ಹುಬ್ಬಳ್ಳಿಯಲ್ಲಿ ಜೋರಾಗಿದೆ Spa – Spa ಪ್ರಸಾದದ ಪಾಲುದಾರರು ಯಾರು ಯಾರು ಗೊತ್ತಾ…..ಕಂಪ್ಲಿಟ್ ಮಾಹಿತಿ…..

Suddi Sante Desk
ಹುಬ್ಬಳ್ಳಿಯಲ್ಲಿ ಜೋರಾಗಿದೆ Spa – Spa ಪ್ರಸಾದದ ಪಾಲುದಾರರು ಯಾರು ಯಾರು ಗೊತ್ತಾ…..ಕಂಪ್ಲಿಟ್ ಮಾಹಿತಿ…..

ಹುಬ್ಬಳ್ಳಿ

ವಾಣಿಜ್ಯ ನಗರಿ ಹುಬ್ಬಳ್ಳಿ ಯಲ್ಲಿ ಸದ್ದಿಲ್ಲದೆ ನಡಿತಾ ಇದೆ ಸ್ಪಾ ಹೌದು ಸ್ಪಾ ದಂಧೆ ಅಸಲಿ ಕಹಾನಿ ಏನು ಗೊತ್ತಾ ನಾವು ಹೇಳತೇವಿ ನೋಡಿ ಇನ್ನೂ ಈ ಒಂದು ಕರಾಳ ದಂಧೆ ಯ ಹಿಂದೆ ಬೆನ್ನಿಗೆ ನಿಂತವರು ಯಾರು ಗೊತ್ತಾ ಟ್ರೇಡ್ ಲೈಸನ್ಸ್ ಅಧಿಕಾರ ಚೇಂಜ್ ಆಗತ್ತಾ

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿ ಯಲ್ಲಿ ಸ್ಪಾ ಮಸಾಜ್ ಸೆಂಟರ್ ಗಳ ದಂಧೆ ವ್ಯಾಪಕ ವಾಗಿ ನಡೆಯುತ್ತಲೇ ಇದೆ.ಇವುಗಳು ಅನೈತಿಕ ಚಟುವಟಕೆಗಳ ತಾಣಗಳು ಎಂದು ಹಲವರು ದ್ವನಿ ಕೂಡ ಎತ್ತಿದ್ದರು.

ಆದ್ರೆ ಕಾಂಗ್ರೆಸ್ ಮುಖಂಡರೊಬ್ಬರು ಕೃಪಾ ಶೀರ್ವಾದ ಜೊತೆಗೆ ಕಾಂಗ್ರೆಸ್ ಪಾಲಿಕೆ ಸದಸ್ಯರ ಪಾಲುದಾರಿಕೆ ಯಿಂದ ಇದೀಗ ಮತ್ತೆ ಸ್ಪಾ ಹೆಸರಿ ನಲ್ಲಿ ನಗರದಲ್ಲಿ ಹೈಟೆಕ್ ಆಗಿ ವೈಶ್ಯವಾಟಿಕೆ ಎಗ್ಗಿಲ್ಲದೆ ನಡೆಯುತ್ತಲೇ ಇದೆ.

ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕಾಗಿದ್ದ ಆರೋಗ್ಯ ಅಧಿಕಾರಿಗಳನ್ನು ಕಾಂಗ್ರೆಸ್ ಪಾಲಿಕೆ ಓರ್ವ ಸದಸ್ಯೆ ಕಂಟ್ರೋಲ್ ಮಾಡುತ್ತಿದ್ದಾರೆ ಅಂತೆ ಅಲ್ಲದೆ ಲೈಸೆನ್ಸ್ ನೀಡಬೇಕಾದರೆ ತಮಗೆ ಪ್ರಸಾದ ಮುಟ್ಟಿಸಿ ನಂತರವೇ ತೆರಳಬೇಕು ಎನ್ನುವ ನಿಯಮ ಇದೀಗ ಜಾರಿಯಾಗಿದೆಯಂತೆ

ಅಲ್ಲದೆ ಉತ್ತರ ಭಾರತದ ಹೆಣ್ಣು ಮಕ್ಕಳನ್ನು ಸ್ಪಾ ಗಳಿಗೆ ಸಪ್ಲೈ ಮಾಡುವ ಓರ್ವ ರೈಲ್ವೆ ನೌಕರಿ ಹೊಂದಿರುವ ಆಸಾಮಿ ಹಪ್ತಾ ವಸೂಲಿ ಮಾಡಿ ಪೊಲೀಸ್,ಆರೋಗ್ಯ,ಪಾಲಿಕೆ ಹಾಗೂ ಓರ್ವ ಕಾಂಗ್ರೆಸ್ ಮುಖಂಡನಿಗೆ ತಲುಪಿಸಿ ಹುಬ್ಬಳ್ಳಿ ಯನ್ನು ವೈಶ್ಯಾವಟಿಕೆ ತಾಣ ಮಾಡಲು ಸಕಲ ತಯಾರಿಯನ್ನು ಇದೀಗ ಇದೆ ತಂಡ ತೆಗೆದು ಕೊಂಡಿದ್ದು ಪೊಲೀಸ್ ಉನ್ನತ ಅಧಿಕಾರಿಗಳು ಕೂಡ ಗಮನ ಹರಿಸುತ್ತಿಲ್ಲ.

ಇನ್ನು ಮುಖ್ಯವಾಗಿ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆ, ಗೋಕುಲ್ ರಸ್ತೆ ಪೊಲೀಸ್ ಠಾಣೆ, ಹಾಗೂ ಕೇಶ್ವಾಪೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಗ್ಗಿಲ್ಲದೆ ಸ್ಪಾ ಮಸಾಜ್ ಸೆಂಟರ್ ಮೂಲಕ ಹೈ ಟೆಕ್ ವೇಶ್ಯಾವಾಟಿಕೆ ನಡೆಸಲಾಗುತ್ತಿದೆ

ಈ ಬಗ್ಗೆ ಸಾಕ್ಷಿ ಸಮೇತ ಕೆಲವೇ ದಿನಗಳಲ್ಲಿ ನಗರದಲ್ಲಿ ಸ್ಪಾ ಸೆಂಟರ್ ಗಳಲ್ಲಿ ನಡೆಯುತ್ತಿರುವ ಕರಾಳ ದಂಧೆಯನ್ನು  ಬಯಲು ಮಾಡಲಿದೆ ಸುದ್ದಿ ಸಂತೆ ಇನ್ನೂ ನಗರದಲ್ಲಿ ಹಲವೆಡೆ ಈ ಒಂದು ಸ್ಪಾ ಕಳ್ಳಾಟ ದಂಧೆ ಜೋರಾಗಿದ್ದು ಹೇಗೆ ಎಲ್ಲೇಲ್ಲಿ ಹೈಟೆಕ್ ಆಗಿ ನಡೆಯಲಿದೆ ಎಂಬೊಂದನ್ನು ದಾಖಲೆ ಸಮೇತ ವಾಗಿ ಬಯಲು ಮಾಡಲಿದೆ

ಇದರ ಜೊತೆಯಲ್ಲಿ ಪ್ರಮುಖವಾಗಿ ಒಮ್ಮೆ ಯಾರಾದರೂ ಈ ಒಂದು ಸ್ಪಾ ಕೇಂದ್ರ ಕ್ಕೆ ಹೋಗಿ ಬಂದರೆ ಅವರಿಗೆ ಸ್ಪಾ ಕೇಂದ್ರ ಗಳಿಂದ ಸಂದೇಶ ಗಳು ಬರುತ್ತಿವೆ.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.