯಚೂರಿನ ಗಾಣದಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕಿ ಯಾಗಿ 2010 ರಲ್ಲಿ ಕರ್ತವ್ಯ ಮಾಡುತ್ತಿದ್ದು ಈ ಹಿಂದೆ ಅಪಘಾತ ಆದ ಹಿನ್ನೆಲೆಯಲ್ಲಿ ಇವರಿಗೆ ವೈದ್ಯರು ದೂರದ ಪ್ರಯಾಣ ಬೇಡ ಎಂದು ಹೇಳಿದ್ದು ಹೀಗಾಗಿ ವೈಧ್ಯರ ಸಲಹೆ ಮೇರೆಗೆ ವರ್ಗಾವಣೆ ಕೇಳಿದರು ಕೂಡಾ ಆಯುಕ್ತರು ಬಿಡುಗಡೆ ಮಾಡಿಲ್ಲ ಇದರ ಜೊತೆಯಲ್ಲಿ ವರ್ಗಾವಣೆ ಯಲ್ಲೂ ಅವಕಾಶ ಸಿಗದ ಹಿನ್ನೆಲೆಯಲ್ಲಿ ಯಾವ ಅನುಕೂಲ ಆಗದ ಹಿನ್ನೆಲೆಯಲ್ಲಿ ಸದ್ಯ ವೃತ್ತಿಗೆ ರಾಜೀನಾಮೆ ನೀಡಿದ್ದಾರೆ.
ಶಿಕ್ಷಕಿ ಅವರಿಗೆ ವರ್ಗಾವಣೆ ಯಲ್ಲಿ ೨೫% ಮಿತಿ ಇರದೆ ವರ್ಗಾವಣೆ ಅವಕಾಶ ಸಿಕ್ಕಿದ್ದರೆ ರಾಜೀನಾಮೆ ನೀಡುವ ಅವಶ್ಯಕತೆ ಬರತಿರಲಿಲ್ಲಾ ಯಾರಿಗೂ ಇಲ್ಲದ ಯಾವ ಇಲಾಖೆಗೂ ಇಲ್ಲದ ವರ್ಗಾವಣೆಯ ಕಾನೂನು ನಿಜವಾಗಿ ಯೂ ಶಿಕ್ಷಕರು ನೊಂದುಕೊಂಡಿದ್ದಾರೆ.ಸಧ್ಯ ನೊಂದು ಕೊಂಡಿರುವ ಇವರು ಬಿಇಓ ಅವರಿಗೆ ರಾಜೀನಾಮೆ ಪತ್ರ ಬರೆದಿದ್ದಾರೆ.ಇನ್ನೂ ನೋವಿಗೆ ಸ್ಪಂದಿಸಬೇಕಾದ ಸಂಘಟನೆ ಯ ನಾಯಕರು ಮೌನವಾಗಿರೊದು ದುರಂತವೇ ಸರಿ.