ಬೆಂಗಳೂರು –
ವರ್ಗಾವಣೆ ವಿಚಾರದಲ್ಲಿ ಈ ಸಂದೇಶ ಹರಡುತ್ತಿರು ಮಹಾತ್ಮರಿಗೆ ಹಿರಿಯ ಶಿಕ್ಷಕ ಈರಪ್ಪ ಸೊರಟೂರ ಕೆಲವೊಂದಿಷ್ಟು ಪ್ರಶ್ನೆ ಮುಂದಿಟ್ಟಿದ್ದಾರೆ ಹೌದು ನನ್ನ ಪ್ರಶ್ನೆಗಳಿಗೆ ಉತ್ತರಿಸಿ.
೧) ಕಲ್ಯಾಣ ಕರ್ನಾಟಕದಲ್ಲಿ ಹತ್ತಾರು ವರ್ಷಗಳಿಂದ ಖಾಲಿ ಇರುವ ಹುದ್ದೆಗಳಿಗೆ ಎಷ್ಟು ಭಾರಿ ಹೋರಾಟ ಮಾಡಿದ್ದೀರಿ? 2)ನೇಮಕಾತಿ ವಿಷಯದಲ್ಲಿ ತೊರದ ಕಾಳಜಿ 10,15,20+ ಸೇವೆ ಸಲ್ಲಿಸಿ ಮಾನಸಿಕವಾಗಿ ಬಳಲಿದ ಶಿಕ್ಷಕರ ಮೇಲೆ ಯಾಕೀ ಈ ದೀಡಿರ್ ಕೋಪ ,ಇದು ಸ್ವಂತ ಅನಿಸಿಕೆಯೇ? 3)ಕಲ್ಯಾಟ ಕರ್ನಾಟಕದ ಹೊರಗೆ ಕಾರ್ಯ ನಿರ್ವಹಿಸುತ್ತಿರುವ ಕಲ್ಯಾಣ ಕರ್ನಾಟಕದ ನೌಕರರು ತವರು ಜಿಲ್ಲೆ ಸೇರುವುದು ಬೇಡವೇ? 4) ಕಲ್ಯಾಣ ಕರ್ನಾಟಕ ನಿರುದ್ಯೋಗಿ ಯುವಕರಿಗೆ ಹೆಚ್ಚಿನ ಅವಕಾಶ ಹುದ್ದೆಗಳು ಸಿಗುವಂತಾಗುವುದು ಬೇಡವೆ? 5) 371(J) ಹೆಸರಿಗೆ ಮಾತ್ರ ಸಾಕೇ ನೇಮಕಾತಿಯಲ್ಲಿ ಸ್ಥಳೀಯರಿಗೆ 80% ಹುದ್ದೆ ಖಾಲಿಯಾಗದಿದ್ದರೆ ನಿರುದ್ಯೋಗಿಗಳ ಪಾಡೇನು? 6) 371(j) ಕಡ್ಡಾಯ ಜಾರಿಗೆ ಪೂರಕವಾಗಿರುವ OTS ಬೇಡಿಕೆ,HK ವಿರೋಧಿ ಎಂದು ಬಿಂಬಿಸುತ್ತಿರುವುದು ಎಷ್ಟು ಸರಿ? 7) ಸ್ಥಳಿಯ ವಿದ್ಯಾವಂತ ನಿರುದ್ಯೋಗಿಗಳು ಆ ಸ್ಥಾನಗಳನ್ನು ಸಮರ್ಥವಾಗಿ ತುಂಬಲು ಸಾದ್ಯವಿಲ್ಲಾ ಎಂಬ ಅಪನಂಬಿಕೆ ತಮಗಿದೆಯೇ? 8)ನೇಮಕಾತಿ ನಿಯಮಗಳಿಗೆ ತಿದ್ದುಪಡಿಗೆ ಒತ್ತಾಯಿಸಿ, ಸ್ವಂತ ಜಿಲ್ಲೆಯವರಿಗೆ ಮಾತ್ರ ಅರ್ಜಿಗೆ ಅವಕಾಶ ಕಲ್ಪಿಸುವಂತೆ ಒತ್ತಾಯಿಸಿ ಪರವಾಗಿಲ್ಲಾ ಆದರೆ OTS ಸಿಗದೆ ಜೀವ ಕಳೆದು ಕೊಂಡ ವಯಕ್ತಿಕ ನೋವುಗಳು ಕಣ್ಣಿಗೆ ಕಾಣಿಸಿಲ್ಲವೆ, ಇದು ಮಾನವೀಯತೆ ಅಲ್ಲವೆ. 9)10 ವರ್ಷದ ಕಡ್ಡಾಯ ಸೇವೆ ನಿಯಮ ಯಾರು ವಿರೋಧಿಸಿಲ್ಲಾ ಆದರೆ ಸೇವಾವಧಿಯಲ್ಲಿ OTS ಕೆಳುವುದರಲ್ಲಿ ಯಾವುದೆ ತಪ್ಪಿಲ್ಲಾ 10)ನಿಜವಾಗಿಯೂ ವಯಕ್ತಿಕ ಕಾಳಜಿಯಿಂದ ಈ ಮಾತುಗಳನ್ನು ಆಡಿದ್ದೆ ನಿಮ್ಮದ್ದು ಗಟ್ಟಿ ಧ್ವನಿಯೇ ಆಗಿದ್ದರೆ “ನಿರಂತರವಾಗಿ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿಗೆ ಒತ್ತಾಯಿಸಿ ಹೋರಾಟಮಾಡಿ ಎಂದು ಮನವಿ ಮಾಡುತ್ತೆನೆ, 11) OTS ಹೋರಾಟಗಾರರಿಗೆ ದಿಕ್ಕಾರ ಕೂಗಿದ ತಮ್ಮ ನಡೆಯನ್ನು ಖಂಡಿಸುತ್ತೆನೆ, ಸರ್ಕಾರಿ ನೌಕರರೆಲ್ಲಾ ಸಮಾನರು ಮಾನ್ಯ ಷಡಕ್ಷರಿಯವರು ಉತ್ತಮ ವಿಚಾರಗಳ ಪರ ನಿಂತಿದ್ದಾರೆ ನಿಲ್ಲುತ್ತಾರೆ ಎಂಬ ಭರವಸೆ ಇದೆ. 12) ನಿಮಗೆ ನಿಜವಾಗಿಯೂ ಕಲ್ಯಾಣ ಕರ್ನಾಟಕದ ಕಾಳಜಿ ಇದ್ದರೆ OTSಧ್ವನಿಗೆ ಕೈ ಜೋಡಿಸಿ, ಸ್ಥಳಿಯ ನಿರುದ್ಯೋಗಿಗಳಿಗೆ ಹೆಚ್ಚಿನ ಅವಕಾಶ ಕಲ್ಲಿಸಿ ನೇಮಕಾತಿಗೆ ಒತ್ತಾಯಿಸಿ. OTS ಆಕಾಂಕ್ಷಿ ಶಿಕ್ಷಕರ ಪರವಾಗಿ ಈ ಸಂದೇಶ