ಆ ‘ಶಿಕ್ಷಕ’ ನ ಪ್ರಾಣ ತಗೆದ ಸಲಿಂಗಕಾಮ ಆಪ್ – ಎಲ್ಲರಿಂದಲೂ ಒಳ್ಳೆಯವರು ಅನಿಸಿಕೊಂಡ ವಿಶ್ವನಾಥ್ ಹೀಗ್ಯಾಕೆ ಮಾಡಿದರು…..

Suddi Sante Desk

ಚಿಕ್ಕಬಳ್ಳಾಪುರ –

ಭೀಕರವಾಗಿ ಚಿಕ್ಕಬಳ್ಳಾಪುರ ದಲ್ಲಿ ಹತ್ಯೆಯಾದ ಶಿಕ್ಷಕನ ಸಾವಿಗೆ ಮತ್ತೊಂದು ಸ್ಪೋಟದ ಅಂಶ ಪತ್ತೆಯಾಗಿದೆ. ಈಗಾಗಲೇ ಈ ಒಂದು ಪ್ರಕರಣ ದಲ್ಲಿ ಮೂವರು ಆರೋಪಿಗಳನ್ನು ಬಂಧನ ಮಾಡಿರುವ ಬೆನ್ನಲ್ಲೇ ಈ ಒಂದು ಪ್ರಕರಣಕ್ಕೆ ಮತ್ತೊಂದು ಸ್ಫೋಟ ಕ ಅಂಶ ಪತ್ತೆಯಾಗಿದೆ.

ಹೌದು ಸರ್ಕಾರಿ ಶಾಲಾ ಶಿಕ್ಷಕ ತಾನೇ ಸೃಷ್ಠಿಸಿಕೊಂಡ ಸಲಿಂಗಕಾಮದ ಜಾಲದಲ್ಲಿ ಸಿಲುಕಿ ಹಂತಕರಿಂದ ಬರ್ಬರವಾಗಿ ಕೊಲೆಗೀಡಿರುವುದು ಪೊಲೀಸರ ತನಿಖೆ ವೇಳೆ ಬಯಲಾಗಿ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.ಆದರೆ ಇತ್ತೀಚೆಗೆ ವಿಶ್ವನಾಥ ಮಾನಸಿಕವಾಗಿ ಹೆಣ್ಣಿನ ಭಾವನೆಗೆ ತಿರುಗಿದ್ದು ಸಲಿಂಗಕಾಮದ ಚಟ ಬೆಳೆಸಿಕೊಂಡಿದ್ದ.ಇದಕ್ಕಾಗಿ ಸಲಿಂಗಕಾಮದ ಆಪ್‌ ವೊಂದರಲ್ಲಿ ಸದಸ್ಯ ಕೂಡ ಆಗಿದ್ದನಂತೆ. ಆದರೆ ಆಪ್‌ ನಲ್ಲಿ ಪರಿಚಯವಾದ ಅಶೋಕ್ ಎಂಬಾತ ಕರೆ ಮಾಡಿ ಸಲಿಂಗಕಾಮಕ್ಕೆ ಕರೆದಿದ್ದಾನೆ.

ಆಗ ಶಿಕ್ಷಕ ವಿಶ್ವನಾಥ ಬೈಪಾಸ್ ಸಮೀಪ ನಿರ್ಜನ ಪ್ರದೇಶಕ್ಕೆ ಹೋಗಿದ್ದಾರೆ.ದೊಡ್ಡಬಳ್ಳಾಪುರದಿಂದ ಆಗಮಿಸಿದ್ದ ಅಶೋಕ್ ಮಂಜುನಾಥ ಅಲಿಯಾಸ್ ಕಿಚ್ ಬಿನ್ ಲಕ್ಷ್ಮೀಪತಿ (26), ಗೌರಿಬಿದನೂರು ನಿವಾಸಿ ಆರೋಪಿ ಮಧು ಆಲಿಯಾಸ್ ಬಿನ್ ರತ್ನಯ್ಯ (24), ಗೌರಿಬಿದನೂರಿನ ನದಿಗಡ್ಡೆಯ ಶ್ರೀಕಾಂತ್ ಅಲಿಯಾಸ್ ಕಾಂತ ಬಿನ್ ವೆಂಕಟೇಶ (21) ಎಂಬುವರು ಕುಡಿದ ಆಮಲಿನಲ್ಲಿ ವಿಶ್ವನಾಥ ಜೊತೆಗೆ ಸಲಿಂಗಕಾಮ ನಡೆಸಿ ಸರ್ಕಾರಿ ಶಿಕ್ಷಕನೆಂದು ತಿಳಿದು ಆತನ ಬಳಿ ಇದ್ದ ಹಣಕ್ಕಾಗಿ ಒತ್ತಾಯಿಸಿ ದ್ದಾರೆ.

