ರಾಜ್ಯದ ಸರ್ಕಾರಿ ನೌಕರರಿಗೆ ವೇತನ ಸಮಿತಿ ರಚನೆ ಕುರಿತು ವಿಧಾನ ಸಭೆಯಲ್ಲಿ ಇನ್ನೂ ಸಿಗದ ಉತ್ತರ ಹೇಳಿ ಹೀಗ್ಯಾಕೆ ಮಾಡತಾರೆ ಮುಖ್ಯಮಂತ್ರಿ ಅವರು……

Suddi Sante Desk

ಬೆಂಗಳೂರು

ರಾಜ್ಯ ಸರ್ಕಾರಿ ನೌಕರರಿಗೆ ವೇತನ ಮತ್ತಿತರ ಭತ್ಯೆಗಳನ್ನು ಪರಿಷ್ಕರಿಸಲು ಬರುವ ಅಕ್ಟೋಬರ್‌ನಲ್ಲಿ ಏಳನೇ ವೇತನ ಆಯೋಗವನ್ನು ರಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿದ್ದ ಭರವಸೆ ಇನ್ನೂ ಈಡೇರುತ್ತಿಲ್ಲ ಈ ಒಂದು ಭರವಸೆ ಗಳು ಇನ್ನೂ ಜಾರಿಗೆ ಬರುತ್ತಿಲ್ಲ ಈ ಒಂದು ವಿಚಾರ ಕುರಿತು ಮುಖ್ಯಮಂತ್ರಿ ಅವರು ಸದನದಲ್ಲಿ ಹೇಳುತ್ತಿಲ್ಲ ಹೀಗಾಗಿ ಈ ಎಲ್ಲಾ ಭರವಸೆ ಗಳು ಭರವಸೆಯಾಗಿಯೇ ಉಳಿಯಲಿದೆಯೇ ಎಂಬ ದೊಡ್ಡ ಅನುಮಾನ ಕಾಡುತ್ತಿದೆ.

ಈ ಅನುಮಾನ ಈಗ ರಾಜ್ಯ ಸರ್ಕಾರಿ ನೌಕರರನ್ನು ಕಾಡುತ್ತಿದೆ.ವಿಧಾನಸಭೆಯಲ್ಲಿ ಶಾಸಕ ಐಹೋಳೆ ಡಿ. ಮಹಾಲಿಂಗಪ್ಪ ಕೇಳಿದ ಲಿಖಿತ ಪ್ರಶ್ನೆಗೆ ಉತ್ತರಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಗಳ ಪರಿಷ್ಕರಣೆಯ ವಿಷಯವು ಸರ್ಕಾರದ ನೀತಿ ನಿರ್ಣಯಕ್ಕೆ ಸಂಬಂಧಿಸಿದ ವಿಷಯವಾಗಿದ್ದು ರಾಜ್ಯದ ಆರ್ಥಿಕ ಸ್ಥಿತಿಗತಿಗಳನ್ನು ಗಮನದಲ್ಲಿರಿಸಿ ಸಂದರ್ಭಾನುಸಾರ ಕ್ರಮ ತೆಗೆದುಕೊಳ್ಳ ಲಾಗುವುದು ಎಂದಷ್ಟೇ ಹೇಳಿದ್ದಾರೆ.

ಯಾವ ಕಾಲ ಮಿತಿಯಲ್ಲಿ ರಾಜ್ಯ ಸರ್ಕಾರಿ ನೌಕರರ ಅನುಕೂಲಕ್ಕಾಗಿ ಏಳನೇ ವೇತನ ಆಯೋಗವನ್ನು ರಚಿಸಿ ನೌಕರರ ವೇತನ ಮತ್ತು ಭತ್ಯೆಗಳನ್ನು ಪರಿಷ್ಕರಿಸಲಾಗು ತ್ತದೆ ಎಂದು ನೇರವಾಗಿಯೇ ಕೇಳಲಾಗಿದ್ದ ಪ್ರಶ್ನೆಗೆ ಸಿಎಂ ಈ ಮೇಲಿನಂತೆ ಉತ್ತರಿಸಿದ್ದು ಈ ಹಿಂದೆ ಪ್ರಕಟಿಸಿದಂತೆ ಅಕ್ಟೋಬರ್‌ನಲ್ಲಿ 7ನೇ ವೇತನ ಆಯೋಗ ರಚಿಸಲಾಗು ತ್ತದೆ ಎಂದು ಸ್ಪಷ್ಟವಾಗಿ ವಿಧಾನಸಭೆಯಲ್ಲಿ ಉತ್ತರ ನೀಡಿಲ್ಲ.

ಇನ್ನೂ ಸೆಪ್ಟೆಂಬರ್‌ 6 ರಂದು ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಹಯೋಗದಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆಯೋಜಿಸಿದ್ದ ಮೊದಲ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ್ದ ಸಿಎಂ ಬೊಮ್ಮಾಯಿ ಅಕ್ಟೋಬರ್‌ನಲ್ಲಿ ಏಳನೇ ವೇತನ ಆಯೋಗವನ್ನು ರಚಿಸಲಾಗುವುದು ಎಂದು ಸ್ಪಷ್ಟವಾಗಿ ಭರವಸೆ ನೀಡಿದ್ದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ನೌಕರರ ವೇತನ ಮತ್ತು ಭತ್ಯೆಗಳ ನಡುವೆ ಗಣನೀಯ ಪ್ರಮಾಣದಲ್ಲಿರುವ ವ್ಯತ್ಯಾ ಸವನ್ನು ಸರಿಪಡಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ ಹೀಗಾಗಿ ಈ ಸಂಬಂಧ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಅವರು ರಾಜ್ಯ ಸರ್ಕಾರ ವೇತನ ಆಯೋಗವನ್ನು ರಚಿಸಿ ಕೊಂಡು ಕಾಲದಿಂದ ಕಾಲಕ್ಕೆ ವೇತನ ಪರಿಷ್ಕರಿಸಿಕೊಂಡು ಬರುತ್ತಿದೆ.ಇದು ರಾಜ್ಯ ಸರ್ಕಾರದ ನೀತಿಯಾಗಿದ್ದು ಕೇಂದ್ರ ಸರ್ಕಾರದ ನಿಯಮಗಳು ಮತ್ತು ಕೇಂದ್ರ ವೇತನ ಆಯೋಗ ಮತ್ತು ಇತರ ರಾಜ್ಯಗಳ ವೇತನ ಆಯೋಗ ಶಿಫಾರಸುಗಳನ್ನು ರಾಜ್ಯ ಸರ್ಕಾರದ ನೌಕರರಿಗೆ ಹೋಲಿಸಿ ಅನ್ವಯಿಸಲು ಬರುವುದಿಲ್ಲ ಎಂದಿದ್ದು ಇದೊಂದು ಮತ್ತೊಂದು ಆತಂಕವನ್ನುಂಟು ಮಾಡಿದೆ.

.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.