ಬೆಂಗಳೂರು –
ಶಿಕ್ಷಕರ ವರ್ಗಾವಣೆಯ ವಿಚಾರದಲ್ಲಿ ಯಾರಿಗೂ ಯಾವುದೇ ರೀತಿಯಲ್ಲಿ ಅನ್ಯಾಯ ಮಾಡೊದಿಲ್ಲ ಆಗಲು ಬಿಡೊದಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದರು. ಹೀಗೆ ಹೇಳಿದ ಮಾತನ್ನು ಸಚಿವರು ಮರೆತಂತೆ ಕಾಣುತ್ತಿದೆ.ಈಗಾಗಲೇ ವರ್ಗಾ ವಣೆಯ ವಿಚಾರ ಕುರಿತಂತೆ ಮಾರ್ಗಸೂಚಿ ವೇಳಾ ಪಟ್ಟಿ ಪ್ರಕಟವಾಗಿತ್ತು ಇದರ ಬೆನ್ನಲ್ಲೇ ದಿಢೀರನೇ ನಿನ್ನೇ ಕೆಲವೊಂದಿಷ್ಟು ಶಿಕ್ಷಕರ ವರ್ಗಾವ ಣೆ ಪಟ್ಟಿ ಸದ್ದಿಲ್ಲದೇ ಪ್ರಕಟಗೊಂಡಿದೆ.

ಇನ್ನೂ ವರ್ಗಾವಣೆ ಆರಂಭವಾದ ಶಿಕ್ಷಕರನ್ನು ಹೇಗೆ ಯಾವ ಆಧಾರದ ಮೇಲೆ ವರ್ಗಾವಣೆ ಮಾಡಲಾ ಗಿದೆ ವರ್ಗಾವಣೆಗೊಂಡ ಪ್ರತಿಯೊಂದು ಲಿಸ್ಟ್ ನಲ್ಲೂ ಶಿಕ್ಷಣ ಸಚಿವರ ಅನುಮೊದನೆ ಎಂದು ಉಲ್ಲೇಖ ಮಾಡಲಾಗಿದೆ.ಹಾಗಾದರೆ ವರ್ಗಾವಣೆ ಗೊಂಡ ಶಿಕ್ಷಕರು ವಿಶೇಷ ಶಿಕ್ಷಕರಾ ಏನು ಯಾಕೇ ಇವರನ್ನು ಮಾಡಲಾಗಿದೆ. ಇವರಿಗಿಂತಲೂ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಎಲ್ಲದರಲ್ಲೂ ಅರ್ಹತೆಯನ್ನು ಹೊಂದಿದ ಶಿಕ್ಷಕರಿದ್ದರೂ ಹೀಗಿರುವಾಗ ವರ್ಗಾವಣೆ ಲಿಸ್ಟ್ ಬರುತ್ತಿದ್ದಂತೆ ನಾಡಿನ ಮೂಲೆ ಮೂಲೆಗಳಿಂದ ಶಿಕ್ಷಕರು ಅಸಮಾಧನಗೊಂಡಿದ್ದಾರೆ.

ಒಂದು ಕಣ್ಣಿಗೆ ಸುಣ್ಣ ಮತ್ತೊಂದು ಕಣ್ಣಿಗೆ ಬೆಣ್ಣಿ ಎಂಬಂತಾಗಿದ್ದು ಈ ಒಂದು ವರ್ಗಾವಣೆಯ ಲಿಸ್ಟ್ ನ ಹಿಂದೆ ಸಾಕಷ್ಟು ಅನುಮಾನಗಳು ಹುಟ್ಟುಕೊಂ ಡಿದ್ದು ಶಿಕ್ಷಕರ ಪ್ರಶ್ನೆಗಳಿಗೆ ಉತ್ತರಿಸಬೇಕಾದವರು ಮೌನವಾಗಿದ್ದಾರೆ.

ಇನ್ನೂ ಯಾವ ಶಿಕ್ಷಕರಿಗೂ ಅನ್ಯಾಯ ಆಗಲು ಬಿಡೊದಿಲ್ಲ ಎಂದು ಹೇಳಿದ ಶಿಕ್ಷಣ ಸಚಿವರೇ ಹೀಗ್ಯಾಕೆ ಮಾಡಿದರಿ ಈ ಪ್ರಶ್ನೆಗಳಿಗೆ ಉತ್ತರಿಸಿದ ದಯಮಾಡಿ ಇಲ್ಲವಾದರೆ ಸದ್ದು ಗದ್ದಲವಿಲ್ಲದೇ ವರ್ಗಾವಣೆಗೊಂಡಿರುವ ಈ ಒಂದು ಆದೇಶದ ವಿರುದ್ದ ಶಿಕ್ಷಕರು ಸಿಡಿದೆಳಲಿದ್ದಾರೆ.