ಬೆಂಗಳೂರು –
ರಾಜ್ಯದ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರ ಮಾದರಿ ಯಲ್ಲಿನ 7ನೇ ವೇತನ ನೀಡುವ ವಿಚಾರ ಕುರಿತಂತೆ ಆಗಸ್ಟ್ ತಿಂಗಳಲ್ಲಿ ಸಮಿತಿಯನ್ನು ರಚನೆ ಮಾಡಲಾಗುತ್ತದೆ ಎಂದು ರಾಜ್ಯದ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿ ರುವ ಷಡಾಕ್ಷರಿ ಅವರು ಹೇಳಿದ್ದರು.ಈ ಒಂದು ವಿಚಾರ ಕುರಿತಂತೆ ಸುದ್ದಿ ಸಂತೆ ಕೂಡಾ ವರದಿಯನ್ನು ಅವರ ಹೇಳಿಕೆಯೊಂದಿಗೆ ವರದಿಯನ್ನು ಪ್ರಸಾರ ಮಾಡಲಾಗಿತ್ತು
ಇದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದ್ದು ಇದರ ನಡುವೆ ಇಂದು ಬೆಂಗಳೂರು ಮಹಾನಗರ ಪಾಲಿಕೆಗೆ ಇಂದೇ ಚುನಾವಣೆ ಘೋಷಣೆಯಾಗಲಿದೆ.ಈ ಒಂದು ಚುನಾವಣೆ ಘೋಷಣೆಯಾದರೆ ನೀತಿ ಸಂಹಿತಿ ಜಾರಿಗೆ ಬರುತ್ತದೆ ಇನ್ನೂ ಈ ಒಂದು ಚುನಾವಣೆ ಘೋಷಣೆಯಾ ದರೆ ಇನ್ನೇನು ಮಾಡಲು ಬರೊದಿಲ್ಲ ಎಂಬ ಕಾರಣವನ್ನು ಮುಂದಿಟ್ಟುಕೊಂಡು ವೇತನ ಆಯೋಗಕ್ಕೆ ಸಮಿತಿ ರಚನೆ ವಿಳಂಬವಾಗುತ್ತದೆ ಇದರ ನಡುವೆ ನೀವೆ ಹೇಳಿದಂತೆ ಆಗಸ್ಟ್ ತಿಂಗಳು ಮುಗಿಯುತ್ತಾ ಬಂತು ಆದರೂ ಕೂಡಾ ಈವರೆಗೆ ಸಮಿತಿ ರಚನೆ ಕುರಿತಂತೆ ಮಾತುಗಳು ಬೆಳವ ಣಿಗೆ ಗಳು ಕಂಡು ಬರುತ್ತಿಲ್ಲ
ಹೀಗಾಗಿ ಈಗಾಗಲೇ ಅಸಮಾಧಾನಗೊಂಡಿರುವ ರಾಜ್ಯದ ಸರ್ಕಾರಿ ನೌಕರರಿಗೆ ಮತ್ತಷ್ಟು ಈ ಒಂದು ವಿಳಂಬದ ವಾತಾವರಣ ತುಂಬಾ ಬೇಸರವನ್ನುಂಟು ಮಾಡುತ್ತಿದ್ದು ಈ ಕೂಡಲೇ ಈಗಾಗಲೇ ಈ ಒಂದು ವಿಚಾರ ಕುರಿತಂತೆ ರಾಜ್ಯದ ಸಮಸ್ತ ಸರ್ಕಾರಿ ನೌಕರರ ಪರವಾಗಿ ಷಡಾಕ್ಷರಿ ಸರ್ ಅವರ ಅಭಿಮಾನಿಗಳು ಒತ್ತಾಯವನ್ನು ಮಾಡಿದ್ದು ಹೀಗಾಗಿ ಈ ಕೂಡಲೇ ಇದನ್ನು ಗಂಭೀರವಾಗಿ ಪರಿಗಣಿಸಿ ಸಮಿತಿ ರಚನೆ ಮಾಡುವ ಕುರಿತಂತೆ ಆದೇಶವನ್ನು ಹೊರಡಿಸಿ ಸರ್.
ವಿಳಂಬವಾದರೆ ಶೀಘ್ರದಲ್ಲೇ ಮತ್ತೆ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತ ಚುನಾವಣೆಗಳು ಇದರ ನಂತರ ಮತ್ತೆ ರಾಜ್ಯದಲ್ಲಿ ಬೃಹತ್ ವಿಧಾನ ಸಭಾ ಚುನಾವಣೆಗಳು ಬರ ಲಿದ್ದು ಹೀಗಾಗಿ ಈ ಕೂಡಲೇ ಸಮಿತಿ ರಚನೆಗೆ ಒತ್ತಾಯ ಮಾಡಿಸಿ ಎಂಬ ಒತ್ತಾಯವನ್ನು ರಾಜ್ಯದ ಸಮಸ್ತ ಸರ್ಕಾರಿ ನೌಕರರ ಪರವಾಗಿ ನಿಮ್ಮ ಸುದ್ದಿ ಸಂತೆ ಟೀಮ್ ಒತ್ತಾಯವನ್ನು ಮಾಡುತ್ತಿದೆ ಅಧ್ಯಕ್ಷರೆ……..