ಬೆಂಗಳೂರು –
ಚಳಿಗಾಲದ ಅಧಿವೇಶನಕ್ಕೆ ಮಹೂರ್ತ ನಿಗದಿಯಾಗಿದೆ. ಡಿಸೆಂಬರ್ 7 ರಿಂದ ಬೆಂಗಳೂರಿನಲ್ಲಿ ಅಧಿವೇಶನ ನಡೆಯಲಿದೆ.ದಿನಾಂಕ ನಿಗದಿಯಾಗಿದ್ದು ಡಿ.7 ರಿಂದ 15ರ ವರೆಗೆ ಅಧಿವೇಶನ ನಡೆಯಲಿದೆ ಎಂದು ಮುಖ್ಯಮಂತ್ರಿ ಬಿಎಸ್. ಯಡಿಯೂರಪ್ಪ
ಯಡಿಯೂರಪ್ಪ ಹೇಳಿದ್ದಾರೆ. ಸಾಮಾನ್ಯವಾಗಿ ಪ್ರತಿ ಬಾರಿ ಚಳಿಗಾಲದ ಅಧಿವೇಶನವನ್ನು ಕುಂದಾನಗರಿ ಬೆಳಗಾವಿಯಲ್ಲಿ ನಡೆಸಲಾಗುತ್ತಿತ್ತು ಆದರೆ ಈ ಬಾರಿ ಅಧಿವೇಶನವನ್ನು ಬೆಳಗಾವಿಯ ಬದಲಾಗಿ ಬೆಂಗಳೂರಿನಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಇವೆಲ್ಲದರ ನಡುವೆ ನಾಡದೋರೆ ಮುಖ್ಯಮಂತ್ರಿ ಈ ಮಾಹಿತಿಯನ್ನು ನೀಡಿ ನಂತರ ದೆಹಲಿಯತ್ತ ಪ್ರಯಾಣವನ್ನು ಬೆಳೆಸಿದ್ರು
ಸಿಎಂ ದೆಹಲಿಗೆ ಪ್ರಯಾಣ – ಸಂಪುಟ ಪುನಾರಚನೆ ಮಾಡ್ತಾರೋ ಇಲ್ಲವೇ ವಿಸ್ತರಣೆ ಆಗುತ್ತದೆಯೋ ಈ ವಿಚಾರ ಕುರಿತು ಚರ್ಚೆ ನಡೆಸಲು ಹೈಕಮಾಂಡ್ ಭೇಟಿ ಮಾಡಲು ಮುಖ್ಯಮಂತ್ರಿ ದೆಹಲಿಗೆ ತೆರಳಿದರು.
ಬೆಂಗಳೂರಿನಿಂದ ವಿಶೇಸ ವಿಮಾನದ ಮೂಲಕ ಬಿಎಸ್ ವೈ ದೆಹಲಿಗೆ ತೆರಳಿದರು. ದೆಹಲಿಯಿಂದ ಬಂದ ಬಳಿಕ ಸಂಪುಟ ಪುನಾರಚನೆ ನಡೆಯಲಿದೆ ಎಂಬ ಮಾತುಗಳು ಬಿಜೆಪಿ ಪಾಳಯದಲ್ಲಿ ಕೇಳಿ ಬರುತ್ತಿವೆ.