ಬೆಂಗಳೂರು –
ಕೇಂದ್ರ ಸರ್ಕಾರ ಈಗಾಗಲೇ ಸಿಬಿಎಸ್‌ಇ ಯ ಹನ್ನೆರಡನೇ ತರಗತಿಯ ಪರೀಕ್ಷೆಗಳನ್ನು ರದ್ದು ಮಾಡಿದೆ.ಆದರೆ ರಾಜ್ಯ ಸರ್ಕಾರ ಮಾತ್ರ ಪರೀಕ್ಷೆಗ ಳನ್ನು ರದ್ದು ಮಾಡದೆ ಕಾದು ನೋಡುವ ನಿರ್ಧಾರಕ್ಕೆ ಬಂದಿರುವುದು ಪೋಷಕರು ವಿದ್ಯಾರ್ಥಿಗಳ ವಿರೋ ಧಕ್ಕೆ ದಾರಿ ಮಾಡಿಕೊಟ್ಟಿದ್ದು ಇದರಿಂದಾಗಿ ನಾಡಿನ ವಿದ್ಯಾರ್ಥಿಗಳ ಪೊಷಕರು ಸಚಿವರ ಈ ಹೇಳಿಕೆಗೆ ಅಸಮಾಧಾನಗೊಂಡಿದ್ದಾರೆಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಕಿಡಿಕಾರಿದ್ದಾರೆ.
ಕೇಂದ್ರ ಸರ್ಕಾರವೇ ಪರೀಕ್ಷೆಗಳನ್ನು ರದ್ದುಗೊಳಿಸಿರು ವಾಗ ರಾಜ್ಯವೇಕೆ ಮಾಡುತ್ತಿಲ್ಲ ಎಂದು ಹಲವು ಪ್ರಶ್ನೆ ಮಾಡುತ್ತಿದ್ದಾರೆ.ರಾಜ್ಯ ಸರ್ಕಾರ ನಿರ್ಧಾರ ವಿದ್ಯಾರ್ಥಿ ಗಳಲ್ಲಿ ಭೇದಭಾವ ಮೂಡಿಸುತ್ತದೆ.ಪರೀಕ್ಷೆಗೆ ನಾವು ಪೂರ್ಣ ಸಿದ್ಧತೆಗಳನ್ನೂ ನಡೆಸಿಲ್ಲ. ಸರ್ಕಾರ ಯಾವ ರೀತಿಯ ಮೌಲ್ಯಮಾಪನ ನಡೆಸುತ್ತಿದೆ ಎಂಬುದು ನಮಗೆ ತಿಳಿಯುತ್ತಿಲ್ಲ ಎನ್ನುತ್ತಿದ್ದಾರೆ ನಾಡಿನ ವಿದ್ಯಾರ್ಥಿಗಳು
ಈ ನಡುವೆ ಪರೀಕ್ಷೆ ರದ್ದುಗೊಳಿಸಿರುವ ಪ್ರಧಾನಮಂ ತ್ರಿ ನರೇಂದ್ರ ಮೋದಿಯವರ ನಿರ್ಧಾರವನ್ನು ರಾಜ್ಯ ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್ ನಾರಾಯಣ್ ಕೊಂಡಾಡಿದ್ದಾರೆ. ಒಟ್ಟಾರೆ ಏನೇ ಆಗಲಿ ಪರೀಕ್ಷೆ ವಿಚಾರದಲ್ಲಿ ಯಾಕೇ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಗೊಂದಲ ಮಾಡಿಕೊಳ್ಳುತ್ತಿದೆ ಇನ್ನಾದರೂ ಶೀಘ್ರದಲ್ಲೇ ಸೂಕ್ತ ತೀರ್ಮಾನವನ್ನು ತಗೆದುಕೊಂಡು ಗೊಂದಲದಲ್ಲಿ ಇರುವ ಪೊಷಕರಿಗೆ ವಿದ್ಯಾರ್ಥಿಗಳಿಗೆ ಸೂಕ್ತ ರೀತಿಯಲ್ಲಿ ಸುದ್ದಿ ನೀಡಬೇಕಿದೆ.