ಬಳ್ಳಾರಿ –
ಬಳ್ಳಾರಿಯಲ್ಲಿ ಗ್ರಾಪಂ ಸದಸ್ಯ ಸ್ಥಾನಗಳ ಹರಾಜು ಮಾಡಲಾಗಿದೆ. ಲಕ್ಷ ಲಕ್ಷ ರೂಪಾಯಿಗಳಿಗೆ ಗ್ರಾಪಂ ಸದಸ್ಯರನ್ನು ಹರಾಜು ಮಾಡಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಜಿಲ್ಲೆಯ ಸಿಂದಿಗೇರಿ ಗ್ರಾಮ ಪಂಚಾಯತ ಒಟ್ಟು 13 ಗ್ರಾಮ ಪಂಚಾಯತ ಸದಸ್ಯರ ಸ್ಥಾನಗಳನ್ನು ಗ್ರಾಮದ ಎಲ್ಲರ ಸುಮ್ಮುಖದಲ್ಲಿಯೇ ಹರಾಜು ಮಾಡಿ ಅವಿರೋಧವಾಗಿ ಗ್ರಾಮಸ್ಥರು ಆಯ್ಕೆ ಮಾಡಿದ್ದಾರೆ.
ಗ್ರಾಮ ಪಂಚಾಯತ ಚುನಾವಣೆ ಘೋಷಣೆಯಾದ ಮೇಲೆ ಹೀಗೆ ಬಹಿರಂಗವಾಗಿ ಲಕ್ಷ ಲಕ್ಷ ರೂಪಾಯಿಗೆ ಸದಸ್ಯರನ್ನು ಹರಾಜು ಮಾಡಿರುವ ವಿಡಿಯೋ ವೈರಲ್ ಆಗಿದೆ. ಒಂದು ದೃಷ್ಟಿಯಿಂದ ಗ್ರಾಮಸ್ಥರು ಹೀಗೆ ಮಾಡಿದ್ದು ಸರಿ ಆದರೆ ಲಕ್ಷ ಲಕ್ಷ ರೂಪಾಯಿಗೆ ಹರಾಜು ಮಾಡಿರುವ ಕ್ರಮ ಮಾತ್ರ ತಪ್ಪು. ಪ್ರಜಾಪ್ರಭುತ್ವ ವ್ಯವಸ್ಥೆಯ ನಡುವೆ ಚುನಾವಣೆ ಮಾಡಬೇಕು ಎಂಬುದು ಸಾಮಾನ್ಯ ಹೀಗಿರುವಾಗ 13 ಸದಸ್ಯರನ್ನು ಹಣದಿಂದ ಹರಾಜು ಮಾಡಿ ಈಗ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಹರಾಜು ಮಾಡಿದವರು.
ಹೀಗೆ ಹಣಕ್ಕಾಗಿ ಹರಾಜು ಹಾಕಿದವರ ಮತ್ತು ಹರಾಜಿಗೆ ಒಳಗಾದರವ ಮೇಲೆ ಪೊಲೀಸರು ಈಗ ಪ್ರಕರಣ ದಾಖಲು ಮಾಡಿದ್ದಾರೆ. ಹೌದು ಹಣವಿದ್ದರೆ ಜನ ವೋಟ್ ಹಾಕೋದೇ ಬೇಡ ಎಂಬಂತೆ ಮಾಡಿದ್ದ ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಬೈಲೂರು ಗ್ರಾಮದ ಸದಸ್ಯರ ಸ್ಥಾನ ಹರಾಜ್ ಗೆ ಜಿಲ್ಲಾಡಳಿತ ಗರಂ ಆಗಿದೆ. 51 ಲಕ್ಷದ 20 ಸಾವಿರ ರೂಪಾಯಿಗಳಿಗೆ ಹರಾಜು ಆಗಿದ್ದ 13 ಗ್ರಾಮ ಪಂಚಾಯತ್ ಸದಸ್ಯರು ಸ್ಥಾನಗಳು ಹರಾಜಾಗಿದ್ದವು.
ಸಿಂದಿಗೇರಿ ಗ್ರಾಪಂ ಗೆ ಸೇರಿದ ಬೈಲೂರು ಗ್ರಾಮದ ಎಲ್ಲ ಸದಸ್ಯ ಸ್ಥಾನಗಳು ಹರಾಜು ಮಾಡಿ ಅವರೋಧವಾಗಿ ಆಯ್ಕೆ ಮಾಡಲಾಗಿತ್ತು. ಒಟ್ಟು 26 ಸದಸ್ಯ ಸ್ಥಾನ ಹೊಂದಿರೋ ಸಿಂದಿಗೇರಿ ಗ್ರಾಪಂ.2 ರಿಂದ 5.7 ಲಕ್ಷದ ವರೆಗೂ ಹಣ ಪಾವತಿಸಿ ಸದಸ್ಯತ್ವ ಪಡೆದ ಜನ.ಮಾರೆಮ್ಮನ ಗುಡಿ ಮುಂದೆ ರಾತ್ರೋ ರಾತ್ರಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಇನ್ನೂ ಹೀಗೆ ಮಾಡಿದ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಜಿಲ್ಲಾಡಳಿತ ಜಿ ಪಂ.ಹರಾಜಿನಲ್ಲಿ ಭಾಗಿಯಾದ ಸದಸ್ಯರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಕುರುಗೋಡು ತಹಸೀಲ್ದಾರ್ ನೇತೃತ್ವದಲ್ಲಿ ಪ್ರಕರಣ ದಾಖಲಿಸಲು ಸೂಚನೆ ನೀಡಲಾಗಿದ್ದು ಸಧ್ಯ ಕೇಸ್ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ಮಾಡ್ತಾ ಇದ್ದಾರೆ. ಇವೆಲ್ಲದರ ನಡುವೆ ಸಧ್ಯ ಗ್ರಾಮ ಪಂಚಾಯತಗೆ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು ಹರಾಜಿನಲ್ಲಿ ಪಾಲ್ಗೊಂಡವರ ಭವಿಷ್ಯ ಏನಾಗಲಿದೆ ಎಂಬುದು ಕುತೂಹಲ ಮಾಡಿಸಿದೆ.,