ಬೆಂಗಳೂರು –
ಅದ್ಯಾಕೋ ಏನೋ ವರ್ಗಾವಣೆಯ ವಿಚಾರ ದಲ್ಲಿ ಶಿಕ್ಷಕರಿಗೆ ಎಡವಟ್ಟುಗಳಿಗೆ ಒಂದಿಲ್ಲೊಂದು ಸಮಸ್ಯೆ ತೊಂದರೆಗಳು ಮೇಲಿಂದ ಮೇಲೆ ಸದಾ ಇದ್ದೇ ಇರುತ್ತವೆ ಎಂಬೊದಕ್ಕೆ ಸಧ್ಯ ಮುಂದೂಡಿಕೆ ಯಾಗಿರುವ ಹೆಚ್ಚುವರಿ ಶಿಕ್ಷಕರ ವರ್ಗಾವಣೆಯೇ ಸಾಕ್ಷಿ.ಹೌದು ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಇದೇ ವರ್ಷ ಸತತ 2ನೇ ಬಾರಿ ರದ್ದುಗೊಂಡಿದೆ.
2022-23ನೇ ಸಾಲಿನ ವರ್ಗಾವಣೆ ಪ್ರಕ್ರಿಯೆ ನಡೆಸಲು ಶಿಕ್ಷಣ ಇಲಾಖೆ 2022ರ ಡಿಸೆಂಬರ್ 22ರಂದು ವೇಳಾಪಟ್ಟಿಯನ್ನು ಪ್ರಕಟಿಸಿತ್ತು. ಡಿಸೆಂಬರ್ 28 ರಂದು ಹೆಚ್ಚುವರಿ ಶಿಕ್ಷಕರ ಕರಡು ಪಟ್ಟಿಯನ್ನು ಕೂಡಾ ಪ್ರಕಟಿಸಿದ್ದು ಜನೆವರಿ 11ರಂದು ಹೆಚ್ಚುವರಿ ಶಿಕ್ಷಕರ ಜ್ಯೇಷ್ಠತಾ ಪಟ್ಟಿ ಪ್ರಕಟಿಸಿ ಜನೆವರಿ 12ರಂದು ಕೌನ್ಸೆಲಿಂಗ್ ಪ್ರಕ್ರಿಯೆ ನಡೆಯಬೇಕಿತ್ತು ಆದರೆ ತಾಂತ್ರಿಕ ಕಾರಣ ನೀಡಿ ಜನೆವರಿ 24ಕ್ಕೆ ಕೌನ್ಸೆಲಿಂಗ್ ಮುಂದೂಡಲಾಗಿತ್ತು ತಾಂತ್ರಿಕ ಅಡ್ಡಿಗಳೇನು ಎಂಬ ಕುರಿತಂತೆ ನೊಡೊದಾದರೆ ಅಂಗವಿಕ ಲರು, ಪತಿ-ಪತ್ನಿ ಪ್ರಕರಣ,ಅನಾರೋಗ್ಯ ಸಂಬಂಧಿ ಮಾಹಿತಿಗಳು ಸೇರಿ ಶಿಕ್ಷಕರು ನೀಡುವ ಮಾಹಿತಿಯನ್ನು ಅಪ್ಲೋಡ್ ಮಾಡುವಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದೆ
ಹೀಗಾಗಿ ಮುಂಚಿತವಾಗಿ ಇದೇಲ್ಲವನ್ನು ಪ್ಲಾನ್ ಮಾಡಿಕೊಂಡು ಅಪ್ಡೇಟ್ ಮಾಡಬೇಕಾಗಿದ್ದು ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಎಡವಟ್ಟಿನಿಂದಾಗಿ ಈ ಒಂದು ಸಮಸ್ಯೆ ಎದು ರಾಗಿದ್ದು ಹೀಗಾಗಿ ಸಧ್ಯ ಪ್ರಕ್ರಿಯೆ ಸಂಪೂರ್ಣ ವಾಗಿ ಬಂದ್ ಆಗಿದ್ದು ಹೀಗಾಗಿ ವರ್ಗಾವಣೆಯ ನಿರೀಕ್ಷೆಯಲ್ಲಿದ್ದ ಅದೇಷ್ಟೊ ಶಿಕ್ಷಕರು ಸಮಸ್ಯೆ ಯನ್ನು ಎದುವರಿಸುವಂತಾಗಿದ್ದು ಮುಂದೇನು ಆಗುತ್ತದೆ ಎಂಬೊದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..