ಬಳಿಕ ಶಿಕ್ಷಕನ ಮೊಬೈಲ್ ಪಡೆದು ಫೋನ್ ಪೇ ಮೂಲಕ 21 ಸಾವಿರ ರು ನಗದು ವರ್ಗಾಯಿಸಿಕೊಂ ಡಿರುವ ಆರೋಪಿಗಳು ಶಿಕ್ಷಕ ವಿಶ್ವನಾಥನನ್ನು ಮನಸೋ ಇಚ್ಚೆ ಥಳಿಸಿ ಕೊಲೆ ಮಾಡಿರುವುದು ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ.ಸದ್ಯ ಪೊಲೀಸರು ಮಂಜುನಾಥ, ಮಧು, ಶ್ರೀಕಾಂತರನ್ನು ಬಂಧಿಸಿದ್ದು ಪ್ರಮುಖ ಆರೋಪಿ ಅಶೋಕ್‌ನ ಹುಡುಕಾಟಕ್ಕೆ ಬಲೆ ಬೀಸಿದ್ದಾರೆ.

ಕಳೆದ ಜೂನ್ 4 ರಂದು ಭಾನುವಾರ ರಾತ್ರಿ ಗೌರಿ ಬಿದನೂರು ಪಟ್ಟಣದ ಸದಾಶಿವ ನಗರದ ನಿವಾಸಿ ಸರ್ಕಾರಿ ಶಾಲಾ ಶಿಕ್ಷಕ ಎನ್.ವಿಶ್ವನಾಥ,ರಸ್ತೆಯಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ತರುವುದಾಗಿ ಮನೆ ಯಿಂದ ಹೊರಗೆ ಹೋದವರು ಮತ್ತೆ ವಾಪಸ್ಸು ಬಂದಿಲ್ಲ.ಈ ಬಗ್ಗೆ ಆತಂಕಗೊಂಡ ಅವರ ಪತ್ನಿ ಲಾವಣ್ಯ ಪೊಲೀಸರಿಗೆ ದೂರು ನೀಡಿದ್ದಳು. ನಾಪತ್ತೆ ಯಾಗಿದ್ದ ವಿಶ್ವನಾಥ ಬಗ್ಗೆ ಪ್ರಕರಣ ದಾಖಲಿಸಿಕೊಂ ಡಿದ್ದ ಪೊಲೀಸರಿಗೆ ಜೂನ್ 5 ರಂದು ಸೋಮವಾರ ಪಟ್ಟಣ ಬೈಪಾಸ್ ರಸ್ತೆಯಲ್ಲಿನ ನರ್ಸಿಂಗ್ ಕಾಲೇಜು ಮುಂದಿನ ನಿರ್ಜನ ಪ್ರದೇಶದಲ್ಲಿ ವಿಶ್ವನಾಥ ಕೊಲೆ ಗೀಡಾದ ಮೃತದೇಹ ಪತ್ತೆಯಾಗಿದೆ.

ಎಸ್ಪಿ ಮಿಥುನ್ ಕುಮಾರ್ ಮಾರ್ಗದರ್ಶನದಲ್ಲಿ ಸಿಪಿಐ ಶಶಿಧರ್,ಪಿಎಸ್‌ಐ ಪ್ರಸನ್ನಕುಮಾರ್ ಹಾಗೂ ಸಿಬ್ಬಂದಿ ಕೊಲೆ ಹಂತಕರನ್ನು ಪತ್ತೆ ಹಚ್ಚಿದಾಗ ವಿಶ್ವನಾಥ ಸ್ವತಃ ಸಲಿಂಕಾಮದ ಆಸೆಗೆ ಬಿದ್ದು ಹಂತಕರಿಂದ ಪ್ರಾಣ ಕಳೆದುಕೊಂಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ

ಒಟ್ಟಾರೆ ಸರ್ಕಾರಿ ಶಾಲಾ ಶಿಕ್ಷಕರಾಗಿದ್ದ ವಿಶ್ವನಾಥಗೆ ಕೈ ತುಂಬ ಸಂಬಳ ಬರುತ್ತಿದ್ದು ಸಾಲದಿದ್ದಕ್ಕೆ ಹೆಂಡತಿ ಜೊತೆ ಸೇರಿ ನ್ಯೂಟ್ರಿಷನ್ ವಹಿವಾಟು ನಡೆಸುತ್ತಿದ್ದ ತಾನಾಯಿತು ತನ್ನ ಕೆಲಸ ಆಯಿತು ಎಂದುಕೊಂಡು ಸುಮ್ಮನೆ ಹೆಂಡತಿ ಮಕ್ಕಳೊಂದಿಗೆ ಇರಬೇಕಾದ ಶಿಕ್ಷಕ ತಾನು ಮಾಡಿಕೊಂಡ ಎಡವಟ್ಟಿನಿಂದಾಗಿ ದುರಂತ ಸಾವು ಕಂಡಿದ್ದು ದೊಡ್ಡ ವಿಪರ್ಯಾಸವೇ ಸರಿ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.