ಬೆಂಗಳೂರು –
ಅವರಿಬ್ಬರ ಆಗಷ್ಟೇ ಹೊಸ ಜೀವನಕ್ಕೆ ಕಾಲಿಟ್ಟಿ ಜೋಡಿ.ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಗು ನಗುತ್ತಾ ಮದುವೆಯಾಗಿ ಇನ್ನೂ ಎರಡು ತಿಂಗಳು ಆಗಿಲ್ಲ.ಸುಂದರ ಸಂಸಾರವನ್ನು ನಡೆಸಬೇಕಾದಂತ ಪತಿರಾಯ ಮೊದಲ ರಾತ್ರಿಯೇ ಪುಲ್ ಟೈಟ್ ಆಗಿ ಕುಡಿದು ಬಂದು ಮೃಗೀಯ ವರ್ತನೆ ತೋರಿದ್ದಾನೆ.ಹೌದು ಪತಿರಾಯನ ಈ ಅವತಾರಕ್ಕೆ ಪತ್ನಿ ಸುಸ್ತೋ ಸುಸ್ತು ಆಗಿದ್ದಾರೆ.ಅಲ್ಲದೆ ಫಸ್ಟ್ ನೈಟ್ ರಾದ್ಧಾಂತಕ್ಕೆ ಸಂಸಾರವೇ ಕಟ್ ಆಗುವಂತಾಗಿದೆ.
ಕಳೆದ ಅಕ್ಟೋಬರ್ 29ರಂದು ಹೆಚ್ ಎಸ್ ಆರ್ ಲೇಔಟ್ ನ ಭರತ್ ಹಾಗೂ ಶ್ರಾವಣಿಗೆ ವಿವಾಹವಾಗಿತ್ತು. ಒಬ್ಬನೇ ಮಗ ಎನ್ನುವ ಕಾರಣಕ್ಕಾಗಿ ಅವರು ಕೇಳಿದಂತೆ ಬಿಬಿಎಂ ಓದುತ್ತಿದ್ದಂತ ಶ್ರಾವಣಿಯನ್ನು ತಂದೆ ನಿನ್ನ ತಾಯಿ ತೀರಿದಂತ ಒಂದು ವರ್ಷದ ಒಳಗೆ ಮದುವೆ ಮಾಡಿಕೊಳ್ಳಬೇಕು ಎಂಬುದಾಗಿ ಬಲವಂತ ಮಾಡಿ, ಮದುವೆ ಮಾಡಿದ್ದಾರೆ. ಹೀಗೆ ಮದುವೆಯಾದಾಗಿ ನಿಂದ ಒಂದೇ ಒಂದು ದಿನವೂ ನೆಮ್ಮದಿಯಿಂದ ಸಂಸಾರವನ್ನು ಭರತ್ ಹಾಗೂ ಶ್ರಾವಣಿ ನಡೆಸಿಲ್ಲವಂತೆ.
ಮದುವೆಯಾಗಿ ಮೊದಲ ರಾತ್ರಿಯ ದಿನದಂದೆ ಕಂಠಪೂರ್ತಿ ಕುಡಿದು ಬಂದ ಭರತ್,ಅಂದೇ ವಾಂತಿ ಮಾಡಿಕೊಂಡು ಅವಾಂತರವನ್ನೇ ಸೃಷ್ಠಿಸಿದ್ದಾನೆ. ಅಲ್ಲಿಂದ ಆರಂಭವಾದಂತ ಪತಿ ಭರತ್ ಮತ್ತೊಂದು ಮುಖದ ಅನಾವರಣ ಆಗಿದೆ.
ಇಲ್ಲಿಯವರೆಗೂ ನಿಂತಿಲ್ಲವಂತೆ. ಪ್ರತಿ ರಾತ್ರಿ ಕುಡಿಯೋದು, ಲೈಂಗಿಕ ಕ್ರಿಯೆಗೆ ಬಲವಂತ ಮಾಡೋದು ಮಾಡ್ತಾ ಇದ್ದನಂತೆ. ಅಲ್ಲದೇ ಮನೆಗೆ ವೇಶ್ಯೆಯರನ್ನು ಕರೆತಂದು ಅವರೊಂದಿಗೆ ಮಜಾ ಮಾಡೋದು ಎಲ್ಲಾ ಮಾಡ್ತಾ ಇದ್ದ ಎಂಬುದಾಗಿ ಪತ್ನಿ ಶ್ರಾವಣಿ ಹಾಗೂ ಅವರ ತಂದೆಯವರು ಆರೋಪಿಸಿದ್ದಾರೆ.
ಈ ಸಂಬಂಧ ಹೆಚ್ ಎಸ್ ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪತಿ ಭರತ್ ಕಿರುಕುಳಕ್ಕೆ ಬೇಸತ್ತು ಶ್ರಾವಣಿ ಹಾಗೂ ಅವರ ತಂದೆ ದೂರು ನೀಡಿದ್ದಾರೆ.
ಪತಿ ಭರತ್ ಕಿರುಕುಳಕ್ಕೆ ಸುಸ್ತೋ ಸುಸ್ತಾಗಿರುವಂತ ಶ್ರಾವಣಿ ಅವರ ಕಿರುಕುಳವನ್ನು ತಡೆಗಟ್ಟಿ, ತಮಗೆ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದಾರೆ. ಈ ಮೂಲಕ ಪತಿರಾಯನ ಈ ಅವತಾರಕ್ಕೆ ಪತ್ನಿ ಸುಸ್ತೋ ಸುಸ್ತು : ಫಸ್ಟ್ ನೈಟ್ ರಾದ್ಧಾಂತಕ್ಕೆ ಸಂಸಾರವೇ ಕಟ್ ಆಗುವ ಹಂತಕ್ಕೆ ಎರಡೇ ಎರಡು ತಿಂಗಳಲ್ಲಿ ಬಂದು ನಿಂತಿದೆ.