ಕಲಘಟಗಿ –
ಚುನಾವಣೆಯ ಮುನ್ನವೇ ಧಾರವಾಡ ಜಿಲ್ಲೆಯಲ್ಲಿ ಚುನಾವಣೆಯ ಅಬ್ಬರದ ಪ್ರಚಾರ ದೊಂದಿಗೆ ಈಗಲೇ ಮತದಾರರ ಸಮಸ್ಯೆ ಆಲಿಸು ತ್ತಿದ್ದಾರೆ.ಹೌದು ಮಾಜಿ ವಿಧಾನ ಪರಿಷತ್ ಸದಸ್ಯ ಕಾಂಗ್ರೇಸ್ ಪಕ್ಷದ ಮುಖಂಡ ಯುವ ನಾಯಕ ನಾಗರಾಜ್ ಛಬ್ಬಿ ಅವರು ಈಗಾಗಲೇ ಬಿಡುವಿ ಲ್ಲದೇ ಕಲಘಟಗಿ ವಿಧಾನ ಸಭಾ ಕ್ಷೇತ್ರದಲ್ಲಿ ತಮ್ಮ ಬೆಂಬಲಿಗರೊಂದಿಗೆ ಬಿಡುವಿಲ್ಲದೇ ಪ್ರವಾಸ ಸುತ್ತಾಟ ಮಾಡುತ್ತಿದ್ದು ಎಲ್ಲೇಂದರಲ್ಲಿ ಸಭೆ ಸಮಾರಂಭ ಮಾಡುತ್ತಾ ಜನರ ಸಂಕಷ್ಟಗಳನ್ನು ಆಲಿಸುತ್ತಾ ಅಲ್ಲೇ ಪರಿಹಾರವನ್ನು ಕೂಡಾ ನೀಡುತ್ತಾ ನೆರವಾಗುತ್ತಿದ್ದಾರೆ
ಇದರೊಂದಿಗೆ ಚುನಾವಣೆಯ ಮುನ್ನವೇ ಕ್ಷೇತ್ರ ದಲ್ಲಿ ಬಿಡು ಬಿಟ್ಟಿದ್ದು ಕಾಲಿಗೆ ಚಕ್ರವನ್ನು ಕಟ್ಟಿ ಕೊಂಡವರಂತೆ ಸುತ್ತಾಡುತ್ತಿದ್ದು ಇದರೊಂದಿಗೆ ಈಗ ಪತಿಯ ಪರವಾಗಿ ಇವರ ಪತ್ನಿ ಜ್ಯೋತಿ ನಾಗರಾಜ ಛಬ್ಬಿ ಅಖಾಡಕ್ಕಿಳಿದಿದ್ದಾರೆ.ಕ್ಷೇತ್ರದ ಹಲವು ಗ್ರಾಮಗಳಲ್ಲಿ ಈಗಲೇ ಅವರು ಕೂಡಾ ತಮ್ಮ ಬೆಂಬಲಿಗರೊಂದಿಗೆ ಪಕ್ಷಕ ಕಾರ್ಯಕ ರ್ತರು ಮಹಿಳಾ ಮುಖಂಡರೊಂದಿಗೆ ಅಲ್ಲಲ್ಲಿ ಸಭೆ ಸಮಾರಂಭಗಳನ್ನು ಮಾಡುತ್ತಾ ಇವರು ಕೂಡಾ ಮಹಿಳೆಯರ ಸಾರ್ಜವನಿಕರ ಸಮಸ್ಯೆಗ ಳನ್ನು ಆಲಿಸುತ್ತಾ ಈಗಲೇ ಕ್ಷೇತ್ರದ ಜನರ ಕಣ್ಣೀರು ಹೊರೆಸುತ್ತಾ ನೆರವಾಗುತ್ತಿದ್ದಾರೆ.
ಅಲ್ಲದೇ ಪ್ರತಿ ಮನೆಗೂ ತೆರಳಿ ಸಮಸ್ಯೆ ಸಂಕಷ್ಟ ಗಳನ್ನು ಆಲಿಸಿ ಪ್ರತಿಯೊಂದು ಕುಟುಂಬಕ್ಕೂ ಒಂದೊಂದು ಕುಕ್ಕರ್ ಗಳನ್ನು ನೀಡುತ್ತಿದ್ದಾರೆ. ನಾಗರಾಜ ಛಬ್ಬಿ ಕೇವಲ ಹೆಸರಿಗೆ ಆಗಲೇ ಬರುವ ಚುನಾವಣೆಯಲ್ಲಿ ನಿಮ್ಮ ಯಾವುದೇ ಸಮಸ್ಯೆ ಸಂಕಷ್ಟ ಗೆ ಸದಾ ಕಾಲವೂ ನಿಂತುಕೊಳ್ಳಲಿದ್ದಾರೆ ಎಂಬ ಭರವಸೆಯ ಮಾತುಗಳನ್ನು ಇದರೊಂದಿಗೆ ಹೇಳುತ್ತಾ ಜ್ಯೋತಿ ನಾಗರಾಜ ಛಬ್ಬಿ ಅವರು ತಮ್ಮ ಬೆಂಬಲಿಗರೊಂದಿಗೆ ಈ ಒಂದು ಕಾರ್ಯ ದಲ್ಲಿ ತೊಡಗಿಕೊಂಡಿದ್ದಾರೆ.ಇವರೊಂದಿಗೆ ಎಫ್ ಸಿ ಬುಡ್ಡಿಕಾಯಿ,ಶಿವಪ್ಪ ನಾಯ್ಕರ್,ಬಸಪ್ಪ ನಾಗಣ್ಣನವರ,ನಾಗಪ್ಪ ಅಮ್ಮಿನಬಾವಿ,ವಿನೋದ ಛಬ್ಬಿ,ಕಲ್ಮೇಶ ಮಮ್ಮಿಗಟ್ಟಿ,ಮಂಜು ಸೇರಿದಂತೆ ಹಲವರು ಪಾಲ್ಗೊಂಡು ಸಾಥ್ ನೀಡಿದರು.ಇನ್ನೂ ಗ್ರಾಮದಲ್ಲಿ ಹೋದಲ್ಲಿ ಸಾರ್ವಜನಿಕರಿಂದ ಅಪಾರ ಜಬ ಬೆಂಬಲ ಕಂಡು ಬರುತ್ತಿದೆ.
ಸುದ್ದಿ ಸಂತೆ ನ್ಯೂಸ್…..